ಹುಡುಕಿ

ಪವಿತ್ರ ಪೀಠ: ತಂತ್ರಜ್ಞಾನ ಮಾನವ ಬದುಕನ್ನು ಉತ್ತಮಪಡಿಸಬೇಕೆ ಹೊರತು ನಾಶ ಮಾಡಬಾರದು

ಪವಿತ್ರ ಪೀಠವು ವಿನಾಶಕಾರಿ ಆಯುಧಗಳ ನಿರ್ಮಾಣದ ಕುರಿತು ವಿರೋಧವನ್ನು ವ್ಯಕ್ತಪಡಿಸುವ ಮೂಲಕ ಪೋಪ್ ಫ್ರಾನ್ಸಿಸ್ ಅವರ ಅಭಿಪ್ರಾಯವನ್ನು ಪುನರಾವರ್ತಿಸಿದ್ದು, ತಂತ್ರಜ್ಞಾನವು ಮಾನವರ ಬದುಕನ್ನು ಉತ್ತಮಪಡಿಸಬೇಕೆ ಹೊರತು ಅದನ್ನು ವಿನಾಶ ಮಾಡಬಾರದು ಎಂದು ತಿಳಿಸಿದೆ.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ಪವಿತ್ರ ಪೀಠವು ವಿನಾಶಕಾರಿ ಆಯುಧಗಳ ನಿರ್ಮಾಣದ ಕುರಿತು ವಿರೋಧವನ್ನು ವ್ಯಕ್ತಪಡಿಸುವ ಮೂಲಕ ಪೋಪ್ ಫ್ರಾನ್ಸಿಸ್ ಅವರ ಅಭಿಪ್ರಾಯವನ್ನು ಪುನರಾವರ್ತಿಸಿದ್ದು, ತಂತ್ರಜ್ಞಾನವು ಮಾನವರ ಬದುಕನ್ನು ಉತ್ತಮಪಡಿಸಬೇಕೆ ಹೊರತು ಅದನ್ನು ವಿನಾಶ ಮಾಡಬಾರದು ಎಂದು ತಿಳಿಸಿದೆ. 

ಜಿನೀವಾದಲ್ಲಿ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಇತ್ತೀಚೆಗೆ ಆರ್ಚ್'ಬಿಷಪ್ ಎತ್ತೋರೆ ಬಲೆಸ್ತ್ರೆರೋ ಅವರು ಮಾತನಾಡಿ ವಿನಾಶಕಾರಿ ಆಯುಧಗಳ ನಿರ್ಮಿಸುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ. ಹೆಚ್ಚುತ್ತಿರುವ ತಂತ್ರಜ್ಞಾನ ಎಂಬ ವಿಷಯದ ಕುರಿತು ವಿಶ್ವಸಂಸ್ಥೆ ಹಾಗೂ ಪವಿತ್ರ ಪೀಠದ ಶಾಶ್ವತ ವೀಕ್ಷಕರು ಮಾತುಕತೆ ಹಾಗೂ ಚರ್ಚೆಯನ್ನು ನಡೆಸಿದ್ದಾರೆ ಎಂದು ವರದಿಯಾಗಿದೆ.

ಪೋಪ್ ಫ್ರಾನ್ಸಿಸ್ ಅವರು ವಿನಾಶಕಾರಿ ಆಯುಧಗಳ ನಿರ್ಮಾಣದ ಕುರಿತು ಹಿಂದೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಎಂದಿಗೂ ಸಹ ವಿನಾಶಕಾರಿ ಆಯುಧಗಳ ನಿರ್ಮಾಣವನ್ನು ಯಾವ ಕಾರಣಕ್ಕಾಗಿಯೂ ಸಹ ನಾವು ಪ್ರೋತ್ಸಾಹಿಸಬಾರದು. ಯಾವುದೇ ತಂತ್ರಜ್ಞಾನ ಅಥವಾ ಯಂತ್ರವು ಮಾನವ ಜೀವವನ್ನು ತೆಗೆಯಬಾರದು ಹಾಗೂ ತೆಗೆಯಲು ಬಿಡಬಾರದು ಎಂದು ಅವರು ಹೇಳಿದ್ದರು.

ಇಂತಹ ವಿನಾಶಕಾರಿ ಆಯುಧಗಳ ನಿರ್ಮಾಣದ ವಿರುದ್ಧ ಎಂದಿಗೂ ಪವಿತ್ರಪೀಠವಿರುತ್ತದೆ ಎಂದು ಆರ್ಚ್'ಬಿಷಪ್ ಎತ್ತೋರೆ ಬಲೆಸ್ತ್ರೆರೋ ಅವರು ಹೇಳಿದ್ದಾರೆ.

29 August 2024, 18:24