ಹುಡುಕಿ

ಪೋಪ್ ಫ್ರಾನ್ಸಿಸ್ ಗರ್ಭವತಿ ಮಹಿಳೆಯ ಹೊಟ್ಟೆಯಲ್ಲಿರುವ ಶಿಶುವಿಗೆ ಆಶೀರ್ವಾದ ಮಾಡುತ್ತಿರುವುದು (ಫೈಲ್ ಫೋಟೋ) ಪೋಪ್ ಫ್ರಾನ್ಸಿಸ್ ಗರ್ಭವತಿ ಮಹಿಳೆಯ ಹೊಟ್ಟೆಯಲ್ಲಿರುವ ಶಿಶುವಿಗೆ ಆಶೀರ್ವಾದ ಮಾಡುತ್ತಿರುವುದು (ಫೈಲ್ ಫೋಟೋ) 

ಯುರೋಪಿಯನ್ ಒಕ್ಕೂಟ ಧರ್ಮಾಧ್ಯಕ್ಷರು: ಗರ್ಭಪಾತ ಎಂದಿಗೂ ಮೂಲಭೂತ ಹಕ್ಕಾಗುವುದಿಲ್ಲ

ಯೂರೋಪಿಯನ್ ಒಕ್ಕೂಟದ ಸಂವಿಧಾನದಕ್ಕೆ ಗರ್ಭಪಾತವನ್ನು ಒಂದು ಮೂಲಭೂತ ಹಕ್ಕು ಎಂಬುದಾಗಿ ಸೇರಿಸಬಹುದೇ ಎಂಬ ಕುರಿತು ಏಪ್ರಿಲ್ 11 ರಂದು ನಡೆಯಲಿರುವ ಮತದಾನಕ್ಕೂ ಮುಂಚಿತವಾಗಿ, ಯುರೋಪಿಯನ್ ಒಕ್ಕೂಟದ ಧರ್ಮಾಧ್ಯಕ್ಷರುಗಳು ಈ ಪ್ರಸ್ತಾವನೆಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದು, ಸಿದ್ಧಾಂತಗಳನ್ನು ಹೇರಲಾಗುತ್ತಿದೆ ಎಂದು ದೂರಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೊ ಲುಬೋವ್, ಅಜಯ್ ಕುಮಾರ್

ಒಬ್ಬ ಮನುಷ್ಯ, ಯಾವುದೇ ಸಂದರ್ಭದಲ್ಲಿ ಹಾಗೂ ಪ್ರತಿ ಹಂತದ ಬೆಳವಣಿಗೆಯಲ್ಲಿ, ಪವಿತ್ರವಾಗಿದ್ದು, ಉಲ್ಲಂಘಿಸಲಾಗದ ವ್ಯಕ್ತಿಯಾಗಿದ್ದಾನೆ. ಒಮ್ಮೆ ಈ ಮನೋಭಾವ ಮಾಯವಾದರೆ ಮಾನವ ಹಕ್ಕುಗಳ ರಕ್ಷಣೆಯ ಎಲ್ಲಾ ಬುನಾದಿಗಳು ಸಹ ಬಿದ್ದುಹೋಗುತ್ತವೆ ಎಂದು ಯುರೋಪಿಯನ್ ಒಕ್ಕೂಟದ ಧರ್ಮಾಧ್ಯಕ್ಷರುಗಳು ಒಮ್ಮತದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 

ಗರ್ಭಪಾತದ ಹಕ್ಕನ್ನು ಯುರೋಪಿಯನ್ ಸಂವಿಧಾನಕ್ಕೆ ಸೇರಿಸಬೇಕು ಎಂಬ ಕುರಿತು ಗುರುವಾರ ನಡೆಯಲಿರುವ ಮತದಾನದ ಹಿನ್ನೆಲೆಯಲ್ಲಿ ಯುರೋಪಿಯನ್ ಒಕ್ಕೂಟದ ಧರ್ಮಾಧ್ಯಕ್ಷರು ಈ ಹೇಳಿಕೆಯನ್ನು ಪ್ರಕಟಿಸಿದ್ದಾರೆ. 

ವ್ಯಾಟಿಕನ್ನಿನ ವಿಶ್ವಾಸದ ಪೀಠವು ಗರ್ಭಪಾತವನ್ನು "ಅತ್ಯಂತ ಗಂಭೀರ ಹಾಗೂ ಶೋಚನೀಯ" ಆಚರಣೆ ಮತ್ತು ಮಾನವ ಘನತೆಯ ಉಲ್ಲಂಘನೆ ಎಂದು ಕರೆದು, "ಡಿಗ್ನಿತಾಸ್ ಇನ್ಫಿನಿತಾ" ಎಂಬ ದಾಖಲೆಯನ್ನು ಪ್ರಕಟಿಸಿದ ನಂತರ ಯೂರೋಪಿಯನ್ ಒಕ್ಕೂಟದ ಕಥೋಲಿಕ ಧರ್ಮಾಧ್ಯಕ್ಷರು ತಮ್ಮ ಹೇಳಿಕೆಯನ್ನು ಪ್ರಕಟಿಸಿದ್ದಾರೆ. 

ಮಹಿಳೆಯರು ಹಾಗೂ ಅವರ ಹಕ್ಕುಗಳ ಉತ್ತೇಜನದ ವಿರುದ್ಧ ಹೋಗುತ್ತದೆ   

"ಮಹಿಳೆಯರ ಉತ್ತೇಜನ ಹಾಗೂ ಜೀವಿಸುವ ಹಕ್ಕಿಗೆ ಹೌದು; ಗರ್ಭಪಾತ ಮತ್ತು ಸೈದ್ಧಾಂತಿಕ ಹೇರಿಕೆಗೆ ಇಲ್ಲ, ಇಲ್ಲ" ಎಂಬ ಶೀರ್ಷಿಕೆಯನ್ನು ಯುರೋಪಿಯನ್ ಒಕ್ಕೂಟದ ಧರ್ಮಾಧ್ಯಕ್ಷರ ಹೇಳಿಕೆಯು ಹೊಂದಿದೆ.

ಒಕ್ಕೂಟದ ಧರ್ಮಾಧ್ಯಕ್ಷರು ಮಹಿಳೆಯರು ತಮ್ಮ ತಾಯ್ತನವನ್ನು ಸ್ವತಂತ್ರವಾಗಿ ಜೀವಿಸುವಂತಹ, ಅದು ಅವರಿಗೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯಾಗಿ, ಮತ್ತು ಒಬ್ಬ ತಾಯಿಯಾಗುವುದೆಂದರೆ ಯಾವುದೇ ರೀತಿಯಲ್ಲಿ ವೈಯಕ್ತಿಕ, ಸಾಮಾಜಿಕ ಅಥವಾ ವೃತ್ತಿಕಾರಕ ನಿಯಂತ್ರಣವಲ್ಲ ಎಂಬ ನಂಬಿಕೆಯ ಯೂರೋಪ್ ಸಮಾಜವನ್ನು ಸ್ಥಾಪಿಸಲು ಕಾರ್ಯನಿರ್ವಹಿಸುವಲ್ಲಿ ತಮ್ಮ ಬಧ್ಧತೆಯನ್ನು ವ್ಯಕ್ತಪಡಿಸಿದರು.

"ಗರ್ಭಪಾತವನ್ನು ಉತ್ತೇಜಿಸುವುದು ಮಹಿಳೆಯರನ್ನು ಉತ್ತೇಜಿಸುವುದರ ವಿರುದ್ಧವಾಗಿ ಹೋಗುತ್ತದೆ" ಎಂದು ಧರ್ಮಾಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ. ಮುಂದುವರೆದು "ಗರ್ಭಪಾತ ಎಂದಿಗೂ ಮೂಲಭೂತ ಹಕ್ಕಾಗಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. 

ಎಲ್ಲಾ ಮಾನವ ಹಕ್ಕುಗಳ ಮೂಲಭೂತ ಹಕ್ಕಾಗಿದೆ    

"ಜೀವಿಸುವ ಹಕ್ಕು ಎಂಬುದು ಎಲ್ಲಾ ಮಾನವ ಹಕ್ಕುಗಳ ಮೂಲ ಹಕ್ಕಾಗಿದೆ. ಜೀವನದ ಹಕ್ಕು ಎಂಬುದು ಅತ್ಯಂತ ಸೂಕ್ಷ್ಮ ಹಾಗೂ ರಕ್ಷಣಾರಹಿತ ಹಕ್ಕಾಗಿದೆ. ಗರ್ಭದಲ್ಲಿನ ಮಗುವಿನಂತೆ, ವಲಸಿಗ, ವಯೋವೃದ್ಧ, ವಿಕಲಚೇತನ ಹಾಗೂ ವ್ಯಾದಿಸ್ತರು ಅವರ ಹಕ್ಕುಗಳಿಗಾಗಿ ಸದಾ ಹೋರಾಡಬೇಕಿದೆ." ಎಂದು ಧರ್ಮಾಧ್ಯಕ್ಷರುಗಳು ಹೇಳಿದ್ದಾರೆ. 

ಸಂವಿಧಾನವು ಎಲ್ಲರೂ ಗುರುತಿಸದ ಹಕ್ಕುಗಳನ್ನು ಹೊಂದಲಾಗುವುದಿಲ್ಲ  

ತಮ್ಮ ಹೇಳಿಕೆಯಲ್ಲಿ ಯುರೋಪಿಯನ್ ಒಕ್ಕೂಟದ ಧರ್ಮಾಧ್ಯಕ್ಷರುಗಳು "ಒಕ್ಕೂಟದ ಸಂವಿಧಾನವು ಎಲ್ಲರೂ ಗುರುತಿಸದ ಹಾಗೂ ವಿಭಜನಕಾರಿಯಾಗಿರುವ ಹಕ್ಕುಗಳನ್ನು ಹೊಂದಲಾಗುವುದಿಲ್ಲ. ಯೂರೋಪಿಯನ್ ಒಕ್ಕೂಟದ ಸಂವಿಧಾನದಲ್ಲಿ ಈವರೆಗೂ ಗರ್ಭಪಾತದ ಹಕ್ಕನ್ನು ಮೂಲಭೂತ ಹಕ್ಕೆಂದು ಪರಿಗಣಿಸಿರುವುದಿಲ್ಲ." ಎಂದು ಹೇಳಿದ್ದಾರೆ.   

09 April 2024, 13:33