ಹುಡುಕಿ

ಕನ್ಸೆಟ್ಟಾ ಬ್ರೆಸಿಯಾ ಮೊರ್ರಾ ಅವರನ್ನು ವ್ಯಾಟಿಕನ್ನಿನ ಹಣಕಾಸು ಮಾಹಿತಿ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಿಸಿದ ಪೋಪ್ ಫ್ರಾನ್ಸಿಸ್

ವಿಶ್ವಗುರು ಫ್ರಾನ್ಸಿಸ್ ಅವರು ಖ್ಯಾತ ಆರ್ಥಿಕ ತಜ್ಞೆಯಾಗಿರುವ ಡಾ. ಕನ್ಸೆಟ್ಟಾ ಬ್ರೆಸಿಯಾ ಮೊರ್ರಾ ಅವರನ್ನು ವ್ಯಾಟಿಕನ್ನಿನ ಆರ್ಥಿಕ ಹಾಗೂ ಹಣಕಾಸು ಮಾಹಿತಿ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ವಿಶ್ವಗುರು ಫ್ರಾನ್ಸಿಸ್ ಅವರು ಖ್ಯಾತ ಆರ್ಥಿಕ ತಜ್ಞೆಯಾಗಿರುವ ಡಾ. ಕನ್ಸೆಟ್ಟಾ ಬ್ರೆಸಿಯಾ ಮೊರ್ರಾ ಅವರನ್ನು ವ್ಯಾಟಿಕನ್ನಿನ ಆರ್ಥಿಕ ಹಾಗೂ ಹಣಕಾಸು ಮಾಹಿತಿ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಿಸಿದ್ದಾರೆ.

ಇದಕ್ಕೂ ಮುಂಚಿತವಾಗಿ ಈ ಪ್ರಾಧಿಕಾರದ ಸದಸ್ಯರಾಗಿದ್ದ ಡಾ. ಅಂಟೋನೆಲ್ಲಾ ಸಿಯಾರೋನೆ ಅಲಿಬ್ರಾಂದಿ ಅವರನ್ನು ಇಟಾಲಿಯನ್ ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇವರಿಂದ ತೆರವಾದ ಸ್ಥಾನಕ್ಕೆ ಡಾ. ಕನ್ಸೆಟ್ಟಾ ಬ್ರೆಸಿಯಾ ಮೊರ್ರಾ ಅವರನ್ನು ನೇಮಿಸಿದ್ದಾರೆ.

ಪ್ರಸ್ತುತ ಡಾ. ಕನ್ಸೆಟ್ಟಾ ಬ್ರೆಸಿಯಾ ಮೊರ್ರಾ ಅವರು ರೋಮ್ ವಿಶ್ವವಿದ್ಯಾನಿಲಯದಲ್ಲಿ ಆರ್ಥಿಕ ಕಾನೂನಿನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ವಿಶ್ವವಿದ್ಯಾನಿಲಯದಲ್ಲಿ ಹಣಕಾಸು ಹಾಗೂ ಬ್ಯಾಂಕಿಂಗ್ ಕಾನೂನುಗಳನ್ನು ವಿದ್ಯಾರ್ಥಿಗಳಿಗೆ ಭೋದಿಸುತ್ತಿದ್ದಾರೆ ಎಂದು ವರದಿಯಾಗಿದೆ.

25 July 2024, 17:12