ಪಪುವಾ ನ್ಯೂಗಿನಿಯಲ್ಲಿ ವೈವಿಧ್ಯತೆಯ ನಡುವೆಯೂ ಶುಭಸಂದೇಶದ ಮೌಲ್ಯಗಳಿಗೆ ಸಾಕ್ಷಿಯಾದ ಸುವಾರ್ತಾ ಪ್ರಸಾರಕರು
ವರದಿ: ಕ್ಲಾಡಿಯಾ ತೋರೆಸ್, ಅಜಯ್ ಕುಮಾರ್
ಸೆಪ್ಟೆಂಬರ್ ತಿಂಗಳಲ್ಲಿ ಪಪುವಾ ನ್ಯೂಗಿನಿ ಎಂಬ ಪುಟ್ಟ ದೇಶವು ಪೋಪ್ ಫ್ರಾನ್ಸಿಸ್ ಅವರನ್ನು ಸ್ವಾಗತಿಸಲು ಸಿದ್ಧತೆಯನ್ನು ನಡೆಸಿದೆ. ಇಲ್ಲಿನ ದೂರದ ಊರುಗಳು ಹಾಗೂ ಸಮುದಾಯಗಳಿಗೆ ಶಿಕ್ಷಣ ಹಾಗೂ ಸಮಾಜ ಸೇವೆಯನ್ನು ನೀಡುವ ಮೂಲಕ ಯೇಸುವಿನ ಪವಿತ್ರ ಹೃದಯದ ಧಾರ್ಮಿಕ ಸಭೆಯ ಗುರುಗಳು ಶುಭಸಂದೇಶವನ್ನು ಸಾರುತ್ತಿದ್ದಾರೆ.
ಇಲ್ಲಿನ ಸುಮಾರು ಏಳು ಧರ್ಮಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಧಾರ್ಮಿಕ ಸಭೆಯ ಸುವಾರ್ತಾ ಪ್ರಸಾರಕ ಗುರುಗಳು ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ಸಾಮುದಾಯಿಕ ಸೇವಾಕಾರ್ಯಗಳನ್ನು ಆರಂಭಿಸುತ್ತಿದ್ದಾರೆ. ಪ್ರತಿ ದೇವಾಲಯಕ್ಕೆ ಹೊಂದಿಕೊಂಡಂತೆ ಇಲ್ಲಿ ಶಾಲೆಗಳಿವೆ ಏಕೆಂದರೆ ಇಲ್ಲಿನ ಯೇಸುವಿನ ಪವಿತ್ರ ಹೃದಯದ ಸಭೆಯ ಗುರುಗಳ ಪ್ರಾಂತ್ಯಾಧಿಕಾರಿಯಾದಂತಹ ಫಾದರ್ ವಾಂಕಾಯ್ ಅವರು ಇಲ್ಲಿ ಕ್ರೈಸ್ರ ವಿಶ್ವಾಸವನ್ನು ಪಸರಿಸಬೇಕೆಂದರೆ ಶಾಲೆಗಳೇ ನಿರ್ಣಾಯಕವಾಗಿವೆ ಎಂದು ಹೇಳಿದ್ದಾರೆ.
ಅನೇಕ ದುರ್ಗಮ ಪ್ರದೇಶಗಳಲ್ಲೂ ಸಹ ಈ ಧಾರ್ಮಿಕ ಸಭೆಯ ಗುರುಗಳು ತಮ್ಮ ಅನುಪಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಪೋಪ್ ಫ್ರಾನ್ಸಿಸ್ ಅವರು ಈ ದೇಶಕ್ಕೆ ಭೇಟಿ ನೀಡಲಿದ್ದಾರೆ.