ರೋಮ್ ನಗರದಲ್ಲಿ ದೇವರ ಹತ್ತು ಆಜ್ಞೆಗಳ ಕುರಿತು ಸಂವಾದ ನಡೆಸಲಿರುವ ಕಥೋಲೀಕರು ಹಾಗೂ ಯೆಹೂದ್ಯರು

ರೋಮ್ ನಗರದ ಪೊಂಟಿಫಿಕಲ್ ಹೋಲಿಕ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಯಹೂದ್ಯರು ಹಾಗೂ ಕಥೋಲಿಕರಿಗಾಗಿ ದೇವರ ಹತ್ತು ಆಜ್ಞೆಗಳ ಕುರಿತ ಸಂವಾದಾತ್ಮಕ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಇದು ವಿವಿಧ ದೃಷ್ಟಿಕೋನಗಳ ನಡುವೆ ಬಾಂಧವ್ಯವನ್ನು ಬೆಸೆಯುವ ಉಪಕ್ರಮವಾಗಿದೆ.

ಫಾದರ್ ಪಾವ್ಲ್ ರೈಟಲ್, ಅಜಯ್ ಕುಮಾರ್

ರೋಮ್ ನಗರದ ಪೊಂಟಿಫಿಕಲ್ ಹೋಲಿಕ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಯಹೂದ್ಯರು ಹಾಗೂ ಕಥೋಲಿಕರಿಗಾಗಿ ದೇವರ ಹತ್ತು ಆಜ್ಞೆಗಳ ಕುರಿತ ಸಂವಾದಾತ್ಮಕ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಇದು ವಿವಿಧ ದೃಷ್ಟಿಕೋನಗಳ ನಡುವೆ ಬಾಂಧವ್ಯವನ್ನು ಬೆಸೆಯುವ ಉಪಕ್ರಮವಾಗಿದೆ.

ದೇವರ ಹತ್ತು ಆಜ್ಞೆಗಳು ಯಹೂದ್ಯ ಹಾಗೂ ಕ್ರೈಸ್ತ ಧರ್ಮಗಳ ಬುನಾದಿಯಾಗಿದ್ದು ಅವುಗಳ ಕುರಿತು ಅರಿತುಕೊಳ್ಳಲು ಹಾಗೂ ಎರಡು ಸಮುದಾಯದ ನಡುವೆ ಹಂಚಿಕೆಯ ಮೌಲ್ಯಗಳನ್ನು ವೃದ್ಧಿಸಲು ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೋಲಿ ಕ್ರಾಸ್ ವಿಶ್ವವಿದ್ಯಾನಿಲಯವು ಹೇಳಿದೆ.

ಈ ಕಾರ್ಯಗಾರಕ್ಕೆ ಎಂದಿನಂತೆ ವಿಶ್ವಗುರು ಫ್ರಾನ್ಸಿಸ್ ಅವರೇ ಸ್ಪೂರ್ತಿಯಾಗಿದ್ದಾರೆ. ವಿಶ್ವಗುರು ಫ್ರಾನ್ಸಿಸ್ ಅವರು ಎಂದಿಗೂ ಸಹ ಸಂವಾದ ಹಾಗೂ ಸಮಾಲೋಚನೆಯ ಪರವಾಗಿದ್ದು, ನಮ್ಮ ನಡುವಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಇವುಗಳ ಮೂಲಕವೇ ಬಗೆಹರಿಸಿಕೊಳ್ಳಬಹುದು ಎಂದು ಬಹಳ ಗಟ್ಟಿಯಾಗಿ ನಂಬುತ್ತಾರೆ. ವಿಶ್ವಗುರುಗಳ ಪ್ರೇರಣೆ ಹಾಗೂ ಸ್ಪೂರ್ತಿಯಿಂದ, ಯಹೂದ್ಯರು ಹಾಗೂ ಕ್ರೈಸ್ತರ ನಡುವೆ ಹಂಚಿಕೆಯ ಮೌಲ್ಯಗಳು ಹಾಗೂ ಅರ್ಥೈಸುವಿಕೆಯನ್ನು ವೃದ್ಧಿಸಲು ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎನ್ನಲಾಗಿದೆ.

ಯಹೂದ್ಯರು ಹಾಗೂ ಕ್ರೈಸ್ತರು ಸಹೋದರರಾಗಿದ್ದಾರೆ ಏಕೆಂದರೆ ಇಬ್ಬರಿಗೂ ಒಬ್ಬರೇ ತಂದೆಯಾಗಿದ್ದಾರೆ. ಸ್ವರ್ಗದಲ್ಲಿರುವ ಸರ್ವೇಶ್ವರ ತಂದೆಯಾಗಿದ್ದಾರೆ ಎಂದು ಇದರಲ್ಲಿ ಭಾಗವಹಿಸಿದ್ದ ಯಹೂದ್ಯ ಗುರು ಒಬ್ಬರು ಹೇಳಿದ್ದಾರೆ.

08 November 2024, 15:53