ಹುಡುಕಿ

ಶುಭ ಸಂದೇಶ ಪ್ರಸಾರಕ್ಕಾಗಿ ಡಿಜಿಟಲ್ ಉಪಕರಣಗಳನ್ನು ಬಳಸಿಕೊಳ್ಳಲು ಕಥೋಲಿಕ ಸಂವಹನಕಾರರಿಗೆ ಭಾರತದ ಧರ್ಮಸಭೆ ಕರೆ

ಇತ್ತೀಚಿಗೆ ಭಾರತದ ಬಿಹಾರ ರಾಜ್ಯದಲ್ಲಿ ಅಲ್ಲಿನ ವಿವಿಧ ಧರ್ಮಕ್ಷೇತ್ರಗಳಿಗೆ ಸಿಸಿಬಿಐ ಮಾಧ್ಯಮ ಸೇವೆ ಆಯೋಗದ ವತಿಯಿಂದ ಸಾಮಾಜಿಕ ಸಂವಹನದ ಕುರಿತು ಅರಿವು ಮೂಡಿಸುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಗಾರದಲ್ಲಿ ಗುರುಗಳು ಹಾಗೂ ಧಾರ್ಮಿಕ ಸಹೋದರ ಸಹೋದರಿಯರು ಶುಭ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಡಿಜಿಟಲ್ ಉಪಕರಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಒತ್ತಿ ಹೇಳಲಾಯಿತು.

ವರದಿ: ಲಿಕಾಸ್ ನ್ಯೂಸ್, ಕ್ಯಾಥೊಲಿಕ್ ಕನೆಕ್ಟ್

ಇತ್ತೀಚಿಗೆ ಭಾರತದ ಬಿಹಾರ ರಾಜ್ಯದಲ್ಲಿ ಅಲ್ಲಿನ ವಿವಿಧ ಧರ್ಮಕ್ಷೇತ್ರಗಳಿಗೆ ಸಿಸಿಬಿಐ ಮಾಧ್ಯಮ ಸೇವೆ ಆಯೋಗದ ವತಿಯಿಂದ ಸಾಮಾಜಿಕ ಸಂವಹನದ ಕುರಿತು ಅರಿವು ಮೂಡಿಸುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಗಾರದಲ್ಲಿ ಗುರುಗಳು ಹಾಗೂ ಧಾರ್ಮಿಕ ಸಹೋದರ ಸಹೋದರಿಯರು ಶುಭ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಡಿಜಿಟಲ್ ಉಪಕರಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಒತ್ತಿ ಹೇಳಲಾಯಿತು.

"ಪಯಣಿಸುವ ಧರ್ಮಸಭೆ: ಡಿಜಿಟಲ್ ಪರಿಸರದಲ್ಲಿ ಸಂವಹಿಸುವ ಧರ್ಮಸಭೆ" ಎಂಬ ಶೀರ್ಷಿಕೆಯ ಅಡಿಯಲ್ಲಿ ಭಗಲ್ಪುರ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಬಿಹಾರದ ವಿವಿಧ ಧರ್ಮಕ್ಷೇತ್ರಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು. 

ಈ ಕಾರ್ಯಾಗಾರದಲ್ಲಿ ಆರಂಭಿಕ ಮಾತುಗಳನ್ನಾಡಿದ ಭಗಲ್ಪುರ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಕುರಿಯನ್ ವಲಿಯಾಕಂಡಥಿಲ್ ಅವರು "ಸಾಮಾಜಿಕ ಸಂವಹನ ಕ್ಷೇತ್ರ ಎಂಬುದು ದೇವರು ನಮಗೆ ನೀಡಿರುವ ವರದಾನವಾಗಿದ್ದು, ಇದನ್ನು ಉತ್ತಮವಾಗಿ ಬಳಸಿಕೊಂಡರೆ, ನಾವು ಶುಭಸಂದೇಶವನ್ನು ಪರಿಣಾಮಕಾರಿಯಾಗಿ ಸಾರಬಹುದು" ಎಂದು ಹೇಳಿದರು. ಮುಂದುವರೆದು ಮಾತನಾಡಿದ ಅವರು ಉತ್ತಮ ಭಾಂದವ್ಯವನ್ನು ರೂಪಿಸಲು ಹಾಗೂ ಜನರಿಗೆ ಹತ್ತಿರವಾಗಲು ಧರ್ಮಸಭೆಯು ಸಾಮಾಜಿಕ ತಂತ್ರಜ್ಞಾನವನ್ನು ಸ್ವಾಗತಿಸಿ, ಬಳಸಿಕೊಳ್ಳಬೇಕು ಎಂದು ಹೇಳಿದರು.

ಭಾರತದ ಕಥೋಲಿಕ ಧರ್ಮಾಧ್ಯಕ್ಷರ ಮಂಡಲಿ (ಸಿಸಿಬಿಐ) ಯ ಸಾಮಾಜಿಕ ಮಾಧ್ಯಮ ಸೇವೆ ಆಯೋಗದ ಸಂಚಾಲಕರಾದ ಫಾದರ್ ಡಾ. ಸಿರಿಲ್ ವಿಕ್ಟರ್ ಜೋಸೆಫ್ ಅವರು ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಈ ಸಂದರ್ಭದಲ್ಲಿ ಅವರು ನೆರೆದಿದ್ದ, ಭಾಗವಹಿಯಾರ್ಥಿಗಳಿಗೆ ಧರ್ಮಸಭೆಯ ಪಾಲನಾ ಯೋಜನೆಯ ಕುರಿತು ಮಾಹಿತಿಯನ್ನು ನೀಡಿ, ಹೇಗೆ ಇದನ್ನು ಸಾಕಾರಗೊಳಿಸಲು ಸಾಮಾಜಿಕ ಸಂವಹನದ ಅಗತ್ಯವಿದೆ ಎಂದು ಹೇಳಿದರು.

ಈ ಕಾರ್ಯಾಗಾರದಲ್ಲಿ ನಡೆದ ಚರ್ಚೆಗಳು ಹೇಗೆ ವಿವಿಧ ಧರ್ಮಕ್ಷೇತ್ರಗಳಲ್ಲಿ ಅವರದ್ದೇ ಅಗತ್ಯಗಳ ಕುರಿತ ಸಂವಹನ ಯೋಜನೆಯನ್ನು ರೂಪಿಸಬಹುದು ಎಂಬ ಕುರಿತು ಬೆಳಕನ್ನು ಚೆಲ್ಲಿದವು. ಬಿಹಾರ ಪ್ರಾಂತ್ಯದ ಧರ್ಮಾಧ್ಯಕ್ಷರುಗಳ ಬಳಗದ ಕಾರ್ಯದರ್ಶಿಯಾಗಿರುವ ಫಾದರ್ ರಿಜೇಶ್ ಸೆಬಾಸ್ಟಿಯನ್ ಕೆ. ಅವರು ಈ ಕಾರ್ಯಾಗಾರದ ವಿವಿಧ ಪ್ರಕ್ರಿಯೆಗಳ ಉಸ್ತುವಾರಿಯನ್ನು ವಹಿಸಿದ್ದರು ಹಾಗೂ ಸಿನೋಡ್ ಧರ್ಮಸಭೆಯಾಗಿ ರೂಪುಗೊಳ್ಳಲು ಸಾಮಾಜಿಕ ಸಂವಹನದ ಪ್ರಾಮುಖ್ಯತೆಯ ಕುರಿತು ಹೇಳಿದರು. 

08 November 2024, 16:08