ಗಾಜಾ ಪ್ರದೇಶಕ್ಕೆ ನೆರವನ್ನು ಮುಂದುವರೆಸುತ್ತೇವೆ ಎಂದ ವ್ಯಾಟಿಕನ್ ಪೀಠ
ವಿಶ್ವಸಂಸ್ಥೆಯಲ್ಲಿ ವ್ಯಾಟಿಕನ್ ಪೀಠದ ಶಾಶ್ವತ ವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಆರ್ಚ್'ಬಿಷಪ್ ಗ್ಯಾಬ್ರಿಯೆಲ್ ಕಾಚಿಯಾ ಅವರು ಇಂದಿನ ಸಭೆಯಲ್ಲಿ ವ್ಯಾಟಿಕನ್ ಪೀಠವು ಪ್ಯಾಲೆಸ್ತೀನ್ ದೇಶದ ನಿರಾಶ್ರಿತರಿಗೆ ನೀಡುತ್ತಿರುವ ಮಾನವೀಯ ನೆರವನ್ನು ಮುಂದುವರೆಸಲು ಬಯಸುತ್ತದೆ ಎಂದು ಹೇಳಿದ್ದಾರೆ.
ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್
ವಿಶ್ವಸಂಸ್ಥೆಯಲ್ಲಿ ವ್ಯಾಟಿಕನ್ ಪೀಠದ ಶಾಶ್ವತ ವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಆರ್ಚ್'ಬಿಷಪ್ ಗ್ಯಾಬ್ರಿಯೆಲ್ ಕಾಚಿಯಾ ಅವರು ಇಂದಿನ ಸಭೆಯಲ್ಲಿ ವ್ಯಾಟಿಕನ್ ಪೀಠವು ಪ್ಯಾಲೆಸ್ತೀನ್ ದೇಶದ ನಿರಾಶ್ರಿತರಿಗೆ ನೀಡುತ್ತಿರುವ ಮಾನವೀಯ ನೆರವನ್ನು ಮುಂದುವರೆಸಲು ಬಯಸುತ್ತದೆ ಎಂದು ಹೇಳಿದ್ದಾರೆ.
ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯುತ್ತಿರುವ ಯುದ್ಧವು ದಿನೇ ದಿನೇ ಹೆಚ್ಚು ಹೆಚ್ಚು ವಿನಾಶವನ್ನು ಮಾಡುತ್ತಿರುವ ವೇಳೆಯಲ್ಲಿ ವ್ಯಾಟಿಕನ್ ಪೀಠವು ಯುದ್ಧದ ನಿರಾಶ್ರಿತರಿಗೆ ಆರ್ಥಿಕ ಹಾಗೂ ಹಣಕಾಸಿನ ನೆರವು ನೀಡುವುದನ್ನು ಮುಂದುವರೆಸಿರುವುದಾಗಿ ಘೋಷಿಸಿದೆ ಮಾತ್ರವಲ್ಲದೆ; ಮಾನವೀಯ ನೆರವನ್ನು ನೀಡುತ್ತಿರುವ ವಿಶ್ವಸಂಸ್ಥೆಯ ಏಜೆನ್ಸಿಗೆ ಈ ಹಣವನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.
ಈ ನೆರವನ್ನು ನೀಡುವುದು ಮಾತ್ರವಲ್ಲದೆ, ವ್ಯಾಟಿಕನ್ ಪೀಠವು ಇತರ ದೇಶಗಳಿಗೂ ಸಹ ಈ ದಿಸೆಯಲ್ಲಿ ನೆರವನ್ನು ನೀಡುವಂತೆ ಮನವಿ ಮಾಡಿಕೊಂಡಿದೆ.
13 July 2024, 17:56