ಸಿನೋಡ್ ವರದಿ: ದಿನ 4 "ನಾವು ಪರಸ್ಪರರ ಭಯದಿಂದ ಆಚೆ ಬರಬೇಕು"

ಸಿನೋಡ್ ವರದಿಯ ನಾಲ್ಕನೇ ದಿನದಂದು ಸದಸ್ಯರು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಬಹುಮುಖ್ಯವಾದ ಉತ್ತರಗಳು ಸಿಕ್ಕಿವೆ. ಈ ಉತ್ತರಗಳ ಪೈಕಿ ಕಂಡು ಬಂದು ಒಂದು ಮುಖ್ಯ ಅಂಶವೆಂದರೆ ನಾವು ಪರಸ್ಪರರ ಭಯದಿಂದ ಆಚೆ ಬರಬೇಕಿದೆ ಎಂಬುದಾಗಿದೆ. ಮೊದಲು ನಮ್ಮಲ್ಲಿ ನಂಬಿಕೆ, ವಿಶ್ವಾಸ ಹಾಗೂ ಗೌರವಗಳಿರಬೇಕು ಎಂಬುದು ಹಲವಾರು ಸದಸ್ಯರ ಅಭಿಪ್ರಾಯವಾಗಿದೆ.

ವರದಿ: ಅಂಟೋನೆಲ್ಲಾ ಪಲೇರ್ಮೋ, ಅಜಯ್ ಕುಮಾರ್

ಸಿನೋಡ್ ವರದಿಯ ನಾಲ್ಕನೇ ದಿನದಂದು ಸದಸ್ಯರು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಬಹುಮುಖ್ಯವಾದ ಉತ್ತರಗಳು ಸಿಕ್ಕಿವೆ. ಈ ಉತ್ತರಗಳ ಪೈಕಿ ಕಂಡು ಬಂದು ಒಂದು ಮುಖ್ಯ ಅಂಶವೆಂದರೆ ನಾವು ಪರಸ್ಪರರ ಭಯದಿಂದ ಆಚೆ ಬರಬೇಕಿದೆ ಎಂಬುದಾಗಿದೆ. ಮೊದಲು ನಮ್ಮಲ್ಲಿ ನಂಬಿಕೆ, ವಿಶ್ವಾಸ ಹಾಗೂ ಗೌರವಗಳಿರಬೇಕು ಎಂಬುದು ಹಲವಾರು ಸದಸ್ಯರ ಅಭಿಪ್ರಾಯವಾಗಿದೆ.  

ಈ ಸಭೆಯಲ್ಲಿ ಚರ್ಚಿಸಲಾದ ಮತ್ತೊಂದು ಮುಖ್ಯವಾದ ಸಂಗತಿ ಎಂದರೆ ಶಸ್ತ್ರಾಸ್ತ್ರಗಳ ವ್ಯಾಪಾರ. ಸಿನೋಡ್ ಸಭೆಯ ಎಲ್ಲಾ ಸದಸ್ಯರು "ಇಂದು ನಮ್ಮ ಮಧ್ಯೆ ಶಾಂತಿಗೆ ಸಂಬಂಧಪಟ್ಟಂತೆ ಇರುವ ಬಹುತೇಕ ಸಮಸ್ಯೆಗಳಿಗೆ ಮೂಲ ಕಾರಣ ಶಸ್ತ್ರಾಸ್ತ್ರಗಳ ವ್ಯಾಪಾರವಾಗಿದೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದೇ ಎಲ್ಲಾ ಸಮಸ್ಯೆಗಳ ಮೂಲವಾಗಿದ್ದುಮ ಇದನ್ನು ಹತ್ತಿಕ್ಕಿದರೆ ನಮ್ಮ ಸಮಸ್ಯೆಗಳ ಬಹುಪಾಲು ತಂತಾನೆ ಪರಿಹಾರವಾಗುತ್ತದೆ ಎಂದು ಸಿನೋಡ್ ಸದಸ್ಯರಾದ ಧರ್ಮಾಧ್ಯಕ್ಷರುಗಳು ನುಡಿದಿದ್ದಾರೆ.

ಲೆಬಾನನ್ ದೇಶದ ಕುರಿತು ಬಿಷಪ್ ಖೈರಲ್ಲಾ ಮಾತು:

ಅಕ್ಟೋಬರ್ 5 ರಂದು ಸಿನೋಡ್ ಕುರಿತ ಮಾಧ್ಯಮ ಹೇಳಿಕೆಯಲ್ಲಿ ಲೆಬಾನನ್ ಧರ್ಮಾಧ್ಯಕ್ಷ ಮೌನಿರ್ ಖೈರಲ್ಲಾ ಅವರು ಲೆಬಾನನ್ ದುಸ್ಥಿತಿಯ ಕುರಿತು ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರು ಐದು ವರ್ಷದ ಮಗುವಾಗಿದ್ದಾಗ ಅವರ ಪೋಷಕರನ್ನು ಕೊಲೆ ಮಾಡಲಾಯಿತು. ಆದರೂ ಅವರು ತಮ್ಮ ಪೋಷಕರ ಹಂತಕನನ್ನು ಕ್ಷಮಿಸಿದ್ದೇನೆ ಎಂದು ಹೇಳಿದ್ದಾರೆ.

ಲೆಬಾನನ್ ದೇಶವು ಮಧ್ಯಪ್ರಾಚ್ಯದಲ್ಲಿ ಕ್ರೈಸ್ತರು, ಯೆಹೂದ್ಯರು ಹಾಗೂ ಮುಸ್ಲೀಮರು ಶಾಂತಿಯುತವಾಗಿ ಜೀವಿಸಬಹುದಾದ ಒಂದೇ ಒಂದು ದೇಶವಾಗಿದೆ ಎಂದು ಹೇಳಿರುವ ಖೈರಲ್ಲಾ ಅವರು, ಲೆಬಾನನ್ ಶಾಂತಿಯ ದೇಶವಾಗಿದೆ. ಶಾಂತಿಯ ಸಂದೇಶವನ್ನು ತರುವ ದೇಶವಾಗಿದೆ. ಆ ದೇಶದಿಂದ ನಾನು ಕ್ಷಮೆಯ ಸಂದೇಶವನ್ನು ಹೊತ್ತು ತಂದಿದ್ದೇನೆ ಎಂದು ಸಿನೋಡ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇದರೊಂದಿಗೆ ಅವರು ಲೆಬಾನನ್ ದೇಶದ ಪ್ರಸ್ತುತ ಸ್ಥಿತಿಗತಿಗಳು, ಅಲ್ಲಿನ ಜನರ ಅಭಿಲಾಷೆಗಳು, ಶಾಂತಿಯುತ ಬದುಕು, ಸಂಘರ್ಷಗಳ ಕುರಿತು ಮಾತನಾಡಿ, ಎಲ್ಲರೂ ಬಯಸುವುದು ಶಾಂತಿಯನ್ನು. ಈ ಶಾಂತಿಯನ್ನು ನಮ್ಮಲ್ಲಿ ಮೂಡಿಸಬೇಕೆಂದು ಪ್ರಾರ್ಥಿಸುವುದು ನಮ್ಮೆಲ್ಲರ ಕಾಯಕವಾಗಿದೆ ಎಂದು ಅವರು ನುಡಿದಿದ್ದಾರೆ.  

ಹೈಟಿ ಮಹಾಧರ್ಮಾಧ್ಯಕ್ಷರ ಮಾತು

ಮುಂದುವರೆದು ಈ ಪತ್ರಿಕಾಗೋಷ್ಠಿಯಲ್ಲಿ ಹೈಟಿಯ ಮಹಾಧರ್ಮಾಧ್ಯಕ್ಷ ಲೌನೇಯ್ ಸಾತುರ್ನೇ ಅವರು ಮಾತನಾಡಿ "ನಮ್ಮ ದೇಶಗಳಲ್ಲಿ ಉದ್ಭವಿಸಿರುವ ಸಮಸ್ಯೆಗಳು ಇನ್ನೂ ಸಮಸ್ಯೆಗಳಾಗಿ ಉಳಿದಿರಲು ಮುಖ್ಯವಾದ ಕಾರಣ ಈ ಸಮಸ್ಯೆಗಳನ್ನು ಬಗೆಹರಿಸಬೇಕಾದವರು ಮೌನಕ್ಕೆ ಶರಣಾಗಿರುವುದು. ಅವರು ತಮ್ಮ ಕರ್ತವ್ಯಗಳನ್ನು ಮಾಡದೆ ಸುಮ್ಮನಿರುವುದೇ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಹೇಳಿದ್ದಾರೆ.    

05 October 2024, 18:31