ವ್ಯಾಟಿಕನ್ನಿನ ದೀಪಾವಳಿ ಸಂದೇಶ: ದೇವರ ಮಕ್ಕಳಾಗಿ ನಾವು ಕೈ ಜೋಡಿಸಬೇಕು

ವ್ಯಾಟಿಕನ್ನಿನ ಅಂತರ್-ಧರ್ಮೀಯ ಸಂವಾದ ಆಯೋಗವು ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವ ಎಲ್ಲಾ ಹಿಂದೂ ಸಮುದಾಯದವರಿಗೆ ಹಬ್ಬದ ಶುಭಾಶಯಗಳನ್ನು ಕೋರಿದೆ. ಇದೇ ಸಂದರ್ಭದಲ್ಲಿ ಹಿಂದೂಗಳು ಹಾಗೂ ಕ್ರೈಸ್ತರು ಇತರೆ ಧರ್ಮದವರೊಂದಿಗೆ ಕರಗಳನ್ನು ಜೋಡಿಸಿ ಸೌಹಾರ್ಧತೆಯನ್ನು ಸಾರಬೇಕಿದೆ ಎಂದು ಹೇಳಿದೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ವ್ಯಾಟಿಕನ್ನಿನ ಅಂತರ್-ಧರ್ಮೀಯ ಸಂವಾದ ಆಯೋಗವು ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವ ಎಲ್ಲಾ ಹಿಂದೂ ಸಮುದಾಯದವರಿಗೆ ಹಬ್ಬದ ಶುಭಾಶಯಗಳನ್ನು ಕೋರಿದೆ. ಇದೇ ಸಂದರ್ಭದಲ್ಲಿ ಹಿಂದೂಗಳು ಹಾಗೂ ಕ್ರೈಸ್ತರು ಇತರೆ ಧರ್ಮದವರೊಂದಿಗೆ ಕರಗಳನ್ನು ಜೋಡಿಸಿ ಸೌಹಾರ್ಧತೆಯನ್ನು ಸಾರಬೇಕಿದೆ ಎಂದು ಹೇಳಿದೆ. 

"ಬೆಳಕಿನ ಮೂಲವಾಗಿರುವ ದೇವರು ನಿಮ್ಮ ಹೃದಯಗಳನ್ನು ತುಂಬಲಿ ಹಾಗೂ ನಿಮ್ಮ ಕುಟುಂಬಗಳನ್ನು ಹರಸಿ, ಆಶೀರ್ವದಿಸಲಿ ಎಂದು ವ್ಯಾಟಿಕನ್ನಿನ ಅಂತರ್-ಧರ್ಮೀಯ ಸಂವಾದ ಆಯೋಗವು ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವ ಎಲ್ಲಾ ಹಿಂದೂ ಸಮುದಾಯದವರಿಗೆ ಹಬ್ಬದ ಶುಭಾಶಯಗಳನ್ನು ಕೋರಿದೆ. 

ಈ ಆಯೋಗದ ಅಧಿಕಾರಿಗಳ ಪ್ರಕಾರ "ದಿನೇ ದಿನೇ ದೇಶಗಳು ಬಹುತ್ವದಿಂದ, ಬಹುಸಾಂಸ್ಕೃತಿಕವಾಗುತ್ತಿದ್ದು, ಹಿಂದೆಂದಿಗಿಂತಲೂ ಈಗ ಸೌಹಾರ್ದತೆಯನ್ನು ಹೆಚ್ಚಿಸುವ ಹಾಗೂ ಆ ಮನೋಭಾವವನ್ನು ಮೂಡಿಸುವ ಅವಶ್ಯಕತೆ ಇದೆ" ಎಂದು ಹೇಳಿದ್ದಾರೆ.

ಮುಂದುವರೆದು, ಈ ಸಂದೇಶದಲ್ಲಿ ಜಗತ್ತಿನಲ್ಲಿ ಶಾಂತಿ ಹಾಗೂ ಸಾಮರಸ್ಯವನ್ನು ಕದಡುವ ಎಲ್ಲಾ ರೀತಿಯ ಅಂಶಗಳನ್ನು ನಾವು ತೊಡೆದು ಹಾಕಬೇಕಿದೆ. ಯಾವುದೇ ರೀತಿಯಲ್ಲಿ ನಾವು ಕೆಲವು 'ಸಮಾಜ ವಿರೋಧಿ' ಗಳ ಕೃತ್ಯಕ್ಕೆ ಬಲಿಯಾಗದೆ, ಶಾಂತಿ ಹಾಗೂ ಸಾಮರಸ್ಯವನ್ನು ಉತ್ತೇಜಿಸಬೇಕು ಎಂದು ಈ ಸಂದೇಶವು ಹೇಳಿದೆ.

24 October 2024, 16:37