ಜೀವನದಲ್ಲಿ ಅವಶ್ಯಕವಾದುದನ್ನು ನಾವು ಧ್ಯಾನಿಸಬೇಕು: ರಿಮಿನಿ ಸಭೆ
ವರದಿ: ಬೆನೆಡಿಕ್ಟಾ ಕಪೆಲ್ಲಿ, ಲೂಕಾ ಕೊಲ್ಲೋಡಿ, ಅಜಯ್ ಕುಮಾರ್
ಇಟಲಿಯ ರಿಮಿನಿ ನಗರದಲ್ಲಿ ನಡೆಯುತ್ತಿರುವ ಸಭೆಗಳಲ್ಲಿ ವಿಶ್ವದಾದ್ಯಂತ ಕ್ರೈಸ್ತರು ತಮ್ಮ ಜೀವನದಲ್ಲಿ ಅತ್ಯವಶ್ಯಕವಾದವುಗಳು ಯಾವುವು ಎಂಬ ಕುರಿತು ಚಿಂತಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇಟಲಿಯ ರಿಮಿನಿ ನಗರದಲ್ಲಿ ನಾಗರೀಕರು ಪ್ರತಿ ತಿಂಗಳು ನಗರದ ಚೌಕದಲ್ಲಿ ಜಪಸರ ಪ್ರಾರ್ಥನೆಯನ್ನು ಹೇಳುವುದನ್ನು ಮನಗಂಡಿರುವ ಪೋಪ್ ಫ್ರಾನ್ಸಿಸ್ ಅವರು ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಕ್ರೈಸ್ತರಾದ ನಾವು ಎಲ್ಲಾ ಸಂದರ್ಭಗಳಲ್ಲಿಯೂ ಶುಭಸಂದೇಶವನ್ನು ಸಾರಲು ಕರೆ ಹೊಂದಿದ್ದೇವೆ ಎಂದು ಹೇಳಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಕಥೋಲಿಕರು ಪ್ರತಿ ತಿಂಗಳ ಇಪ್ಪತ್ತನೇ ತಾರೀಖಿನಂದು ರಿಮಿನಿ ನಗರದ ಚೌಕದಲ್ಲಿ ಒಂದಾಗಿ ಸೇರಿ ಜಪಸರ ಪ್ರಾರ್ಥನೆಯನ್ನು ಮಾಡುತ್ತಾರೆ.
ಈ ಕುರಿತು ಅವರ ಹತ್ತನೇ ವರ್ಷಾಚರಣೆಯ ವೇಳೆ ಅವರಿಗಾಗಿ ಪೋಪ್ ಫ್ರಾನ್ಸಿಸ್ ಅವರು ಸಂದೇಶವನ್ನು ಕಳುಹಿಸಿದ್ದು, ಅವರಿಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ ಮಾತ್ರವಲ್ಲದೆ, ಕ್ರೈಸ್ತರಾದ ಎಲ್ಲರೂ ಎಂತದ್ದೇ ಸಂಕಷ್ಟಗಳನ್ನು ಅನುಭವಿಸಿದರೂ ಶುಭಸಂದೇಶದ ಮೌಲ್ಯಗಳನ್ನು ಬದುಕಿನಲ್ಲಿ ಆಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.