ಎರಡು ವಾರಗಳ ಕಾರ್ಯಾಚರಣೆಯ ನಂತರ, ಗಾಜಾದ ಅತ್ಯಂತ ದೊಡ್ಡ ಆಸ್ಪತ್ರೆಯಾದ ಅಲ್-ಶಿಫಾದಿಂದ ಇಸ್ರಯೇ ಎರಡು ವಾರಗಳ ಕಾರ್ಯಾಚರಣೆಯ ನಂತರ, ಗಾಜಾದ ಅತ್ಯಂತ ದೊಡ್ಡ ಆಸ್ಪತ್ರೆಯಾದ ಅಲ್-ಶಿಫಾದಿಂದ ಇಸ್ರಯೇ  (ANSA)

ಇಸ್ರೇಲ್ ಮಿಲಿಟರಿ ಪಡೆಗಳು ಗಾಜಾದ ಅಲ್-ಶಿಫಾ ಆಸ್ಪತ್ರೆಯಿಂದ ಹಿಂದೆ ಸರಿದಿವೆ

ಗಾಜಾ ಪಟ್ಟಿಯ ಕುರಿತು ಪೋಪ್ ಫ್ರಾನ್ಸಿಸ್ ಮನವಿ ಮಾಡಿದ ಒಂದು ದಿನದ ನಂತರ, ಎರಡು ವಾರಗಳ ಕಾರ್ಯಾಚರಣೆಯ ನಂತರ, ಗಾಜಾದ ಅತ್ಯಂತ ದೊಡ್ಡ ಆಸ್ಪತ್ರೆಯಾದ ಅಲ್-ಶಿಫಾದಿಂದ ಇಸ್ರಯೇಲಿ ಪಡೆಗಳು ಹಿಂದೆ ಸರಿದಿವೆ.

ವರದಿ: ನೇಥನ್ ಮೋರ್ಲೆ

ಗಾಜಾದಲ್ಲಿ ಇಸ್ರೇಲಿ ಪಡೆಗಳು ದೊಡ್ಡ ವಿನಾಶದ ಚಿತ್ರಣವನ್ನು ಬಿಟ್ಟುಹೋಗಿವೆ. ಇಸ್ರಯೇಲ್ ಮಿಲಿಟರಿಯ ಪ್ರಕಾರ ಸುಮಾರು 200 ಶಸ್ತ್ರಸಜ್ಜಿತ ದಾಳಿಕೋರರನ್ನು ಕೊಲ್ಲಲಾಗಿದ್ದು, 900 ಜನ ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸಲಾಗಿದೆ.

ಕಳೆದರಾತ್ರಿ, ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮೀನ್ ನೇತನ್ಯಹೂ "ಅಲ್-ಶಿಫಾ ಆಸ್ಪತ್ರೆ ಭಯೋತ್ಪಾದಕ ನೆಲೆಯಾಗಿ ಮಾರ್ಪಟ್ಟಿತ್ತು. ಇಸ್ರೇಲ್ ಪಡೆಗಳು ತಮ್ಮ ಸುಪ್ತ ಹಾಗೂ ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಹಮಾಸ್ ಉಗ್ರರಿಗೆ ಮರ್ಮಾಘಾತ ನೀಡುವಲ್ಲಿ ಯಶಸ್ವಿಯಾಗಿವೆ" ಎಂದು ಹೇಳಿದರು.

ಇದೆ ವೇಳೆ, ನೂರಾರು ಇಸ್ರೆಯೇಲಿ ಪ್ರತಿಭಟನಕಾರರು ಜೆರುಸಲೇಂನಲ್ಲಿರುವ ಇಸ್ರೇಲ್ ಸಂಸತ್ ಭವನದ ಮುಂದೆ ಜಯಾಯಿಸಿ, ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಹೂ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಾ, ಇಡೀ ರಾತ್ರಿ ಪ್ರತಿಭಟನೆಯನ್ನು ನಡೆಸಿದರು. ಅಕ್ಟೋಬರ್ ತಿಂಗಳಲ್ಲಿ ನಡೆದ ಹಮಾಸ್ ದಾಳಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಪ್ರಧಾನಮಂತ್ರಿಯನ್ನು ದೂರಿದ ಪ್ರತಿಭಟನಾಕಾರರು, ಚುನಾವಣೆಗಳು ಈಗ ನಡೆದರೆ ಅದು ಇಸ್ರಯೇಲ್ ದೇಶವನ್ನು ಕುಗ್ಗಿಸುತ್ತದೆ ಎಂಬ ಪ್ರಧಾನಮಂತ್ರಿಗಳ ಮಾತಿಗೆ ವಿರೋಧ ವ್ಯಕ್ತಪಡಿಸಿದರು.

ಭಾನುವಾರ, ಗಾಜಾ ಪಟ್ಟಿಯಲ್ಲಿ ಯುದ್ಧ ಆರಂಭವಾದ ನಂತರದ ಅತಿ ದೊಡ್ಡ ಸರ್ಕಾರ-ವಿರೋಧಿ ಪ್ರತಿಭಟನೆಯಲ್ಲಿ ಸಾವಿರಾರು ಇಸ್ರಯೇಲ್ ಜನರು ಪಾಲ್ಗೊಂಡು, ಸರ್ಕಾರದ ವಿರುದ್ಧ ಪ್ರತಿಭಟಿಸಿದರು.

ಇದೇ ವೇಳೆ, ಪ್ಯಾಲೆಸ್ತೀನ್ ಪ್ರಧಾನಮಂತ್ರಿ ಮಹ್ಮೌದ್ ಅಬ್ಬಾಸ್ ತಂತ್ರಜ್ಞಾನ ಪರಿಣಿತರನ್ನು ಒಳಗೊಂಡಿರುವ ತನ್ನ ಹೊಸ ಸರ್ಕಾರವನ್ನು ಸ್ಥಾಪಿಸಿದರು. ವಿದೇಶಾಂಗ ಸಚಿವರಾಗಿಯೂ ಕಾರ್ಯನಿರ್ವಹಿಸಲಿರುವ ಪ್ರಧಾನಮಂತ್ರಿಗಳು, ಪ್ಯಾಲೆಸ್ತೀನ್ ಅಧಿಕಾರವನ್ನು ಮರುಸ್ಥಾಪಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ.

ಪ್ಯಾಲೆಸ್ತೀನ್ ಉನ್ನತಿಗಾಗಿ ನವೀಕರಣಗೊಂಡ ಒಂದು ಅಧಿಕಾರದ ಅವಶ್ಯಕತೆ ಇತ್ತು ಎಂದು ಹೇಳುತ್ತಾ, ಅಮೇರಿಕಾ ಸಂಯುಕ್ತ ಸಂಸ್ಥಾನವು ಹೊಸ ಸರ್ಕಾರವನ್ನು ಸ್ವಾಗತಿಸಿದೆ.

02 April 2024, 08:03