ಪೆಲಿವೋಸಿನ್ ಎಂಬ ಫ್ರಾನ್ಸ್ ದೇಶದ ಹಳ್ಳಿಯಲ್ಲಿನ ಕಾರುಣ್ಯ ಮಾತೆಯ ಭಕ್ತಿಯಾಚರಣೆಯನ್ನು ಅನುಮೋದಿಸಿದ ವ್ಯಾಟಿಕನ್ ಪೀಠ
ವ್ಯಾಟಿಕನ್ನಿನ ವಿಶ್ವಾಸ ಪೀಠವು ಫ್ರಾನ್ಸ್ ದೇಶದ ಪೆಲಿವೋಸಿನ್ ಎಂಬ ಪುಟ್ಟ ಪಟ್ಟಣದಲ್ಲಿ 1876 ರಲ್ಲಿ ಎಸ್ತೆಲ್ಲೇ ಫಗೂಟೆ ಎಂಬ ವ್ಯಕ್ತಿಗೆ ಮಾತೆ ಮರಿಯಮ್ಮನವರ ದರ್ಶನವಾದ ಪರಿಣಾಮ, ಭಕ್ತಿ ಆಚರಣೆ ಆರಂಭವಾಯಿತು. ಸುದೀರ್ಘ ಪರೀಕ್ಷೆಯ ನಂತರ ಈ ಭಕ್ತಿ ಆಚರಣೆಗೆ ವ್ಯಾಟಿಕನ್ ಪೀಠವು ಅನುಮೋದನೆಯನ್ನು ನೀಡಿದೆ.
ವರದಿ: ವ್ಯಾಟಿಕನ್ ನ್ಯೂಸ್

ಈ ಕುರಿತು ಬೋರ್ಜಸ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರು ಬರೆದಿರುವ ಪತ್ರಕ್ಕೆ ಪ್ರತ್ಯುತ್ತರ ನೀಡಿರುವ ಕಾರ್ಡಿನಲ್ ವಿಕ್ಟರ್ ಮ್ಯಾನುಯೇಲ್ ಫರ್ನಾಂಡಿಸ್ ಅವರು ಈ ಆಚರಣೆಗೆ ಪೋಪರ ಅನುಮತಿ ಪತ್ರವನ್ನು ನೀಡಿದ್ದಾರೆ.
ಈ ಪ್ರದೇಶದಲ್ಲಿ ಮಾತೆ ಮರಿಯಮ್ಮನವರನ್ನು "ಕರುಣೆಯ ಮಾತೆ" ಅಥವಾ "ಕಾರುಣ್ಯ ಮಾತೆ" ಎಂದು ಭಕ್ತಿಯಿಂದ ಗೌರವಿಸಲಾಗುತ್ತದೆ.
30 August 2024, 14:15