ಕಾರ್ಡಿನಲ್ ಫರ್ನಾಂಡೆಝ್: ಮಹಿಳೆಯರಿಗೆ ಹೆಚ್ಚು ಅವಕಾಶ-ಅಧಿಕಾರವನ್ನು ನೀಡುವಲ್ಲಿ ಕಾರ್ಯಪ್ರವೃತ್ತರಾಗೋಣ
ವರದಿ: ಅಂದ್ರೇಯ ತೊರ್ನಿಯೆಲ್ಲಿ, ಅಜಯ್ ಕುಮಾರ್
ವ್ಯಾಟಿಕನ್ನಿನ ವಿಶ್ವಾಸ ಸಿದ್ಧಾಂತ ಪೀಠದ ಉಸ್ತುವಾರಿಯಾಗಿರುವ ಕಾರ್ಡಿನಲ್ ವಿಕ್ಟರ್ ಮ್ಯಾನುಯೇಲ್ ಫೆರ್ನಾಂಡೆಝ್ ಅವರು ಅಕ್ಟೋಬರ್ 24 ರ ಸಿನೋಡ್ ಸಮಾಲೋಚನೆಯ ಐದನೇ ಗುಂಪಿನ ಜೊತೆಗೆ ಸಂವಾದವನ್ನು ನಡೆಸಿದ ಸಂದರ್ಭದಲ್ಲಿ ಧರ್ಮಸಭೆಯಲ್ಲಿ ಮಹಿಳೆಯರು ಸೇವಾದರ್ಶಿಗಳಾಗಿ ಕಾರ್ಯನಿರ್ವಹಿಸುವ ಕುರಿತು ಮಾತನಾಡಿದ್ದಾರೆ. ಮಹಿಳೆಯರು ಸೇವಾದರ್ಶಿಗಳಾಗುವುದಕ್ಕೆ ಇನ್ನೂ ಸಮಯ ಕೂಡಿಬಂದಿಲ್ಲ ಎಂದು ಏಕೆ ಅವರು ಹೇಳಿದ್ದಾರೆ ಎಂಬ ಕುರಿತು ಸಮಜಾಯಿಷಿಯನ್ನು ನೀಡಿರುವ ಅವರು, ಸಮಯ ಕೂಡಿ ಬಂದಿಲ್ಲ ಎಂದರೆ ಚರ್ಚೆಯೇ ನಡೆಯುವುದು ಬೇಡವೆಂದೇನಿಲ್ಲ ಎಂದು ಹೇಳಿದ್ದಾರೆ.
ಸಿನೋಡ್ ಸದಸ್ಯರು, ಅತಿಥಿಗಳು ಹಾಗೂ ನುರಿತ ತಜ್ಞರೂ ಸೇರಿದಂತೆ ಸುಮಾರು ನೂರು ಜನರು ಭಾಗವಹಿಸಿದ ಸಭೆಯಲ್ಲಿ ಅವರನ್ನು ಉದ್ದೇಶಿಸಿ ಕಾರ್ಡಿನಲ್ ಫೆರ್ನಾಂಡೆಜ್ ಅವರು ಮಾತನಾಡಿದ್ದಾರೆ ಹಾಗೂ ಅವರ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ. ಆರಂಭದಲ್ಲಿ ಅವರು ಹೇಗೆ ವಿಶ್ವಾಸ ಸಿದ್ಧಾಂತ ಪೀಠಕ್ಕೆ ಧರ್ಮಸಭೆಯಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯವನ್ನು ನೀಡಲಾಗಿದೆ ಹಾಗೂ ಆ ಕುರಿತು ಅದು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಸಿನೋಡ್ ಸಭೆಯಲ್ಲಿ ಕೇವಲ ಒಂದು ದೇಶ ಅಥವಾ ಪ್ರಾಂತ್ಯದ ಸದಸ್ಯರು ಭಾಗವಹಿಸಿಲ್ಲ. ಬದಲಿಗೆ ವಿಶ್ವದ ವಿವಿಧ ಮೂಲೆಗಳಿಂದ ವಿವಿಧ ಸಂಸ್ಕೃತಿಗಳ ಬಿಷಪ್ಪರು ಹಾಗೂ ಕಾರ್ಡಿನಲ್ಲುಗಳು ಇದರಲ್ಲಿ ಭಾಗವಹಿಸಿದ್ದಾರೆ. ಆ ಮೂಲಕ ವಿಶ್ವದ ಎಲ್ಲಾ ಪ್ರಾಂತ್ಯಗಳ ಜನರನ್ನು ಹಾಗೂ ಅವರ ಅಭಿಲಾಷೆಗಳನ್ನು ಒಳಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು "ಧರ್ಮಸಭೆಯಲ್ಲಿ ಮಹಿಳೆಯರ ಪಾತ್ರ ಹಾಗೂ ಅವರನ್ನು ಸೇವಾದರ್ಶಿಗಳನ್ನಾಗಿಸುವುದೂ ಸೇರಿದಂತೆ ವಿವಿಧ ಅಧಿಕಾರ ಕರ್ತವ್ಯಗಳಿಗೆ ನೇಮಿಸುವುದರ ಕುರಿತು ಈಗಾಗಲೇ ಸಮಿತಿಯೊಂದು ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಸದ್ಯಕ್ಕೆ ಆ ಕುರಿತು ಯಾವುದೇ ನಿರ್ಧಾರವಿಲ್ಲವೆಂದರೂ ಸಹ, ಚರ್ಚೆಯೇ ನಡೆಯಬೇಕೆಂದಿಲ್ಲ ಎಂದು ಹೇಳಿದ್ದಾರೆ.