ಕಾರ್ಡಿನಲ್ ಪರೋಲಿನ್: ಏಷ್ಯಾ ಮತ್ತು ಓಶಿಯಾನಿಯ ಖಂಡಗಳಿಗೆ ಪೋಪ್ ಫ್ರಾನ್ಸಿಸ್ ಐಕ್ಯತೆ ಮತ್ತು ಶಾಂತಿಯನ್ನು ತರುತ್ತಾರೆ

ಪೋಪ್ ಫ್ರಾನ್ಸಿಸ್ ಅವರು ಇಂಡೋನೇಷಿಯಾ, ಪಪುವಾ ನ್ಯೂಗಿನಿ, ಟಿಮೋರ್-ಲೆಸ್ತೆ, ಹಾಗೂ ಸಿಂಗಪೋರ್ ದೇಶಗಳಿಗೆ ತಮ್ಮ 45ನೇ ಭೇಟಿಯನ್ನು ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಿಯೆತ್ರೋ ಪರೋಲಿನ್ ಅವರು ವ್ಯಾಟಿಕನ್ ನ್ಯೂಸ್ ಸುದ್ದಿತಾಣಕ್ಕೆ ಸಂದರ್ಶನವನ್ನು ನೀಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಹೀಗೆ ಸಂದರ್ಶನವನ್ನು ನೀಡಿರುವ ಅವರು ಏಷ್ಯಾ ಹಾಗೂ ಓಶಿಯಾನಿಯಾ ಖಂಡಕ್ಕೆ ಪೋಪ್ ಫ್ರಾನ್ಸಿಸ್ ಅವರ ಭೇಟಿ ಅಲ್ಲಿ ಶಾಂತಿ ಮತ್ತು ಐಕ್ಯತೆಯನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ. ಇಲ್ಲಿನ ಜನರು ವಿಶೇಷವಾಗಿ ಕ್ರೈಸ್ತ ಭಕ್ತಾಧಿಗಳು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಲು ಉತ್ಸುಕರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಾರ್ಡಿನಲ್ ಪಿಯೆತ್ರೋ ಪರೋಲಿನ್ ಅವರು ಪೋಪ್ ಫ್ರಾನ್ಸಿಸ್ ಅವರ ಜೊತೆಗೆ ಹೋಗುವುದಿಲ್ಲ ಏಕೆಂದರೆ ನಿನ್ನೆ ಅವರ ತಾಯಿ ಐಡಾ ಪರೋಲಿನ್ ಅವರು ತೀರಿಕೊಂಡ ಕಾರಣ, ಬುಧವಾರ ಅವರು ತಮ್ಮ ತಾಯಿಯ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಡಿನಲ್ ಪಿಯೆತ್ರೋ ಪರೋಲಿನ್ ಅವರ ತಾಯಿಯ ನಿಧನಕ್ಕೆ ಪೋಪ್ ಫ್ರಾನ್ಸಿಸ್ ಅವರು ಸಂತಾಪವನ್ನು ಸೂಚಿಸಿದ್ದರು.

ಪೋಪ್ ಫ್ರಾನ್ಸಿಸ್ ಅವರು ಈ ಎಲ್ಲಾ ದೇಶಗಳಲ್ಲಿ ರಾಜಕೀಯ, ಧಾರ್ಮಿಕ ಹಾಗೂ ಸಾಂಸ್ಕೃತಿಕ ನಾಯಕರುಗಳನ್ನು ಭೇಟಿ ಮಾಡುವ ಮೂಲಕ ಶಾಂತಿಗೆ ಹೊಸ ವ್ಯಾಖ್ಯಾನವನ್ನು ನೀಡಲಿದ್ದಾರೆ ಎಂದು ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

02 September 2024, 19:12