ಇಂಡೋನೇಶಿಯಾ ದೇಶಕ್ಕೆ ಪೋಪ್ ಫ್ರಾನ್ಸಿಸ್ ಅವರು ಭೇಟಿ ಒಂದು ವರದಾನ: ಕಾರ್ಡಿನಲ್ ಸುಹಾರಿಯೋ
ವರದಿ: ಕಾರ್ಡಿನಲ್ ಇಗ್ನೇಷಿಯಸ್ ಸುಹಾರಿಯೋ ಹಾರ್ಡ್'ಜೊವಾತ್'ಮೋರ್ಡ್ಜೊ
ಪೋಪ್ ಫ್ರಾನ್ಸಿಸ್ ಅವರು ಇಂಡೋನೇಷಿಯಾ, ಪಪುವಾ ನ್ಯೂಗಿನಿ, ಟಿಮೋರ್-ಲೆಸ್ತೆ, ಹಾಗೂ ಸಿಂಗಪೋರ್ ದೇಶಗಳಿಗೆ ತಮ್ಮ 45ನೇ ಭೇಟಿಯನ್ನು ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಜಕಾರ್ತಾ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಇಗ್ನೇಷಿಯಸ್ ಸುಹಾರಿಯೋ, ಪೋಪ್ ಫ್ರಾನ್ಸಿಸ್ ಅವರ ಭೇಟಿ ದೇವರು ನಮ್ಮ ದೇಶಕ್ಕೆ ನೀಡಿರುವ ವರದಾನವಾಗಿದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 3-6ನೇ ತಾರೀಖಿನವರೆಗೆ ಮೂರು ದಿನಗಳ ಕಾಲ ಪೋಪ್ ಫ್ರಾನ್ಸಿಸ್ ಅವರು ಇಂಡೋನೇಶಿಯಾದ ಜಕಾರ್ತಕ್ಕೆ ಭೇಟಿ ನೀಡಲಿದ್ದು, ಅಲ್ಲಿ ರಾಜಕೀಯ ಹಾಗೂ ಸಾಂಸ್ಕೃತಿಕ ನಾಯಕರುಗಳನ್ನು ಭೇಟಿ ಮಾಡಿಲಿದ್ದಾರೆ. ಈ ನಡುವೆ ಅವರು ಅಲ್ಲಿನ ಧರ್ಮಾಧ್ಯಕ್ಷರು, ಗುರುಗಳು, ಧಾರ್ಮಿಕ ಸಹೋದರ-ಸಹೋದರಿಯರು ಹಾಗೂ ವಿವಿಧ ನಾಯಕರುಗಳನ್ನು ಭೇಟಿ ಮಾಡಲಿದ್ದಾರೆ
ಇಂಡೋನೇಶಿಯಾ ಬಹುತೇಕ ಮುಸ್ಲಿಂ ಬಾಹುಳ್ಯ ಇರುವ ದೇಶವಾಗಿದ್ದು, ಇಲ್ಲಿಗೆ ಪೋಪ್ ಫ್ರಾನ್ಸಿಸ್ ಅವರು ನೀಡುತ್ತಿರುವ ಭೇಟಿಯನ್ನು ಕೇವಲ ಕ್ರೈಸ್ತರು ಮಾತ್ರವಲ್ಲ, ಇಲ್ಲಿನ ವಿವಿಧ ಧರ್ಮಗಳ ಮತಾವಲಂಬಿಗಳಳೂ ಸಹ ಕಾತರದಿಂದ ಕಾಯುತ್ತಿದ್ದಾರೆ.