ಕಾರ್ಡಿನಲ್ ಪರೋಲಿನ್: ಯುದ್ಧದಿಂದ ಯಾರಿಗೂ ಲಾಭವಿಲ್ಲ
ವರದಿ: ವ್ಯಾಟಿಕನ್ ನ್ಯೂಸ್
ಅಸ್ಸಿಸಿಯ ಸಂತ ಕ್ಲಾರಾ ಅವರ ಹಬ್ಬದ ದಿನದಂದು ಇಟಲಿಯ ಉಂಬ್ರಿಯಾ ಪ್ರಾಂತ್ಯದಲ್ಲಿ ಬಲಿಪೂಜೆಯನ್ನು ಅರ್ಪಿಸಿದ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು "ಯುದ್ಧದಿಂದ ಯಾರಿಗೂ ಲಾಭವಿಲ್ಲ" ಎಂದು ಹೇಳುವ ಮೂಲಕ ಪೋಪ್ ಫ್ರಾನ್ಸಿಸರ ಮಾತುಗಳನ್ನು ಉದ್ಘರಿಸಿದ್ದಾರೆ.
ನಿನ್ನೆ ಭಾನುವಾರ ಪೋಪ್ ಫ್ರಾನ್ಸಿಸ್ ಅವರು ದೇವದೂತನ ಸಂದೇಶ ಪ್ರಾರ್ಥನೆಯ ನಂತರ ಭಕ್ತಾಧಿಗಳನ್ನು ಉದ್ದೇಶಿಸಿ ನೀಡಿದ ಪ್ರಭೋದನೆಯಲ್ಲಿ ವಿಶ್ವ ಶಾಂತಿಗಾಗಿ ಪ್ರಾರ್ಥಿಸುವುದೂ ಸೇರಿದಂತೆ ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳು ನಿಲ್ಲಬೇಕೆಂದು ಮನವಿ ಮಾಡಿಕೊಂಡಿದ್ದರು.
ಕಾರ್ಡಿನಲ್ ಪಿಯೆತ್ರೋ ಪರೋಲಿನ್ ಅವರು ಪೋಪ್ ಫ್ರಾನ್ಸಿಸರ ಮಾತುಗಳನ್ನು ಈ ಬಲಿಪೂಜೆಯಲ್ಲಿ ಪುನರಾವರ್ತಿಸಿದ್ದಾರೆ. ಅಸ್ಸಿಸಿ ನಗರದಿಂದ ಇಡೀ ವಿಶ್ವಕ್ಕೆ ನಾನು ಮಾಡುವ ವಿಜ್ಞಾಪನೆ ಏನೆಂದರೆ, ಪವಿತ್ರ ತಂದೆ ಪೋಪ್ ಫ್ರಾನ್ಸಿಸರು ಹೇಳುವಂತೆ ಯುದ್ಧ ಎಂಬುದು ಎಂದಿಗೂ ಸೋಲಾಗಿದ್ದು, ಇದರಿಂದ ಯಾರಿಗೂ ಲಾಭವಿಲ್ಲ. ಆದ್ದರಿಂದ ತುರ್ತಾಗಿ ಎಲ್ಲಾ ಯುದ್ಧಗಳನ್ನು ನಿಲ್ಲಿಸಬೇಕಿದೆ" ಎಂದು ಹೇಳಿದರು.
ಸಮಾಜದಲ್ಲಿ ಕ್ರೈಸ್ತ ವಿಶ್ವಾಸಿಗಳಾಗಿ ಬದುಕುತ್ತಿರುವ ನಾವು ಸಂತ ಕ್ಲಾರಾ ಅವರ ಆದರ್ಶಗಳನ್ನು ಬದುಕಿನಲ್ಲಿ ಆಳವಡಿಸಿಕೊಳ್ಳಬೇಕಿದೆ ಎಂದು ಕಾರ್ಡಿನಲ್ ಪರೋಲಿನ್ ಎಲ್ಲರಿಗೂ ಕರೆ ನೀಡಿದರು.