ಹುಡುಕಿ

ಇರಾನಿನ ನೂತನ ಅಧ್ಯಕ್ಷರಿಗೆ ಕರೆ ಮಾಡಿ ಮಾತನಾಡಿದ ಕಾರ್ಡಿನಲ್ ಪರೋಲಿನ್

ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಇರಾನ್ ದೇಶದ ನೂತನ ಅಧ್ಯಕ್ಷರಾದ ಮಹಮೂದ್ ಪೆಜೆಶ್ಕಿಯಾನ್ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಈ ಕರೆಯಲ್ಲಿ ಅವರು ಉಭಯ ದೇಶಗಳ ನಡುವಿನ ಸಮಾನ ಆಸಕ್ತಿಗಳ ಕುರಿತು ಚರ್ಚಿಸಿದ್ದಾರೆ. ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕುರಿತೂ ಸಹ ಮಾತುಕತೆ ನಡೆದಿದೆ.

ವರದಿ: ವ್ಯಾಟಿಕನ್ ನ್ಯೂಸ್

ಕಾರ್ಡಿನಲ್ ಪರೋಲಿನ್ ಹಾಗೂ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಅವರ ಕರೆಯ ಕುರಿತು ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿರುವ ವ್ಯಾಟಿಕನ್ ಮಾಧ್ಯಮ ಪೀಠವು, ಈ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಿದೆ.

ಕಾರ್ಡಿನಲ್ ಪರೋಲಿನ್ ಅವರು ತಮ್ಮ ಮಾತುಕತೆಯಲ್ಲಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕುರಿತು ಕಳವಳವನ್ನು ವ್ಯಕ್ತಪಡಿಸಿ, ಹೇಗಾದರೂ ಈ ಯುದ್ಧವನ್ನು ಕೊನೆಗಾಣಿಸಲೇ ಬೇಕು ಎಂಬುದರ ಕುರಿತು ಮಾತನಾಡಿದ್ದಾರೆ ಮಾತ್ರವಲ್ಲದೆ ಈ ನಿಟ್ಟಿನಲ್ಲಿ ಯಾವುದೇ ರೀತಿಯ ನೆರವನ್ನು ನೀಡಲು ಪವಿತ್ರ ತಂದೆ ಪೋಪ್ ಫ್ರಾನ್ಸಿಸ್ ಹಾಗೂ ಪವಿತ್ರ ಪೀಠವು ಸಿದ್ಧವಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಅವರು ನೂತನವಾಗಿ ಇರಾನ್ ದೇಶದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಮಹಮೂದ್ ಪೆಜೆಶ್ಕಿಯಾನ್ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

12 August 2024, 15:48