ಹುಡುಕಿ

ಕಾರ್ಡಿನಲ್ ಪರೋಲಿನ್ ಅವರ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿ, ಟೆಲಿಗ್ರಾಂ ಸಂದೇಶ ಕಳುಹಿಸಿದ ಪೋಪ್ ಫ್ರಾನ್ಸಿಸ್

ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರ ತಾಯಿ ಏಡಾ ಪರೋಲಿನ್ ಅವರು ಇತ್ತೀಚೆಗೆ ವಯೋಸಹಜ ಕಾರಣದಿಂದ ನಿಧನರಾದರು. ಅವರ ನಿಧನಕ್ಕೆ ಸಂತಾಪವನ್ನು ಸೂಚಿಸಿ, ಪೋಪ್ ಫ್ರಾನ್ಸಿಸ್ ಅವರು ಟೆಲಿಗ್ರಾಂ ಸಂದೇಶವನ್ನು ಕಳುಹಿಸಿದ್ದರು. ಈ ಸಂದೇಶವು ಕಾರ್ಡಿನಲ್ ಪರೋಲಿನ್ ಅವರಿಗೆ ತಲುಪಿದೆ.

ವ್ಯಾಟಿಕನ್: ವ್ಯಾಟಿಕನ್ ನ್ಯೂಸ್

ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರ ತಾಯಿ ಏಡಾ ಪರೋಲಿನ್ ಅವರು ಇತ್ತೀಚೆಗೆ ವಯೋಸಹಜ ಕಾರಣದಿಂದ ನಿಧನರಾದರು. ಅವರ ನಿಧನಕ್ಕೆ ಸಂತಾಪವನ್ನು ಸೂಚಿಸಿ, ಪೋಪ್ ಫ್ರಾನ್ಸಿಸ್ ಅವರು ಟೆಲಿಗ್ರಾಂ ಸಂದೇಶವನ್ನು ಕಳುಹಿಸಿದ್ದರು. ಈ ಸಂದೇಶವು ಕಾರ್ಡಿನಲ್ ಪರೋಲಿನ್ ಅವರಿಗೆ ತಲುಪಿದೆ.

ಪೋಪ್ ಫ್ರಾನ್ಸಿಸ್ ಅವರು ತಮ್ಮ ಟೆಲಿಗ್ರಾಂ ಸಂದೇಶದಲ್ಲಿ "ನಿಮ್ಮ ತಾಯಿಯ ನಿಧನಕ್ಕೆ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಆಕೆಯ ಆತ್ಮವು ಪ್ರಭುವಿನಲ್ಲಿ ಲೀನವಾಗಿ ಚಿರಶಾಂತಿಯನ್ನು ಪಡೆಯಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಹೇಳಿದ್ದಾರೆ.

ಕಾರ್ಡಿನಲ್ ಪರೋಲಿನ್ ಅವರ ತಾಯಿಗೆ ತೊಂಬತ್ತಾರು ವರ್ಷ ವಯಸ್ಸಾಗಿತ್ತು. ಅವರನ್ನು ಉತ್ತರ ಇಟಲಿ ಪ್ರಾಂತ್ಯದ ವಿಸೆನ್ಝಾ ಧರ್ಮಕ್ಷೇತ್ರದ ಧರ್ಮಕೇಂದ್ರದಲ್ಲಿ ಭೂಸ್ಥಾಪನೆ ಮಾಡಲಾಗಿದೆ.

03 September 2024, 18:40