ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಇಸ್ರಯೇಲಿ ಪ್ರತಿಭಟನೆಕಾರರ ಒತ್ತಾಯ

ಹಮಾಸ್ ಸಂಘಟನೆಯು ಆರು ತಿಂಗಳ ಹಿಂದೆ ಅಪಹರಿಸಿದ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಬೇಕೆಂದು ಪ್ರತಿಭಟನೆಯನ್ನು ನಡೆಸುತ್ತಿದ್ದ ಸಾವಿರಾರು ಸರ್ಕಾರ-ವಿರೋಧಿ ಪ್ರತಿಭಟನಕಾರರನ್ನು ಪೊಲೀಸರು ಚದುರಿಸಿದ್ದಾರೆ ಎಂದು ಇಸ್ರೇಲಿ ಮಾಧ್ಯಮವು ವರದಿ ಮಾಡಿದೆ.

ವರದಿ: ನೇಥನ್ ಮೋರ್ಲೆ, ಅಜಯ್ ಕುಮಾರ್

ಪ್ಯಾಲೆಸ್ತೇನಿ ಬಂದೂಕುದಾರಿಗಳು ಗಾಜಾದಿಂದ ದಕ್ಷಿಣ ಇಸ್ರೇಲ್ ಪ್ರದೇಶಕ್ಕೆ ನುಗ್ಗಿ, 100 ಇಸ್ರೇಲಿ ನಾಗರೀಕರನ್ನು ಅಪಹರಿಸಿ ಆರು ತಿಂಗಳಾಗಿದೆ.

ಟೆಲ್ ಅವಿವ್ ನಗರದಲ್ಲಿ ಮುಖ್ಯರಸ್ತೆಯನ್ನು ಬ್ಲಾಕ್ ಮಾಡಿದ ಪರಿಣಾಮ, ನಾಲ್ಕು ಜನ ಪ್ರತಿಭಟನಕಾರರನ್ನು ಬಂಧಿಸಲಾಗಿದೆ ಎಂದು ಇಸ್ರೇಲಿ ಪೊಲೀಸರು ವರದಿ ಮಾಡಿದ್ದಾರೆ. ಶನಿವಾರ, ಇಸ್ರೇಲಿ ಮಿಲಿಟರಿ ಹೇಳಿಕೆಯ ಪ್ರಕಾರ, ಅಪಹರಿಸವರಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿದೆ.

ಇದೇ ವೇಳೆ, ಹಮಾಸ್ ಸಂಘಟನೆ ತನ್ನ ನಾಯಕರ ತಂಡವನ್ನು ಗಾಜಾದಲ್ಲಿ ಕದನವಿರಾಮಕ್ಕಾಗಿ ಹಾಗೂ ಒತ್ತೆಯಾಳುಗಳಿಗೆ ಬದಲಾಗಿ ಬಂಧಿತರ ಬಿಡುಗಡೆ ಮಾಡುವಂತ ಆಯ್ಕೆಯ ಕುರಿತು ಸಂವಾದಿಸಲು ಈಜಿಪ್ಟಿನ ಕೈರೋ ನಗರಕ್ಕೆ ಕಳುಹಿಸಿದೆ.

"ಖಾಯಂ ಕದನವಿರಾಮ, ಗಾಜಾದಿಂದ ಇಸ್ರೇಲಿ ಪಡೆಗಳ ನಿರ್ಗಮನ, ನಿರಾಶ್ರಿತ ಪ್ಯಾಲೆಸ್ತೇನಿಯರನ್ನು ಅವರ ಮನೆಗಳಿಗೆ ಕಳುಹಿಸುವುದು, ಜನರ ಸ್ವಾತಂತ್ರ್ಯ, ಪರಿಹಾರ, ಸೂರು ಹಾಗೂ ಬಂಧಿತರು ಹಾಗೂ ಒತ್ತೆಯಾಳುಗಳ ಬದಲಿ ಬಿಡುಗಡೆಯ ಆಯ್ಕೆಯ ಕುರಿತ ಮಾರ್ಚ್ 14 ರ ತನ್ನ ಮಾತಿಗೆ ಈಗಲೂ ಬದ್ಧವಾಗಿದ್ದೇವೆ" ಎಂದು ಹಮಾಸ್ ಹೇಳಿದೆ.

ಹಿಂದಿನ ಮಾತುಕತೆಗಳಲ್ಲಿ ಹಮಾಸ್ ಯುದ್ಧವನ್ನೇ ನಿಲ್ಲಿಸಬೇಕೆಂಬ ಷರತ್ತನ್ನು ವಿಧಿಸಿತ್ತು ಆದರೆ ಇದಕ್ಕೊಪ್ಪದ ಇಸ್ರೇಲ್ ತಾತ್ಕಾಲಿಕ ಕದನವಿರಾಮವನ್ನು ಮಾತ್ರ ಘೋಷಿಸಲಾಗವುದು ಎಂದಿತ್ತು ಹಾಗೂ ನಿರಾಶ್ರಿತ ಪ್ಯಾಲೆಸ್ತೇನಿಯರು ತಮ್ಮ ಮನೆಗಳಿಗೆ ಹಿಂದಿರುಗುವುದನ್ನು ನಿರಾಕರಿಸಿತ್ತು.

07 April 2024, 14:03