ಕೈದಿಗಳ ಭಾನುವಾರ: ನವೀಕರಣ ಹಾಗೂ ಪುನರ್ವಸತಿಗೆ ಒಂದು ಸದಾವಕಾಶ

ಅಕ್ಟೋಬರ್ 13 ರಂದು ಕೈದಿಗಳ ಭಾನುವಾರವನ್ನು ಆಚರಿಸಲಾಗುತ್ತದೆ. ಆದರೆ ಇಂಗ್ಲೆಂಡ್ ಹಾಗೂ ವೇಲ್ಸ್ ಪ್ರದೇಶದಲ್ಲಿರುವ ಯೇಸು ಸಭೆಯ ಗುರುಗಳಿಗೆ ಕೈದಿಗಳ ಭಾನುವಾರ ಎಂಬುದು ಈ ದಿನ ಮಾತ್ರವಲ್ಲದೆ ಅದು ದಿನಂಪ್ರತಿಯ ಸೇವೆಯಾಗಿದೆ. ಇವರು ಕೈದಿಗಳಿಗೆ ಧ್ಯಾನ ಕೂಟಗಳನ್ನು ಏರ್ಪಡಿಸುತ್ತಾರೆ ಮಾತ್ರವಲ್ಲದೆ, ಅವಕಾಶವಿದ್ದಾಗ ಅವರ ಪಯಣದಲ್ಲಿ ಅವರ ಜೊತೆಗೆ ನಡೆಯುತ್ತಾರೆ.

ವರದಿ: ಕೀಲ್ಚೆ ಗುಸ್ಸಿ, ಅಜಯ್ ಕುಮಾರ್

ಅಕ್ಟೋಬರ್ 13 ರಂದು ಕೈದಿಗಳ ಭಾನುವಾರವನ್ನು ಆಚರಿಸಲಾಗುತ್ತದೆ. ಆದರೆ ಇಂಗ್ಲೆಂಡ್ ಹಾಗೂ ವೇಲ್ಸ್ ಪ್ರದೇಶದಲ್ಲಿರುವ ಯೇಸು ಸಭೆಯ ಗುರುಗಳಿಗೆ ಕೈದಿಗಳ ಭಾನುವಾರ ಎಂಬುದು ಈ ದಿನ ಮಾತ್ರವಲ್ಲದೆ ಅದು ದಿನಂಪ್ರತಿಯ ಸೇವೆಯಾಗಿದೆ. ಇವರು ಕೈದಿಗಳಿಗೆ ಧ್ಯಾನ ಕೂಟಗಳನ್ನು ಏರ್ಪಡಿಸುತ್ತಾರೆ ಮಾತ್ರವಲ್ಲದೆ, ಅವಕಾಶವಿದ್ದಾಗ ಅವರ ಪಯಣದಲ್ಲಿ ಅವರ ಜೊತೆಗೆ ನಡೆಯುತ್ತಾರೆ.

ಕೊರೊನ ಸಾಂಕ್ರಾಮಿಕದ ಸಂದರ್ಭದಲ್ಲಿ ಆರಂಭವಾದ ಈ ಸೇವೆಗೆ ಮೊದಲಿಗೆ ಕಾರಾಗೃಹಗಳಲ್ಲಿ ಚಾಪ್ಲಿನ್ ಆಗಿ ಕಾರ್ಯನಿರ್ವಹಿಸುತ್ತಿರುವ ಗುರುಗಳಿಗೆ ನೆರವಾಗಲು ರೂಪಿಸಿದ ಯೋಜನೆಯಾಗಿತ್ತು. ತದನಂತರ ಕೈದಿಗಳಿಗೂ ಸಹ ಮೆರವದು ನೀಡುವ ನಿಟ್ಟಿನಲ್ಲಿ ಆರಂಭವಾದ ಯೋಜನೆ, ಕೈದಿಗಳಿಗೆ ಧ್ಯಾನ ಕೂಟಗಳನ್ನು ಏರ್ಪಡಿಸಲು ಆರಂಭಿಸಿತು. ಯೇಸು ಸಭೆಯ ಗುರುಗಳು ಕಥೋಲಿಕರು ಮಾತ್ರವಲ್ಲದೆ ಆಂಗ್ಲಿಕನ್ ಚರ್ಚ್ ಸೇರಿದಂತೆ ವಿವಿಧ ಕ್ರೈಸ್ತ ಪಂಗಡಗಳ ಜೊತೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ, ಇದು ಎಲ್ಲಾ ಪಂಗಡಗಳ ಕ್ರೈಸ್ತ ಕೈದಿಗಳಿಗೆ ಅನ್ವಯವಾಗುತ್ತದೆ.

ಯೇಸು ಸಭೆಯ ಈ ಗುರುಗಳ ಈ ಯೋಜನೆಯು ಕೈದಿಗಳಿಗೆ ಧ್ಯಾನ ಕೂಟಗಳನ್ನು ಏರ್ಪಡಿಸುವುದು ಮಾತ್ರವಲ್ಲದೆ ಅವರ ಆಧ್ಯಾತ್ಮಿಕ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಬೇಕಾದ ಇನ್ನಿತರ ಕಾರ್ಯಕ್ರಮಗಳನ್ನು ಸಹ ಏರ್ಪಡಿಸುತ್ತಿದೆ. ಅವರ ಮಾನಸಿಕ ಆರೋಗ್ಯ ಹಾಗೂ ಮಾನಸಿಕ ಸ್ಥಿಮಿತ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಹೀಗೆ ಇಂಗ್ಲೆಂಡ್ ಹಾಗೂ ವೇಲ್ಸ್ ಪ್ರಾಂತ್ಯದಲ್ಲಿ ಕೈದಿಗಳ ಆಧ್ಯಾತ್ಮಿಕ ಬೆಳವಣಿಗೆಗಾಗಿ ಈ ಸಂಸ್ಥೆಗಳು ಶ್ರಮಿಸುತ್ತಿವೆ.

13 October 2024, 18:05