ಸೀನೋಡ್ ಸಭೆಗಳಲ್ಲಿ ಚೀನಾದ ಧರ್ಮಾಧ್ಯಕ್ಷರು: ನಾವು ಧರ್ಮಸಭೆಯೊಂದಿಗೆ ಸಹಭಾಗಿತ್ವದಲ್ಲಿ ಇದ್ದೇವೆ

ಸಿನೊಡ್ ಸಭೆಗಳಲ್ಲಿ ಚೀನಾದ ಧರ್ಮಾಧ್ಯಕ್ಷರುಗಳಾಗಿರುವ ಜೋಸೆಫ್ ಯಾಂಗ್ ಹಾಗೂ ವಿನ್ಸೆಂಟ್ ಸಿಲು ಅವರು ಚೀನಾ ದೇಶದ ಕಥೋಲಿಕರ ಕುರಿತು ಮಾತನಾಡಿದ್ದಾರೆ. ಹೀಗೆ ಅವರು ಮಾತನಾಡುವಾಗ ನಾವು ಧರ್ಮಸಭೆಯೊಂದಿಗೆ ಸಹಭಾಗಿತ್ವದಲ್ಲಿ ಇದ್ದೇವೆ ಎಂದು ಹೇಳಿದ್ದಾರೆ.

ವರದಿ: ಅಂದ್ರೆಯ ತೋರ್ನಿಯೆಲ್ಲಿ, ಅಜಯ್ ಕುಮಾರ್

ಸಿನೊಡ್ ಸಭೆಗಳಲ್ಲಿ ಚೀನಾದ ಧರ್ಮಾಧ್ಯಕ್ಷರುಗಳಾಗಿರುವ ಜೋಸೆಫ್ ಯಾಂಗ್ ಹಾಗೂ ವಿನ್ಸೆಂಟ್ ಸಿಲು ಅವರು ಚೀನಾ ದೇಶದ ಕಥೋಲಿಕರ ಕುರಿತು ಮಾತನಾಡಿದ್ದಾರೆ. ಹೀಗೆ ಅವರು ಮಾತನಾಡುವಾಗ ನಾವು ಧರ್ಮಸಭೆಯೊಂದಿಗೆ ಸಹಭಾಗಿತ್ವದಲ್ಲಿ ಇದ್ದೇವೆ ಎಂದು ಹೇಳಿದ್ದಾರೆ.

"ಚೀನಾದಲ್ಲಿರುವ ಕಥೋಲಿಕ ಧರ್ಮಸಭೆಯು ವಿಶ್ವದ ಇತರೆ ದೇಶಗಳಲ್ಲಿರುವ ಧರ್ಮಸಭೆಯಂತೆ ಒಂದಾಗಿದೆ. ನಾವೂ ಸಹ ಧರ್ಮಸಭೆಯೊಂದಿಗೆ ಸಹಭಾಗಿತ್ವದಲ್ಲಿ ಇದ್ದೇವೆ. ಒಂದೇ ಧರ್ಮಸಭೆಯ ಭಾಗವಾಗಿದ್ದೇವೆ" ಎಂದು ಬಿಷಪ್ ಜೋಸೆಫ್ ಯಾಂಗ್ ಅವರು ಚೀನಾ ಧರ್ಮಸಭೆಯನ್ನು ಸಿನೋಡ್ ಸಭೆಯಲ್ಲಿ ಹಾಜರಿದ್ದ ಧರ್ಮಾಧ್ಯಕ್ಷರಿಗೆ ಪರಿಚಯಿಸಿದರು.

ಸಿನೋಡ್ ಸಭೆಯಲ್ಲಿ ಚೀನಾ ದೇಶದಿಂದ ಧರ್ಮಾಧ್ಯಕ್ಷರು ಭಾಗವಹಿಸಿರುವುದು ಇದು ಮೂರನೇ ಬಾರಿಗೆ ಆಗಿದೆ. 2018 ಹಾಗೂ 2023 ರಲ್ಲಿ ಚೀನಾದಿಂದ ಇಬ್ಬರು ಧರ್ಮಾಧ್ಯಕ್ಷರು ಸಿನೋಡ್ ಸಭೆಗಳಲ್ಲಿ ಭಾಗವಹಿಸಿದ್ದರು.

ಅಂತಿಮವಾಗಿ ಅವರು "ನೀವೆಲ್ಲರೂ ಚೀನಾ ದೇಶಕ್ಕೆ ಬಂದು ಚೀನಾ ಧರ್ಮಸಭೆಯನ್ನು ನೋಡಬೇಕು" ಎಂದು ಅವರಿಗೆ ಆಹ್ವಾನವನ್ನು ನೀಡಿದರು.

17 October 2024, 17:19