ಧರ್ಮಸಭೆಯು ವಿವಿಧ ಪ್ರಾದೇಶಿಕತೆಗಳಲ್ಲಿ ಹಾಗೂ ಸಂಸ್ಕೃತಿಗಳಲ್ಲಿ ಬೇರೂರಿದೆ: ಕಾರ್ಡಿನಲ್ ಹೊಲರೀಚ್

ಕಾರ್ಡಿನಲ್ ಹೊಲರೀಚ್ ಅವರು ಸಿನೋಡ್ ಸಭೆಯಲ್ಲಿ ಮಾತನಾಡಿ "ಧರ್ಮಸಭೆಯು ವಿವಿಧ ಪ್ರಾದೇಶಿಕತೆಗಳಲ್ಲಿ ಹಾಗೂ ಸಂಸ್ಕೃತಿಗಳಲ್ಲಿ ಬೇರೂರಿದೆ" ಎಂದು ಹೇಳಿದ್ದಾರೆ.

ವರದಿ: ಕ್ರಿಸ್ಟೊಫರ್ ವೆಲ್ಸ್, ಅಜಯ್ ಕುಮಾರ್

ಸಿನೋಡ್ ಸಮಾವೇಷದ ಅಂತಿಮ ಘಟ್ಟದ ಸಭೆಗಳು ಈಗಾಗಲೇ ಪ್ರಾರಂಭವಾಗಿದ್ದು, ಧರ್ಮಾಧ್ಯಕ್ಷರುಗಳು ಹಾಗೂ ಇನ್ನಿತರ ಸಿನೋಡ್ ಸದಸ್ಯರು ಧರ್ಮಸಭೆಗೆ ಸಂಬಂಧಿಸಿದಂತಹ ವಿವಿಧ ಗಂಭೀರ ವಿಚಾರಗಳ ಕುರಿತು ಚರ್ಚಿಸಿದ್ದಾರೆ. ಈ ವೇಳೆ ಸಿನೋಡ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಿರುವ ಕಾರ್ಡಿನಲ್ ಜಿಯಾನ್-ಕ್ಲಾಡ್ ಹೊಲೆರೀಚ್ ಅವರು ಎಂದಿಗೂ ಸಹ ಆಯಾಸಕ್ಕೆ ಒಳಗಾಗಬೇಡಿ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು "ಧರ್ಮಸಭೆ ಎಂಬುದು ಒಂದು ವಿಶಾಲ ವೃಕ್ಷವಿದ್ದಂತೆ. ಅದರ ಬೇರುಗಳು ವಿವಿಧ ಪ್ರಾದೇಶಿಕತೆ ಹಾಗೂ ಸಂಸ್ಕೃತಿಗಳಲ್ಲಿ ಹಬ್ಬಿದೆ" ಎಂದು ಹೇಳಿದ್ದಾರೆ. ಇಲ್ಲಿ ಪ್ರಾದೇಶಿಕತೆಗಳು ಎಂದರೆ ಕೇವಲ ಭೌಗೋಳಿಕ ಪ್ರದೇಶಗಳಲ್ಲ. ಅಲ್ಲಿ ಜೀವಿಸುವ ಜನರ ಕಲಾಚಾರ, ಸಂಸ್ಕೃತಿ ಹಾಗೂ ಜೀವನ ಕ್ರಮಗಳಾಗಿವೆ ಎಂದು ಕಾರ್ಡಿನಲ್ ಹೊಲೆರೀಚ್ ಅವರು ಹೇಳಿದ್ದಾರೆ.

ಕಾರ್ಡಿನಲ್ ಹೊಲೆರೀಚ್ ಅವರು ಪೋಪ್ ಫ್ರಾನ್ಸಿಸ್ ಅವರೊಂದಿಗೆ ಅಂದರೆ ರೋಮಿನ ಧರ್ಮಾಧ್ಯಕ್ಷರೊಂದಿಗೆ ಐಕ್ಯತೆ ಹಾಗೂ ಸತ್ಸಂಬಂಧವನ್ನು ಹೊಂದುವ ಕುರಿತು ಮಾತನಾಡಿದರು. "ವಿಶ್ವಗುರು ಫ್ರಾನ್ಸಿಸರು ನಮಗೆ ಈ ಅವಕಾಶವನ್ನು ನೀಡಿದ್ದಾರೆ. ನಿಜವಾಗಿಯೂ ಧರ್ಮಸಭೆ ಏನನ್ನು ಬಯಸುತ್ತಿದೆ ಎಂದು ಅವರಿಗೆ ಉತ್ತರಿಸುವುದು ನಮ್ಮ ಕರ್ತವ್ಯವಾಗಿದೆ." ಎಂದು ಅವರು ಸಿನೋಡ್ ಸದಸ್ಯರಿಗೆ ತಿಳಿಸಿದರು.

ಕೊನೆಗೆ ಅವರು "ನಮ್ಮೆಲ್ಲಾ ಸಂವಾದಗಳು ಧರ್ಮಸಭೆಯ ಸಕಲ ಒಳಿತಿಗಾಗಿ ಮಾತ್ರವೇ" ಎಂಬುದನ್ನು ನಾವು ಮರೆಯಬಾರದು ಎಂದು ಹೇಳಿದರು.

15 October 2024, 17:51