ಚೀನೀ ಧರ್ಮಾಧ್ಯಕ್ಷರ "ಗುರುತಿಸುವಿಕೆ" ಸಕಾರಾತ್ಮಕ ಫಲಿತಾಂಶ ಎಂದ ವ್ಯಾಟಿಕನ್
ಚೀನಾ ಸರ್ಕಾರವು ಅಲ್ಲಿನ ತಾಂಜಿನ್ ಪ್ರಾಂತ್ಯದ ಧರ್ಮಾಧ್ಯಕ್ಷ ಮೆಲ್ಕೊಯರ್ ಶೀ ಹಾಂಗ್ಝೆನ್ ಅವರನ್ನು ತಾಂಜಿನ್ ಧರ್ಮಪ್ರಾಂತ್ಯದ ಕಥೋಲಿಕ ಧರ್ಮಾಧ್ಯಕ್ಷ ಎಂದು ನಾಗರೀಕ ಉದ್ದೇಶಗಳಿಗಾಗಿ ಗುರುತಿಸಿದೆ. ಈ ಕ್ರಮವು ವ್ಯಾಟಿಕನ್ ಪೀಠಕ್ಕೆ ತೃಪ್ತಿ ತಂದಿದೆ ಎಂದು ವ್ಯಾಟಿಕನ್ನಿನ ಮಾಧ್ಯಮ ಪೀಠವು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ವರದಿ: ವ್ವಾಟಿಕನ್ ನ್ಯೂಸ್

ಈ ಕುರಿತು ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿರುವ ವ್ಯಾಟಿಕನ್ ಮಾಧ್ಯಮ ಕಚೇರಿಯು "ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ ದೇಶವು ತನ್ನ ತಾಂಜಿಂಗ್ ಪ್ರಾಂತ್ಯದ ಕಥೋಲಿಕ ಧರ್ಮಕ್ಷೇತ್ರಕ್ಕೆ ಪವಿತ್ರಪೀಠವು ನೇಮಿಸಿರುವ ಧರ್ಮಧ್ಯಕ್ಷ ಮೆಲ್ಕೊಯರ್ ಶೀ ಹಾಂಗ್ಝೆನ್ ಅವರನ್ನು ಅಧಿಕೃತ ಕಥೋಲಿಕ ಧರ್ಮಾಧ್ಯಕ್ಷ ಎಂದು ಗುರುತಿಸಿದೆ ಎಂದು ಹೇಳಲು ಹರ್ಷಿಸುತ್ತದೆ" ಎಂದು ಹೇಳಿದೆ.
ಅನೇಕ ವರ್ಷಗಳಿಂದ ಪವಿತ್ರ ಪೀಠ ಹಾಗೂ ಚೈನಾ ದೇಶದ ನಡುವೆ ನಡೆದ ಚರ್ಚೆಗಳ ಫಲ ಈ ವಿದ್ಯಮಾನ ಎಂದು ಈ ಪ್ರಕಟಣೆಯು ತಿಳಿಸಿದೆ.
27 August 2024, 18:18