ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಸವಾಲಿನ ಪ್ರಶ್ನೆಗಳನ್ನು ಎದುರಿಸಿದ ಸಿನೋಡ್ ನಾಯಕರು

ಅಮೆರಿಕಾದ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸಿನೋಡ್ ಸಭೆಗೆ ಆಗಮಿಸಿದ್ದು, ಸಿನೋಡ್ ನಾಯಕರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ರೋಮ್ ನಗರದ ಸಂತ ಆರನೇ ಪೌಲರ ಸಭಾಂಗಣದಲ್ಲಿ ಈ ಪ್ರಶ್ನೋತ್ತರ ನಡೆದಿದೆ.

ವರದಿ: ವ್ಯಾಟಿಕನ್ ನ್ಯೂಸ್

ಅಮೆರಿಕಾದ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸಿನೋಡ್ ಸಭೆಗೆ ಆಗಮಿಸಿದ್ದು, ಸಿನೋಡ್ ನಾಯಕರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ರೋಮ್ ನಗರದ ಸಂತ ಆರನೇ ಪೌಲರ ಸಭಾಂಗಣದಲ್ಲಿ ಈ ಪ್ರಶ್ನೋತ್ತರ ನಡೆದಿದೆ.

ಅಕ್ಟೋಬರ್ ತಿಂಗಳ ಆರಂಭದಲ್ಲಿ ಪ್ರಾರಂಭವಾದ ಸಿನೋಡ್ ಸಭೆಗಳು ಇವರಿಗೂ ಅನೇಕ ಅಧಿವೇಶನಗಳನ್ನು ಕಂಡಿವೆ. ವಿವಿಧ ವಿಷಯಗಳ ಕುರಿತು ಹಲವಾರು ತಜ್ಞರು ಮಾತನಾಡಿದ್ದಾರೆ ಹಾಗೂ ಅವುಗಳ ಕುರಿತು ಸಾಕಷ್ಟು ಚರ್ಚೆ ಹಾಗೂ ಜಿಜ್ಞಾಸೆಗಳು ನಡೆದಿವೆ. ಇದೀಗ ಅಮೆರಿಕಾ ದೇಶದ ವಿವಿಧ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಸಿನೋಟ್ ಸಮಾವೇಶದ ನಾಯಕರುಗಳಿಗೆ ಸವಾಲಿನ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ಕಾರ್ಡಿನಲ್ ಮಾರಿಯೋ ಗ್ರೆಥ್ ಹಾಗೂ ಕಾರ್ಟಿನಲ್ ಜಿಯಾನ್ ಕ್ಲಾಡ್ ಹೊಲೆರಿಚ್ ಅವರು ಉತ್ತರವನ್ನು ನೀಡಿದ್ದಾರೆ.

ವಿಭಿನ್ನ ಸಂಸ್ಕೃತಿಯಲ್ಲಿ ವಿಶ್ವಾಸವನ್ನು ಹೇಗೆ ಪ್ರಕಟಿಸುವುದು ಎಂಬ ಕುರಿತು ವಿದ್ಯಾರ್ಥಿನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾರ್ಡಿನಲ್ ಗ್ರೇಕ್, ಈಗಾಗಲೇ ಧರ್ಮಸಭೆಯು ವಿವಿಧ ರೀತಿಯ ಒಳಗೊಳ್ಳುವಿಕೆ ಕಾರ್ಯಕ್ರಮಗಳನ್ನು ಆರಂಭಿಸಿದ್ದು, ಇವುಗಳ ಉದ್ದೇಶ ವಿವಿಧ ಸಂಸ್ಕೃತಿಗಳಂತೆಯೇ, ಅವುಗಳನ್ನು ಒಳಗೊಂಡು ಕ್ರೈಸ್ತ ವಿಶ್ವಾಸವನ್ನು ಪ್ರಕಟಿಸುವುದು ಹೇಗೆ ಎಂಬ ಕುರಿತು ಉತ್ತರಗಳನ್ನು ಕಂಡುಕೊಳ್ಳುವುದಾಗಿದೆ. ಇದಕ್ಕೂ ಮುಂಚಿತವಾಗಿ, ಜನರನ್ನು ಆಲಿಸುವ ಕಾರ್ಯಕ್ರಮಗಳು ಧರ್ಮಸಭೆಯಲ್ಲಿ ನಡೆದಿದ್ದವು. ಆದರೆ ಪ್ರಸ್ತುತ ನಡೆಯುತ್ತಿರುವ ಸಿನೋಡ್ ಸಭೆಗಳಂತಹ ಐತಿಹಾಸಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ಇದೇ ಮೊದಲಾಗಿದೆ. ಧರ್ಮಸಭೆಯು ವಿಭಿನ್ನ ಸಂಸ್ಕೃತಿ ಹಾಗೂ ಆಚರಣೆಗಳಲ್ಲಿ, ನೆಲ ಮೂಲ ಸಂಸ್ಕೃತಿಯನ್ನು ಹಾಸು ಹೊಕ್ಕಾಗಿಸಿಕೊಂಡು, ಕ್ರೈಸ್ತ ವಿಶ್ವಾಸವನ್ನು ಅನುಸರಿಸುವುದರ ಕುರಿತು ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು ಧರ್ಮಸಭೆಯು ಹೆಚ್ಚು ಹೆಚ್ಚಾಗಿ ಜನರ ಧ್ವನಿಯನ್ನು ಆಲಿಸಲು ಉತ್ಸುಕವಾಗಿದೆ. ಭಕ್ತಾದಿಗಳೇ ಧರ್ಮಸಭೆಯಾಗಿರುವಾಗ ಅದರ ಧ್ವನಿಯನ್ನು ಕೇಳಿಸಿಕೊಳ್ಳುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಧರ್ಮಸಭೆಯು ಸಂಪ್ರದಾಯಿಕ ಮಾಧ್ಯಮಗಳು ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕವೂ ಸಹ ಅನೇಕ ಕಾರ್ಯಕ್ರಮಗಳನ್ನು ಹಾಗೂ ಅನೇಕ ರೂಪರೇಶೆಗಳನ್ನು ಹಮ್ಮಿಕೊಂಡಿದ್ದು ಅವುಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದು ಹೇಳಿದರು.

19 October 2024, 17:51