2024.07.20 Parolin a Odessa. Visita alla cattedrale ortodossa della Trasfigurazione 2024.07.20 Parolin a Odessa. Visita alla cattedrale ortodossa della Trasfigurazione 

ಕಾರ್ಡಿನಲ್ ಪರೋಲಿನ್: ಉಕ್ರೇನ್ ಪರಿಸ್ಥಿತಿಗೆ ಪೋಪ್ ಬೇಸರ ಮತ್ತು ನೋವನ್ನು ವ್ಯಕ್ತಪಡಿಸಿದ್ದಾರೆ

ಪೋಪ್ ಫ್ರಾನ್ಸಿಸ್ ಅವರ ಪ್ರತಿನಿಧಿಯಾಗಿ ಪ್ರಸ್ತುತ ಯುದ್ಧ ನಿರತ ಉಕ್ರೇನ್ ದೇಶಕ್ಕೆ ಭೇಟಿಯನ್ನು ನೀಡಿರುವ ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಅಲ್ಲಿನ ಧರ್ಮಾಧ್ಯಕ್ಷರು, ಗುರುಗಳು ಹಾಗೂ ಜನರಿಗೆ ಪೋಪ್ ಫ್ರಾನ್ಸಿಸ್ ಅವರ ಐಕ್ಯತೆಯನ್ನು ವ್ಯಕ್ತಪಡಿಸಿದ್ದಾರೆ.

ವರದಿ: ಜೋಸೆಫ್ ಟಲ್ಲೋಚ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರ ಪ್ರತಿನಿಧಿಯಾಗಿ ಪ್ರಸ್ತುತ ಯುದ್ಧ ನಿರತ ಉಕ್ರೇನ್ ದೇಶಕ್ಕೆ ಭೇಟಿಯನ್ನು ನೀಡಿರುವ ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಅಲ್ಲಿನ ಧರ್ಮಾಧ್ಯಕ್ಷರು, ಗುರುಗಳು ಹಾಗೂ ಜನರಿಗೆ ಪೋಪ್ ಫ್ರಾನ್ಸಿಸ್ ಅವರ ಐಕ್ಯತೆಯನ್ನು ವ್ಯಕ್ತಪಡಿಸಿದ್ದಾರೆ.  

ಇದೇ ವೇಳೆ ಅವರು ಯುದ್ಧದ ಕಾರಣದಿಂದ ಇಲ್ಲಿ ಉಂಟಾಗುತ್ತಿರುವ ಸಾವುಗಳಿಗೆ, ಅಪಾರ ಆಸ್ತಿಪಾಸ್ತಿ ನಷ್ಟಕ್ಕೆ ಹಾಗೂ ಜನರ ಬವಣೆಗೆ ತಮ್ಮ ಬೇಸರ ಹಾಗೂ ನೋವನ್ನು ವ್ಯಕ್ತಪಡಿಸಿದ್ದಾರೆ ಎಂದು ಕಾರ್ಡಿನಲ್ ಪರೋಲಿನ್ ಅವರು ಎಲ್ಲರಿಗೂ ತಿಳಿಸಿದರು. ಮುಂದುವರೆದು ಮಾತನಾಡಿದ ಅವರು "ಪೋಪ್ ಫ್ರಾನ್ಸಿಸ್ ಅವರು ನಿಮ್ಮೆಲ್ಲರಿಗೂ ಪ್ರಾರ್ಥನೆಗಳ ಭರವಸೆಯನ್ನು ಹಾಗೂ ತಮ್ಮ ಐಕ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿನ ಪರಿಸ್ಥಿತಿಯ ಕುರಿತು ಅವರಿಗೆ ಅಪಾರ ಮರುಕವಿದೆ" ಎಂದು ಸಹ ಹೇಳಿದ್ದಾರೆ.

ಶನಿವಾರ ಇಲ್ಲಿನ ಕಥೋಲಿಕ ಕ್ರೈಸ್ತ ಪ್ರಧಾನಾಲಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕಾರ್ಡಿನಲ್ ಪರೋಲಿನ್ ಅವರು ಅಲ್ಲಿನ ಧರ್ಮಾಧ್ಯಕ್ಷರು ಹಾಗೂ ಗುರುಗಳಿಂದ ಪ್ರಸ್ತುತ ಸ್ಥಿತಿಗತಿಯ ಮಾಹಿತಿಯನ್ನು ಪಡೆದರು. ಇದೇ ವೇಳೆ ಅವರಿಗೆ ಸಾಂತ್ವನವನ್ನು ಹಾಗೂ ತಮ್ಮ ಪ್ರಾರ್ಥನೆಗಳ ಭರವಸೆಯನ್ನೂ ಸಹ ನೀಡಿದರು. ಪೋಪ್ ಫ್ರಾನ್ಸಿಸ್ ಅವರ ಪ್ರತಿನಿಧಿಯಾಗಿ ಅಲ್ಲಿಗೆ ಪ್ರಯಾಣವನ್ನು ಕೈಗೊಂಡಿರುವ ಅವರು ಅಲ್ಲಿನ ಜನತೆಗೆ ಪವಿತ್ರ ತಂದೆಯ ಆಶೀರ್ವಾದಗಳನ್ನು ನೀಡಿದ್ದಾರೆ ಮಾತ್ರವಲ್ಲದೆ ಅವರ ಕಾಳಜಿಯನ್ನೂ ಸಹ ವ್ಯಕ್ತಪಡಿಸಿದ್ದಾರೆ.     

20 July 2024, 19:26