ಮ್ಯಾನ್ಮಾರ್ ಕಾರ್ಡಿನಲ್ ಚಾರ್ಲ್ಸ್ ಬೋ: ಶಾಂತಿ ಸಾಧ್ಯ ಆದರೆ ಸಂವಾದವೇ ದಾರಿ

ಮ್ಯಾನ್ಮಾರ್ ದೇಶದ ಯಾಂಗೋನ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿರುವ ಕಾರ್ಡಿನಲ್ ಚಾರ್ಲ್ಸ್ ಬೋ ಅವರು ತಮ್ಮ ದೇಶದ ಪರಿಸ್ಥಿತಿಗಳ ಕುರಿತು ಮಾತನಾಡಿದ್ದು, ಸಾವಿರಾರು ಜನ ಈ ದೇಶದಿಂದ ವಲಸೆ ಹೋಗುತ್ತಿದ್ದಾರೆ ಅಥವಾ ಕಾಡಿನೊಳಗೆ ಓಡಿ ಹೋಗಿ ಹಿಂಸೆಯಿಂದ ತಪ್ಪಿಸಿಕೊಳ್ಳಲು ತಲೆ ಮರೆಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೂ ಸಹ ಇಲ್ಲಿನ ಜನತೆ ಬದುಕುವ ಹಾಗೂ ಒಳ್ಳೆ ದಿನಗಳ ಭರವಸೆಯನ್ನು ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ವರದಿ: ಅಂತೋನಿಯೊ ಪಲೇರ್ಮೋ, ಲಿಂಡಾ ಬೊರ್ಡೋನಿ

ಮ್ಯಾನ್ಮಾರ್ ದೇಶದ ಯಾಂಗೋನ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿರುವ ಕಾರ್ಡಿನಲ್ ಚಾರ್ಲ್ಸ್ ಬೋ ಅವರು ತಮ್ಮ ದೇಶದ ಪರಿಸ್ಥಿತಿಗಳ ಕುರಿತು ಮಾತನಾಡಿದ್ದು, ಸಾವಿರಾರು ಜನ ಈ ದೇಶದಿಂದ ವಲಸೆ ಹೋಗುತ್ತಿದ್ದಾರೆ ಅಥವಾ ಕಾಡಿನೊಳಗೆ ಓಡಿ ಹೋಗಿ ಹಿಂಸೆಯಿಂದ ತಪ್ಪಿಸಿಕೊಳ್ಳಲು ತಲೆ ಮರೆಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೂ ಸಹ ಇಲ್ಲಿನ ಜನತೆ ಬದುಕುವ ಹಾಗೂ ಒಳ್ಳೆ ದಿನಗಳ ಭರವಸೆಯನ್ನು ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ. 

2021 ರಲ್ಲಿ ಮ್ಯಾನ್ಮಾರ್ ದೇಶದಲ್ಲಿ ಆಡಳಿತ ನಡೆಸುತ್ತಿದ್ದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿದ್ದ ಆಂಗ್ ಸಾನ್ ಸೂಕಿ ಸರ್ಕಾರವನ್ನು ಮಿಲಿಟರಿ ದಂಗೆಯ ಮೂಲಕ ವಶಪಡಿಸಿಕೊಂಡ ಇಲ್ಲಿನ ಮಿಲಿಟರಿ ಆಡಳಿತವು ಹಲವಾರು ಹಿಂಸಾತ್ಮಕ ಘಟನೆಗಳನ್ನು ನಡೆಸುತ್ತಿದೆ. ಈ ಕಾರಣದಿಂದಾಗಿ ಇಡೀ ದೇಶದಲ್ಲಿ ಹಿಂಸೆಯ ವಾತಾವರಣ ಹೆಚ್ಚಾಗಿದ್ದು, ಇದರಿಂದ ಪಾರಾಗಲು ಸಾವಿರಾರು ಜನರು ದೇಶವನ್ನು ತೊರೆದು, ಬೇರೆ ದೇಶಗಳಿಗೆ ವಲಸಿಗ ಕಾರ್ಮಿಕರಾಗಿ ಹೋಗುತ್ತಿದ್ದಾರೆ ಮಾತ್ರವಲ್ಲದೆ, ಹಿಂಸೆಯನ್ನು ತಪ್ಪಿಸಿಕೊಳ್ಳುವ ಕಾರಣದಿಂದ ಅರಣ್ಯದೊಳಗೆ ಓಡಿ ಹೋಗಿ ಜೀವಿಸುತ್ತಿದ್ದಾರೆ ಎಂದು ಕಾರ್ಡಿನಲ್ ಚಾರ್ಲ್ಸ್ ಬೋ ಅವರು ಹೇಳಿದ್ದಾರೆ.

ಮುಂದುವರೆದು ಮಾತನಾಡಿರುವ ಕಾರ್ಡಿನಲ್ ಚಾರ್ಲ್ಸ್ ಬೋ ಅವರು "ಈ ಎಲ್ಲಾ ಘಟನೆಗಳ ಹೊರತಾಗಿಯೂ ಇಲ್ಲಿನ ಜನರು ಒಳ್ಳೆಯ ದಿನಗಳು ಬರಲಿವೆ ಎಂಬ ಕುರಿತು ಭರವಸೆಯನ್ನು ಹೊಂದಿದ್ದಾರೆ. ಅವರ ಈ ಭರವಸೆ ಅತೀ ಶೀಘ್ರದಲ್ಲೇ ಈಡೇರಬೇಕು ಎಂದು ನಾವು ಪ್ರಾರ್ಥಿಸುತ್ತಿದ್ದೇವೆ" ಎಂದು ಅವರು ಹೇಳಿದರು.

ಪೋಪ್ ಫ್ರಾನ್ಸಿಸರ ಶಾಂತಿ ಮನವಿಗಳು   

ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲಾ ಯುದ್ಧಗಳು ಸೇರಿದಂತೆ ಹಿಂಸಾತ್ಮಕ ಘಟನೆಗಳು ಕೊನೆಯಾಗಿ, ಜಗತ್ತಿನಲ್ಲಿ ಶಾಂತಿ ನೆಲೆಸಬೇಕು. ಆ ಮೂಲಕ ಮುಗ್ಧ ಜನರ ಕೊಲೆ ಹಾಗೂ ಸಾವುಗಳು, ವಿಶೇಷವಾಗಿ ಮಕ್ಕಳ ಸಾವುಗಳು ಕೊನೆಯಾಗಬೇಕು ಎಂದು ವಿಶ್ವಗುರು ಫ್ರಾನ್ಸಿಸರು ಪದೇ ಪದೇ ತಮ್ಮ ಮನವಿಯನ್ನು ಪುನರುಚ್ಛರಿಸಿದ್ದಾರೆ.  

18 October 2024, 17:56