ಭಾರತದ ವೇಲಾಂಕಣಿ ಪುಣ್ಯಕ್ಷೇತ್ರವನ್ನು ಶ್ಲಾಘಿಸಿದ ಪೋಪ್ ಫ್ರಾನ್ಸಿಸ್

ವ್ಯಾಟಿಕನ್ನಿನ ವಿಶ್ವಾಸ ಪೀಠದ ಉಸ್ತುವಾರಿಗಳಾಗಿರುವ ಕಾರ್ಡಿನಲ್ ವಿಕ್ಟರ್ ಮ್ಯಾನುವೇಲ್ ಫರ್ನಾಂಡಿಸ್ ಅವರು ಭಾರತದ ತಮಿಳುನಾಡಿನಲ್ಲಿರುವ ತಂಜಾವೂರು ಧರ್ಮಕ್ಷೇತ್ರದ ವೇಲಾಂಕಣಿ ಪುಣ್ಯಕ್ಷೇತ್ರದ ಕುರಿತು ಆ ಧರ್ಮಕ್ಷೇತ್ರದ ನಿಯೋಜಿ ಧರ್ಮಾಧ್ಯಕ್ಷ ಮೊನ್ಸಿಜ್ಞೊರ್ ಸಗಾಯರಾಜ್ ತಂಬುರಾಜ್ ಅವರಿಗೆ ಪತ್ರವನ್ನು ಬರೆದಿದ್ದು, ವೆಲಾಂಕಣಿಯಲ್ಲಿ ನಿಜವಾಗಿಯೂ ಮಾತೆ ಮರಿಯಮ್ಮನವರ ಉಪಸ್ಥಿತಿ ಇದೆ ಮಾತ್ರವಲ್ಲದೆ ಇಲ್ಲಿ ಪವಿತ್ರಾತ್ಮರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಕಾರ್ಡಿನಲ್ ಫರ್ನಾಂಡಿಸ್ ಅವರ ಈ ಪತ್ರವನ್ನು ಪೋಪ್ ಫ್ರಾನ್ಸಿಸ್ ಅವರು ಅನುಮೋದಿಸಿದ್ದಾರೆ. ಈ ಮೂಲಕ ಈ ಪುಣ್ಯಕ್ಷೇತ್ರಕ್ಕೆ ತಮ್ಮ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ.

ಮುಂದುವರೆದು ಮಾತನಾಡಿರುವ ಕಾರ್ಡಿನಲ್ ಫರ್ನಾಂಡಿಸ್ ಅವರು ಅನೇಕ ಕ್ರೈಸ್ತೇತರರೂ ಸಹ ಪವಿತ್ರಾತ್ಮರ ಅನುಭವನ್ನು ಪಡೆದಿದ್ದಾರೆ ಎಂಬುದು ನಮಗೆ ತಿಳಿದಿವೆ ಎಂದು ಹೇಳಿದ್ದಾರೆ. "ಮಾತೆ ಮರಿಯಮ್ಮನವರ ಭಿನ್ನಹಗಳಿಂದ ಪವಿತ್ರಾತ್ಮರನ್ನು ಪಡೆದುಕೊಂಡಿರುವ ಇವರು ಅನೇಕ ಖಾಯಿಲೆಗಳಿಂದ ಸ್ವಸ್ಥವಾಗಿದ್ದಾರೆ ಮಾತ್ರವಲ್ಲದೆ ಅವರಲ್ಲಿ ಪವಿತ್ರಾತ್ಮರು ಕಾರ್ಯಯನಿರ್ವಹಿಸುತ್ತಿದ್ದಾರೆ ಎಂಬುದು ನಂಬುತ್ತಾರೆ." ಎಂದು ಹೇಳಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಈ ಪುಣ್ಯಕ್ಷೇತ್ರದ ಆಧ್ಯಾತ್ಮಿಕ ಸೌಂದರ್ಯಕ್ಕೆ ಮನಸೋತು, ಇದನ್ನು ಬಣ್ಣಿಸಿದ್ದಾರೆ ಎಂದು ಕಾರ್ಡಿನಲ್ ವಿಕ್ಟರ್ ಮ್ಯಾನುವೇಲ್ ಫರ್ನಾಂಡಿಸ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.

06 August 2024, 18:29