ಎರಡನೇ ಸಿನೋಡ್ ಸಮಾವೇಶದಲ್ಲಿ ಮಹಿಳೆಯರು ಹಾಗೂ ದಾಖಲೆಗಳಲ್ಲಿ ಉತ್ತರದಾಯಿತ್ವದ ಕುರಿತು ಮನ್ನಣೆ
ವರದಿ: ಇಸಾಬೆಲ್ಲಾ ಪೀರೋ, ಅಜಯ್ ಕುಮಾರ್
ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಸಿನೋಡ್ ಸಮಾವೇಶಕ್ಕೆ ಮಾರ್ಗದರ್ಶಿಯಾಗಿರುವ "ಇನ್ಸ್ತ್ರುಮೆಂತುಮ್ ಲಬೋರಿಸ್" ಅನ್ನು ಬಿಡುಗಡೆ ಮಾಡಿರುವ ವ್ಯಾಟಿಕನ್ ಮಾಧ್ಯಮ ಕಚೇರಿಯು, ಸದರಿ ದಾಖಲೆಯಲ್ಲಿ ಮಹಿಳೆಯರು ಹಾಗೂ ದಾಖಲೆಗಳಲ್ಲಿ ಉತ್ತರದಾಯಿತ್ವದ ಕುರಿತು ಹೆಚ್ಚಿನ ಚಿಂತನೆಯನ್ನು ನಡೆಸಲು ಚಿಂತಿಸಿದೆ.
2023ರಲ್ಲಿ ಮೊದಲ ಸಿನೋಡ್ ಸಮಾವೇಶ ನಡೆದಿದ್ದು ಪ್ರಸ್ತುತ ಅಕ್ಟೋಬರ್ ತಿಂಗಳಲ್ಲಿ ನಡೆಯುತ್ತಿರುವ ಸಮಾವೇಶವು ಎರಡನೆಯ ಸಿನೋಡ್ ಸಮಾವೇಶವಾಗಿರಲಿದೆ. ವ್ಯಾಟಿಕನ್ನಿನ ಮಾಧ್ಯಮ ಕಚೇರಿಯು ಈ ಕುರಿತ ವಿವರವಾದ ಕಾರ್ಯಕ್ರಮ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ.
ಈ ದಾಖಲೆಯು ಐದು ಭಾಗಗಳನ್ನು ಒಳಗೊಂಡಿದ್ದು, ಧರ್ಮಸಭೆಯಲ್ಲಿ ಮಹಿಳೆಯರ ಪಾತ್ರ ಹಾಗೂ ದಾಖಲೆಗಳಲ್ಲಿ ಉತ್ತರದಾಯಿತ್ವ ಎಂಬ ವಿಷಯಗಳ ಕುರಿತು ಹೆಚ್ಚಿನ ಗಮನವನ್ನು ನೀಡಲಾಗಿದೆ. ಧರ್ಮಸಭೆಯ ವಿವಿಧ ಅಧಿಕೃತ ದಾಖಲೆಗಳು ಹೇಗೆ ಮಹಿಳೆಯರ ಜವಾಬ್ದಾರಿ ಹಾಗೂ ಪಾತ್ರದ ಕುರಿತು ನಿರ್ದೇಶನಗಳನ್ನು ನೀಡಿದೆ ಹಾಗೂ ಪ್ರಸ್ತುತ ಧರ್ಮಸಭೆಯಲ್ಲಿ ಮಹಿಳೆಯರಿಗೆ ಯಾವ ರೀತಿಯ ಪ್ರಾಶಸ್ತ್ಯ ನೀಡಲಾಗಿದೆ ಎಂಬುದರ ಕುರಿತು ಚರ್ಚೆಗಳು ನಡೆಯಲಿವೆ. ಇದೆ ವೇಳೆ ಉತ್ತರದಾಯಿತ್ವದ ವಿಚಾರದಲ್ಲಿ ಧರ್ಮಸಭೆಯ ಧರ್ಮಗುರುಗಳು ಯಾವ ರೀತಿ ನಡೆದುಕೊಳ್ಳಬೇಕು ಎಂಬುದರ ಕುರಿತು ಸಹ ಸಂವಾದಗಳು ನಡೆಯಲಿವೆ.