ಹುಡುಕಿ

ಕಾರ್ಡಿನಲ್ ಆದ ಕುರಿತು ಟೋಕಿಯೋ ಮಹಾಧರ್ಮಧ್ಯಕ್ಷ ತರ್ಸಿಸಿಯೂಸ್ ಇಸಾವು ಕಿಕುಚಿ ಮಾತು

ಜಪಾನ್ ದೇಶದ ಟೋಕಿಯೋ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿರುವ ತರ್ಸಿಯು ಇಸಾವೊ ಕಿಕುಚಿ ಅವರು ತಮ್ಮನ್ನು ವಿಶ್ವಗುರು ಫ್ರಾನ್ಸಿಸ್ ಅವರು ಕಾರ್ಡಿನಲ್ ಆಗಿ ಹೆಸರಿಸಿರುವ ಕುರಿತು ವ್ಯಾಟಿಕನ್ ನ್ಯೂಸ್ ಜೊತೆಗೆ ಮಾತನಾಡಿದ್ದಾರೆ. ನೇಮಿತ ಕಾರ್ಡಿನಲ್ ಕಿಕುಚಿ ಅವರು ಕಾರಿತಾಸ್ ಇಂಟರ್ನ್ಯಾಷನಲ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಜಪಾನ್ ದೇಶದ ಟೋಕಿಯೋ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿರುವ ತರ್ಸಿಯು ಇಸಾವೊ ಕಿಕುಚಿ ಅವರು ತಮ್ಮನ್ನು ವಿಶ್ವಗುರು ಫ್ರಾನ್ಸಿಸ್ ಅವರು ಕಾರ್ಡಿನಲ್ ಆಗಿ ಹೆಸರಿಸಿರುವ ಕುರಿತು ವ್ಯಾಟಿಕನ್ ನ್ಯೂಸ್ ಜೊತೆಗೆ ಮಾತನಾಡಿದ್ದಾರೆ. ನೇಮಿತ ಕಾರ್ಡಿನಲ್ ಕಿಕುಚಿ ಅವರು ಕಾರಿತಾಸ್ ಇಂಟರ್ನ್ಯಾಷನಲ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.

"ವಿಶ್ವಗುರು ಫ್ರಾನ್ಸಿಸ್ ಅವರು ನನ್ನನ್ನು ಕಾರ್ಡಿನಲ್ ಆಗಿ ನೇಮಿಸುತ್ತಾರೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಈಗಾಗಲೇ ಕಾರಿತಾಸ್ ಇಂಟರ್ನ್ಯಾಷನಲ್ ಅಧ್ಯಕ್ಷನಾಗಿ ನಾನು ಅವರನ್ನು ಅನೇಕ ಬಾರಿ ಭೇಟಿ ಮಾಡಿದ್ದೇನೆ. ನಾನು ಇಟಾಲಿಯನ್ ಭಾಷೆ ಹಾಗೂ ಸ್ಪ್ಯಾನಿಶ್ ಭಾಷೆಯನ್ನು ಮಾತನಾಡುವುದಿಲ್ಲ. ಆದರೆ ವಿಶ್ವಗುರು ಫ್ರಾನ್ಸಿಸ್ ಅವರನ್ನು ನಾನು ಭೇಟಿ ಮಾಡುವಾಗಲೆಲ್ಲ ನನ್ನ ಜೊತೆಗೆ ಎರಡು ಭಾಷೆಯನ್ನು ಮಾತನಾಡಬಲ್ಲ ಒಬ್ಬರನ್ನು ಭಾಷಾಂತರಕಾರರಾಗಿ ನನ್ನ ಜೊತೆ ಕರೆದೊಯ್ಯುತ್ತೇನೆ. ಈಗಲೂ ಸಹ ಕಾರ್ಡಿನಲ್ ಆಗಿ ಅವರಿಗೆ ಸಲಹೆಯನ್ನು ನೀಡುವ ನಿಟ್ಟಿನಲ್ಲಿ ನಾನು ಇದೇ ರೀತಿಯನ್ನು ಅನುಸರಿಸುತ್ತೇನೆ." ಎಂದು ಕಾರ್ಡಿನಲ್ ಕಿಕುಚಿ ಅವರು ಹೇಳಿದ್ದಾರೆ.

ನಿಮ್ಮ ದೈವ ಕರೆಯ ಕುರಿತು ಮಾಹಿತಿಯನ್ನು ಹಂಚಿಕೊಳ್ಳಿ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾರ್ಡಿನಲ್ ಕಿಕುಚಿ, ನನ್ನನ್ನು ಸಾಕಿ ಬೆಳೆಸಿದ್ದು ಸ್ವಿಸ್ ಮಿಷನರಿಗಳು. ಉತ್ತರ ಜಪಾನಿನಲ್ಲಿ ನಾನು ಜನಿಸಿದೆ. ನನ್ನ ತಂದೆ ಧರ್ಮೋಪದೇಶಕರಾಗಿದ್ದರು. ಬಹುತೇಕ ನಾನು ಬೆಳೆದಿದ್ದು ನನ್ನ ಧರ್ಮ ಕೇಂದ್ರದಲ್ಲಿ. ಅಲ್ಲಿನ ಮಿಷಿನರಿ ಗುರುಗಳು ನನ್ನನ್ನು ಸಾಕಿ ಸಲಹಿದರು. ಹಾಗಾಗಿ ನಾನು ನನ್ನ ಬಾಲ್ಯದಲ್ಲೇ ಗುರುವಾಗಬೇಕು ಎಂದು ನಿಶ್ಚಯಿಸಿದ್ದೆ. ಅಲ್ಲಿನ ಮಿಷನರಿಗಳು ದೈವಿಕ ವಾರ್ತೆ ಧಾರ್ಮಿಕ ಸಭೆಯ ಗುರುಗಳಾದ ಕಾರಣ ನಾನು ಸಹ ಆ ಸಭೆಯ ಕಿರಿಯ ಗುರು ಮಠವನ್ನು ಸೇರಿ ಗುರುವಾದೆ" ಎಂದು ಅವರು ವರದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಇದೇ ವೇಳೆ ನೇಮಿತ-ಕಾರ್ಡಿನಲ್ ಕಿಕುಚಿ ಅವರು ಸಿನೋಡ್, ಜ್ಯೂಬಿಲಿ ವರ್ಷ ಸೇರಿದಂತೆ ಧರ್ಮಸಭೆಯ ವಿವಿಧ ವಿಷಯಗಳ ಕುರಿತು ಮಾತನಾಡಿದರು.

09 October 2024, 18:43