ಹುಡುಕಿ

 ಫಾದರ್ ತಿಮೋಥಿ ರಾಡ್'ಕ್ಲಿಫ್, ಓ.ಪಿ. ಫಾದರ್ ತಿಮೋಥಿ ರಾಡ್'ಕ್ಲಿಫ್, ಓ.ಪಿ.  (ANSA)

ಸಿನೋಡ್ ಅಂತಿಮ ವರದಿಯ ಕುರಿತು ಫಾದರ್ ಥಿಮೊಥಿ ರಾಡ್ಕ್ಲಿಫ್ ಮಾತು

ಸಿನೋಡ್ ಅಂತಿಮ ವರದಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯ ಕುರಿತು ಮಾತನಾಡಿರುವ ಫಾದರ್ ತಿಮೋಥಿ ರಾಡ್'ಕ್ಲಿಫ್, ಓ.ಪಿ. ಅವರು ಅದನ್ನು "ಸ್ವಾತಂತ್ರ್ಯ"ದಿಂದ, ದೇವರ ಸ್ವತಂತ್ರ ಮಕ್ಕಳಾಗಿ ಮಾಡುವಂತೆ ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಸಿನೋಡ್ ಅಂತಿಮ ವರದಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯ ಕುರಿತು ಮಾತನಾಡಿರುವ  ಫಾದರ್ ತಿಮೋಥಿ ರಾಡ್'ಕ್ಲಿಫ್, ಓ.ಪಿ. ಅವರು ಅದನ್ನು "ಸ್ವಾತಂತ್ರ್ಯ"ದಿಂದ, ದೇವರ ಸ್ವತಂತ್ರ ಮಕ್ಕಳಾಗಿ ಮಾಡುವಂತೆ ಹೇಳಿದ್ದಾರೆ. 

ಸಂತ ಪೌಲರು ಗಲಾತ್ಯರಿಗೆ ಬರೆದ ಪತ್ರದಲ್ಲಿ "ಯೇಸು ನಮ್ಮನ್ನು ಸ್ವತಂತ್ರರನ್ನಾಗಿಸಿದ್ದಾರೆ. ನಾವು ಸ್ವತಂತ್ರರಾಗಿ ಜೀವಿಸಬೇಕು ಎಂಬುದು ಅವರ ಅಭಿಲಾಷೆಯಾಗಿದೆ" ಎಂದು ಹೇಳುತ್ತಾರೆ. ಈ ಸ್ವಾತಂತ್ರ್ಯ ಎಂಬುದು ನಮ್ಮೊಳಗೆ ಆಳವಾಗಿ ಬೇರೂರಿದ್ದು, ನಮ್ಮ ಹೃದಯಗಳ ಸ್ವಾತಂತ್ರ್ಯ ಇದಾಗಿದೆ. ನಮ್ಮಲ್ಲಿ ಕೆಲವರು ಈ ಸಿನೋಡ್ ನಿರ್ಧಾರಗಳ ಕುರಿತು ಅಸಮಧಾನವನ್ನು ಹೊಂದಿರಬಹುದು ಅಥವಾ ಆ ಕುರಿತು ಮಾತನಾಡಲೂ ಬಹುದು. ಆದರೆ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದುದೇನೆಂದರೆ "ದೇವರನ್ನು ಪ್ರೀತಿಸುವ ಎಲ್ಲರಿಗೆ ದೇವರು ಒಳ್ಳೆಯದನ್ನೇ ಮಾಡುತ್ತಾರೆ." ಎಂದು ಫಾದರ್ ರ್ಯಾಡ್ಕ್ಲಿಫ್ ಹೇಳಿದರು.

ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿದ್ದರೂ ಸಹ ಇವುಗಳನ್ನು ನಾವು ಧರ್ಮಸಭೆಗಾಗಿ ಬದಿಗೊತ್ತಿ, ಪಯಣಿಸುವ ಧರ್ಮಸಭೆಗಾಗಿ ನಾವು ಪವಿತ್ರಾತ್ಮರ ಸುಜ್ಞಾನದಿಂದ ಪ್ರೇರಿತರಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಫಾದರ್ ರ್ಯಾಡ್ಕ್ಲಿಫ್ ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.      

21 October 2024, 16:04