2024.04.08 marsiglia Daniel Bourha

ಯುದ್ಧಗ್ರಸ್ಥ ಕ್ಯಾಮರೂನ್'ನಿಂದ ಮಾರ್ಸೆಲ್'ವರೆಗೆ: ಡೇನಿಯೇಲನ ನರಕಸದೃಷ ಪಯಣ

ಕ್ಯಾಮರೂನ್ ದೇಶದ ಕಥೋಲಿಕ ಪ್ರಜೆ ಡ್ಯಾನಿಯೇಲ್ ಬೌರ್ಹ ಯೂರೋಪ್'ಗೆ ತಲುಪುವ ತನ್ನ ಕರುಣಾಜನಕ ಕಥೆಯನ್ನು ವ್ಯಾಟಿಕನ್ ನ್ಯೂಸ್ ಸುದ್ದಿತಾಣಕ್ಕೆ ಹೇಳಿದ್ದಾರೆ. ಫ್ರೆಂಚ್ ಮಾರ್ಸೆಲ್ಲೆಸ್ ಮಹಾಧರ್ಮಕ್ಷೇತ್ರ ಆಯೋಜಿಸಿದ್ದ ವಲಸಿಗರ ಸಮಾವೇಷದಲ್ಲಿ ಆತ ಭಾಗವಹಿಸುತ್ತಿದ್ದ ಸಂದರ್ಭದಲ್ಲಿ ತನ್ನ ಕಥೆಯನ್ನು ಹೇಳಿಕೊಂಡಿದ್ದಾನೆ.

ವರದಿ: ಡೆಲ್ಫಿನ್ ಅಲ್ಲೈರ್, ಅಜಯ್ ಕುಮಾರ್

ಕ್ಯಾಮರೊನ್ ದೇಶದಿಂದ ಫ್ರಾನ್ಸ್ ದೇಶದವರೆಗೆ ಹೇಗೆ ವಲಸಿಗ ಡ್ಯಾನಿಯೇಲ್ ಬದುಕು ಬದಲಾಯಿತೆಂದು ಆತ ವಲಸಿಗ ಸಮಾವೇಷದಲ್ಲಿ ಪಾಲ್ಗೊಳ್ಳುವಾಗ ವ್ಯಾಟಿಕನ್ ಸುದ್ದಿತಾಣಕ್ಕೆ ಮಾಹಿತಿ ನೀಡಿದ್ದಾನೆ. 

ಡ್ಯಾನಿಯೇಲ್ ಬೌರ್ಹ ಉತ್ತರ ಕ್ಯಾಮರೋನ್ ಪ್ರದೇಶದಲ್ಲಿನ ತನ್ನ ಅಜ್ಜ-ಅಜ್ಜಿಯರ ಮನೆಗೆ ಹೋದ ಎರಡು ವಾರದ ಅಲ್ಲಿ ನಾಗರೀಕ ಯುದ್ಧ ಆರಂಭವಾಯಿತು. ಅಲ್ಲಿನ ಹಳ್ಳಿಯ ಮೇಲೆ ಬೋಕೋ ಹರಾಮ್ ಭಯೋತ್ಪಾದಕರು ದಾಳಿ ಮಾಡಿದಾಗ, ಅಲ್ಲಿಂದ ಪರಾರಿಯಾದ ಡ್ಯಾನಿಯೇಲ್ ತಲುಪಿದ್ದು ನೈಜಿರಿಯಾ ಗಡಿ ಪ್ರದೇಶಕ್ಕೆ.

ತಾತ್ಕಾಲಿಕವಾಗಿ ಗಡಿ ಪ್ರದೇಶದಲ್ಲಿ ಕೆಲಸ ಮಾಡಿದ ನಂತರ ಒಂದಷ್ಟು ಹಣವನ್ನು ಕೂಡಿಸಿಕೊಂಡಾಗ, ತನ್ನ ಸ್ನೇಹಿತ ಲಿಬಿಯಾ ಮೂಲಕ ಜರ್ಮನಿಗೆ ಹೋದದನ್ನು ಕಂಡ ಡ್ಯಾನಿಯೇಲ್ ತಾನೂ ಸಹ ಜರ್ಮನಿಗೆ ಹೋಗಿ ಜೀವನವನ್ನು ಕಟ್ಟಿಕೊಳ್ಳಬೇಕೆಂಬ ಮನಸ್ಸಾಗುತ್ತದೆ. ಆದರೆ, ಅದು ಸಫಲವಾಗುವುದಿಲ್ಲ.

ನೈಜರ್ ದೇಶದ ಮರುಭೂಮಿ ಪ್ರದೇಶದಲ್ಲಿ ಅಕ್ಷರಶಃ ಎಲ್ಲಾ ರೀತಿಯ ಸಂಕಷ್ಟಗಳನ್ನು ಅನುಭವಿಸುವ ಡ್ಯಾನಿಯೇಲ್ ಕೊನೆಗೆ ಅಲ್ಜೀರಿಯಾದಿಂದ ಹೊರಟು ಲಿಬಿಯಾ ದೇಶ ತಲುಪುತ್ತಾನೆ. ಲಿಬಿಯಾದಲ್ಲಿ ಪರಿಸ್ಥಿತಿ ಶೋಚನೀಯವಾಗಿರುತ್ತದೆ. ಪದೇ ಪದೇ ಗುಂಡಿನ ದಾಳಿ ನಡೆಯವುದು, ಕಟ್ಟಡಗಳ ಮೇಲೆ ಬಾಂಬ್ ಬೀಳುವುದು ಇತ್ಯಾದಿಗಳಿಂದ ಜರ್ಜರಿತನಾದ ನಂತರ, ಅಲ್ಲಿಂದ ಸಮುದ್ರ ಪ್ರದೇಶಕ್ಕೆ ಹೋದಾಗ ಆತ ತಂಗಿದ್ದ ಪ್ರದೇಶದ ಮೇಲೆಯೂ ಸಹ ದಾಳಿ ನಡೆದು ಅತಂತ್ರನಾಗುತ್ತಾನೆ.

ಕೊನೆಗೆ, ಹೇಗೋ ಸಮುದ್ರದ ಮೂಲಕ ಹಡಗಿನಲ್ಲಿ ಪ್ರಯಾಣಿಸಿ, ಇಟಲಿ ದೇಶವನ್ನು ತಲುಪುವ ಆತನಿಗೆ ಹೊಸ ಜೀವನ ಸಿಕ್ಕಿದಂತಾಗುತ್ತದೆ. ಇಟಲಿಯಲ್ಲಿ ವಲಸಿಗ ನೆರವು ಕೇಂದ್ರಗಳು ಈತನಿಗೆ ತೋಟಗಾರಿಕೆಯಲ್ಲಿ ತರಭೇತಿ ನೀಡಿ, ಅವನು ತನ್ನ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಮಾಡುತ್ತವೆ. ಈಗ ತನ್ನದೇ ವ್ಯವಹಾರವನ್ನು ಹೊಂದಿರುವ ಡ್ಯಾನಿಯೇಲ್, ಎಂಟು ವರ್ಷಗಳ ನಂತರ ಮದುವೆಯಾಗಿ ಆತನಿಗೆ ಇಬ್ಬರು ಮಕ್ಕಳಿದ್ದಾರೆ.

ಮರುಭೂಮಿಯಿಂದ ತೋಟಗಾರಿಕೆಗೆ ಅವನ ವಿಮೋಚನೆಯು ಅವನ ಬದುಕಿನ ಕಹಿಗಳನ್ನೆಲ್ಲಾ ಮರೆಸಿ, ಅತನ ಬದುಕನ್ನು ಬದಲಿಸಿದೆ.         

09 April 2024, 17:12