2025ರ ವಿಶ್ವ ಶಾಂತಿ ದಿನದ ಶೀರ್ಷಿಕೆ ಬಿಡುಗಡೆ
"ನಮ್ಮ ಪಾಪಗಳನ್ನು ಕ್ಷಮಿಸಿ, ನಿಮ್ಮ ಶಾಂತಿಯನ್ನು ನೀಡಿರಿ" ಎಂಬುದು 2025ರ ವಿಶ್ವ ಶಾಂತಿ ದಿನದ ಶೀರ್ಷಿಕೆಯಾಗಿದೆ. ಮುಂದಿನ ವರ್ಷ ವಿಶ್ವಶಾಂತಿ ದಿನವನ್ನು ಜನವರಿ 1, 2025 ರಂದು ಆಚರಿಸಲಾಗುತ್ತದೆ.
ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್
"ಕೇವಲ ಪ್ರಾಮಾಣಿಕ ಪರಿವರ್ತನೆಯಿಂದ ಮಾತ್ರ ನಿಜವಾದ ಶಾಂತಿಯನ್ನು ಸಾಧಿಸಲು ಸಾಧ್ಯ" ಎಂದು ವ್ಯಾಟಿಕನ್ನಿನ ಸಮಗ್ರ ಮಾನವ ಅಭಿವೃದ್ಧಿ ಪೀಠವು ಅಭಿಪ್ರಾಯ ಪಟ್ಟಿದೆ. 2025ರ ವಿಶ್ವಶಾಂತಿ ದಿನಕ್ಕೆ ಶೀರ್ಷಿಕೆಯನ್ನು ಬಿಡುಗಡೆ ಮಾಡುವ ಹೊತ್ತಿನಲ್ಲಿ ಈ ಮಾತನ್ನು ಹೇಳುವ ಮೂಲಕ ಪ್ರಕಟಿಸಿದೆ.
"ನಮ್ಮ ಪಾಪಗಳನ್ನು ಕ್ಷಮಿಸಿ, ನಿಮ್ಮ ಶಾಂತಿಯನ್ನು ನೀಡಿರಿ" ಎಂಬುದು 2025ರ ವಿಶ್ವ ಶಾಂತಿ ದಿನದ ಶೀರ್ಷಿಕೆಯಾಗಿದೆ. ಮುಂದಿನ ವರ್ಷ ವಿಶ್ವಶಾಂತಿ ದಿನವನ್ನು ಜನವರಿ 1, 2025 ರಂದು ಆಚರಿಸಲಾಗುತ್ತದೆ.
2025ನೇ ವರ್ಷ ಜುಬಿಲಿ ವರ್ಷವೂ ಸಹ ಆಗಿರಲಿದ್ದು, ಈ ವರ್ಷದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಇದೆ ವೇಳೆ ವಿಶ್ವಶಾಂತಿ ದಿನವನ್ನು ಸಹ ಈ ವರ್ಷದ ಆರಂಭದಲ್ಲಿ ಆಚರಿಸಲಿದ್ದು, ಕರುಣೆ ಹಾಗೂ ತ್ಯಾಗವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಜಗತ್ತಿನಲ್ಲಿ ಶಾಂತಿಯ ಅವಶ್ಯಕತೆ ಹೆಚ್ಚಿದೆ.
08 August 2024, 18:29