ನೂತನ ದೇವಾಲಯದ ಶಂಕುಸ್ಥಾಪನೆಗೆ ಅಜೆರ್ಬೈಜಾನ್ ದೇಶಕ್ಕೆ ಭೇಟಿ ನೀಡಲಿರುವ ಆರ್ಚ್'ಬಿಷಪ್ ಗ್ಯಾಲಗರ್

ವ್ಯಾಟಿಕನ್ನಿನ ವಿದೇಶಾಂಗ ವ್ಯವಹಾರಗಳು ಹಾಗೂ ಅಂತರಾಷ್ಟ್ರೀಯ ಸಂಪರ್ಕಗಳ ಕಾರ್ಯದರ್ಶಿಯಾಗಿರುವ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಗರ್ ಅವರು ಅಜೆರ್ಬೈಜಾನ್ ದೇಶಕ್ಕೆ ಭೇಟಿ ನೀಡಲಿದ್ದಾರೆ. ಇಲ್ಲಿ ಅವರು ಸಂತ ದ್ವಿತೀಯ ಜಾನ್ ಪೌಲ್ ಅವರಿಗೆ ಸಮರ್ಪಿತವಾದ ನೂತನ ದೇವಾಲಯಕ್ಕೆ ಅಡಿಗಲ್ಲನ್ನು ಹಾಕಲಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಇಲ್ಲಿನ ರಾಜಧಾನಿ ಬಾಕುನಲ್ಲಿ ನೂತನ ದೇವಾಲಯಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸುವುದು ಅವರ ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ. ಇಲ್ಲಿ ಅವರು ಸ್ಥಳೀಯ ಗುರುಗಳು ಹಾಗೂ ಧಾರ್ಮಿಕ ಸಹೋದರ ಸಹೋದರಿಯರನ್ನು ಭೇಟಿ ಮಾಡಿ, ಅಲ್ಲಿ ತದನಂತರ ಅವರು ಮರ್ಕೆಝಿ ಎಂಬ ಶೈಕ್ಷಣಿಕ ಸಂಸ್ಥೆಗೆ ಭೇಟಿ ನೀಡಲಿದ್ದಾರೆ. ಮಿಷನರೀಸ್ ಆಫ್ ಚಾರಿಟಿ ಸಭೆಯ ಕನ್ಯಾಸ್ತ್ರೀಯರನ್ನೂ ಸಹ ಇವರು ಭೇಟಿ ಮಾಡಲಿದ್ದಾರೆ.

ಭಾನುವಾರ ಅವರು ಇಲ್ಲಿನ ಅಮಲೋದ್ಭವಿ ಮಾತೆಯ ದೇವಾಲಯದಲ್ಲಿ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ. ತದನಂತರ ಅವರು ಅಲ್ಲಿನ ಸ್ಥಳೀಯ ಮುಸ್ಲಿಂ ಸಹೋದರರೊಂದಿಗೆ ಅಂತರ್-ಧರ್ಮೀಯ ಸಂವಾದವನ್ನು ಹಮ್ಮಿಕೊಳ್ಳಲಿದ್ದಾರೆ.

ಸೋಮವಾರ ಆರ್ಚ್'ಬಿಷಪ್ ಗ್ಯಾಲಘರ್ ಅವರು ಅಝೆರ್ಬೈಜಾನ್ ದೇಶದ ಅಧ್ಯಕ್ಷರಾದ ಇಲಾಮ್ ಅಲಿಯೆವ್ ಅವರನ್ನು ಭೇಟಿ ಮಾಡಲಿದ್ದಾರೆ. ಈ ದೇಶದ ವಿದೇಶಾಂಗ ಸಚಿವರ ಜೊತೆಯೂ ಸಹ ಅವರು ಚರ್ಚಿಸಲಿದ್ದಾರೆ.

13 December 2024, 15:44