ಹುಡುಕಿ

ವಿಶ್ವ ಕುಟುಂಬಗಳ ಭೇಟಿಗೆ 30 ವರ್ಷಗಳ ಸಂಭ್ರಮ

ಮೂವರು ವಿಶ್ವಗುರುಗಳ ಅವಧಿಯಲ್ಲಿ ಹೇಗೆ ವಿಶ್ವ ಕುಟುಂಬಗಳ ಭೇಟಿ ಎಂಬ ಕಾರ್ಯಕ್ರಮವು ನಡೆದು ಬಂತು ಎಂಬ ಕುರಿತು ಪುಟ್ಟ ವಿಡಿಯೋ ಸಂದೇಶದ ಮೂಲಕ ತೋರಿಸಲಾಗಿದೆ. 2028ರಲ್ಲಿ ನಡೆಯುವ ವಿಶ್ವ ಕುಟುಂಬಗಳ ಭೇಟಿಗೆ ಸದಸ್ಯರು ಕಾತುರದಿಂದ ಕಾಯುತ್ತಿದ್ದಾರೆ.

ವರದಿ: ಫ್ರಾನ್ಸಿಸ್ಕ ಮರ್ಲೋ, ಅಜಯ್ ಕುಮಾರ್

ಮೂವರು ವಿಶ್ವಗುರುಗಳ ಅವಧಿಯಲ್ಲಿ ಹೇಗೆ ವಿಶ್ವ ಕುಟುಂಬಗಳ ಭೇಟಿ ಎಂಬ ಕಾರ್ಯಕ್ರಮವು ನಡೆದು ಬಂತು ಎಂಬ ಕುರಿತು ಪುಟ್ಟ ವಿಡಿಯೋ ಸಂದೇಶದ ಮೂಲಕ ತೋರಿಸಲಾಗಿದೆ. 2028ರಲ್ಲಿ ನಡೆಯುವ ವಿಶ್ವ ಕುಟುಂಬಗಳ ಭೇಟಿಗೆ ಸದಸ್ಯರು ಕಾತುರದಿಂದ ಕಾಯುತ್ತಿದ್ದಾರೆ.

1994ರಲ್ಲಿ ಡಿಸೆಂಬರ್ 8ರಂದು ಅಂದರೆ 30 ವರ್ಷಗಳ ಹಿಂದೆ ವಿಶ್ವಗುರು ದ್ವಿತೀಯ ಜಾನ್ ಪೌಲರು ವಿಶ್ವದ ಕ್ರೈಸ್ತ ಕುಟುಂಬಗಳು ರೋಮ್ ನಗರದಲ್ಲಿ ಬಂದು ಪರಸ್ಪರ ಭೇಟಿಯಾಗಬೇಕು ಎಂಬ ಕರೆಯನ್ನು ನೀಡಿದರು. 

ಈ ಪುಟ್ಟ ವಿಡಿಯೋ ಸಂದೇಶದಲ್ಲಿ ಕುಟುಂಬಗಳ ಪೀಠದ ಉಸ್ತುವಾರಿಯಾಗಿರುವ ಕಾರ್ಡಿನಲ್ ಕೆವಿನ್ ಫಾರೆಲ್ ಅವರು ವಿಶ್ವಗುರುಗಳ ಪಾಲನಾ ಅಧಿಕಾರದಡಿಯಲ್ಲಿ ಹೇಗೆ ಕುಟುಂಬಗಳು ಧರ್ಮಸಭೆಯ ಅವಿಭಾಜ್ಯ ಅಂಗಗಳಾಗಿವೆ ಎಂಬುದನ್ನು ವಿವರಿಸಿದ್ದಾರೆ. ಇದರ ಜೊತೆಗೆ ವಿವಿಧ ವಿಶ್ವಗುರುಗಳು ವಿವಿಧ ಶೀರ್ಷಿಕೆಗಳ ಕುರಿತು ನೀಡಿರುವ ಒಂದು ನಿಮಿಷದ ಪ್ರಬೋಧನೆ ಹಾಗೂ ಚಿಂತನೆಗಳನ್ನು ಈ ವಿಡಿಯೋ ಸಂದೇಶ ಒಳಗೊಂಡಿದೆ. 

ಮೊದಲ ವಿಶ್ವ ಕುಟುಂಬಗಳ ಭೇಟಿಯಿಂದ ಇಲ್ಲಿಯವರೆಗೂ ಈ ಕಾರ್ಯಕ್ರಮವು ಕುಟುಂಬಗಳು ಹೇಗೆ ಧರ್ಮಸಭೆಯ ಜೀವಾಳವಾಗಿದೆ ಎಂಬುದನ್ನು ಸೂಚಿಸುತ್ತಾ ಬಂದಿವೆ.  

08 October 2024, 18:18