ಹುಡುಕಿ

ಸುಡಾನ್: ವರುಷದ ಸಂಘರ್ಷ

ಸುಡಾನ್‌ನಲ್ಲಿ ಯುದ್ಧ ಪ್ರಾರಂಭವಾಗಿ ಸರಿಯಾಗಿ ಒಂದು ವರ್ಷ ಕಳೆದಿದೆ. 12 ತಿಂಗಳ ಭೀಕರ ಹೋರಾಟ ಮತ್ತು ದುರಂತಮಯ ಹಿಂಸಾಚಾರದಿಂದ ಅಪಾರ ಜೀವಹಾನಿ, ಲಕ್ಷಾಂತರ ಜನರ ಸ್ಥಳಾಂತರ, ತೀವ್ರವಾದ ಹಸಿವು ಇವೆಲ್ಲವೂ ಒಟ್ಟುಗೂಡಿ ಮಾನವೀಯ ಬಿಕ್ಕಟ್ಟನ್ನು ಉಂಟುಮಾಡಿದೆ.

ಫ್ರಾನ್ಸೆಸ್ಕಾ ಮೆರ್ಲೊ / ಸ್ವಾಮಿ ಸಿರಿಲ್ ವಿಕ್ಟರ್

ಒಂದು ವರ್ಷದ ಹಿಂದೆ, ಏಪ್ರಿಲ್ ೧೫ ರಂದು, ಸುಡಾನ್ನಲ್ಲಿ ಯುದ್ಧವು ಸ್ಫೋಟಿಸಿತು. ಈ ಯುದ್ಧದ ಪರಿಣಾಮದಿಂದಾಗಿ ಹೆಚ್ಚಿನ ಸಾವು ನೋವುಗಳು, ವಿನಾಶ, ಅತ್ಯಾಚಾರ ಮತ್ತು ಕೊಲೆಗಳ ಸಂಖ್ಯೆ ಮತ್ತು ಮಾರಣಾಂತಿಕ ಹಸಿವು ಉಂಟಾಯಿತು. ಈ ಯುದ್ಧದ ಪ್ರಮಾಣವು ಒಂದು ದುರಂತವಾದ ಕಥೆ. ಕನಿಷ್ಠ ೧೫ ಸಾವಿರ ಜನರು ಜೀವಗಳನ್ನು ಕಳೆದುಕೊಂಡಿದ್ದಾರೆ, ಎಂಬತ್ತು ಲಕ್ಷ ಜನರು ಸ್ಥಳಾಂತರಗೊAಡಿದ್ದಾರೆ ಮತ್ತು ಇನ್ನೂ ೨೫೦ ಲಕ್ಷ ಜನರು ಬದುಕಲು ಮಾನವೀಯ ನೆರವಿನ ಮೇಲೆ ಅವಲಂಬಿತರಾಗಿದ್ದಾರೆ. ಈಶಾನ್ಯ ಆಫ್ರಿಕನ್ ದೇಶದಲ್ಲಿ ಬೀದಿ ಬೀದಿಗಳು ಶವಗಳಿಂದ ತುಂಬಿವೆ. ಈ ಬಿಕ್ಕಟ್ಟು ಹೀಗೆಯೇ ಮುಂದುವರೆಯುತ್ತ ಉಲ್ಬಣಗೊಳ್ಳುತ್ತಿದ್ದಂತೆ ಸಾಮಾಜಿಕ ಸಂಘ ಸಂಸ್ಥೆಗಳು ಮತ್ತು ವಿಶ್ವಸಂಸ್ಥೆಗಳಿಗೆ ದೊರಕುವ ಧನಸಹಾಯ ಮತ್ತು ಜನರ ಭರವಸೆ ಎರಡೂ ಕ್ಷೀಣಿಸತೊಡಗಿದೆ.

ಸಂಘರ್ಷ

ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳು (ಖSಈ) ಮತ್ತು ಸುಡಾನ್ ಸಶಸ್ತ್ರ ಪಡೆಗಳ (Sಂಈ) ನಡುವಿನ ಹೋರಾಟವು ರಾಜಧಾನಿ ಖಾರ್ಟೂಮ್ನಲ್ಲಿ ಭುಗಿಲೆದ್ದಿತು. ಈ ಸಂಘರ್ಷವು ಹಿಂಸಾಚಾರದ ತಿರುವು ಪಡೆದು ನಗರದ ಆಚೆಗೂ ವ್ಯಾಪಿಸಿತು.

ಸದ್ಯದ ಪರಿಸ್ಥಿತಿಯಲ್ಲಿ ಸುಮಾರು ೧೮೦ ಲಕ್ಷ ಸೂಡಾನಿಗಳು ತೀವ್ರ ಹಸಿವನ್ನು ಎದುರಿಸುತ್ತಿದ್ದಾರೆ. ಯುದ್ಧದ ಮುಂಚೆಯೇ, ಆರ್ಥಿಕ ಅಸ್ಥಿರತೆ ಮತ್ತು ಜನಾಂಗೀಯ ಹಿಂಸಾಚಾರದಿAದಾಗಿ ಸುಡಾನ್ನ ಪರಿಸ್ಥಿತಿ ಕಠಿಣ ಮತ್ತು ಅಮಾನವೀಯವಾಗಿತ್ತು. ಜೀವನ ನಿರ್ವಹಣೆಗೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳ ಸರಬರಾಜುಗಳು ಲಭ್ಯವಿದ್ದರೂ, ಅಗತ್ಯವಿರುವವರಿಗೆ ಅವುಗಳನ್ನು ಪಡೆಯುವುದು ಒಂದು ಕ್ಲಿಷ್ಟಕರ ಸವಾಲು. ಸಾಮಾಜಿಕ ಸಂಘ ಸಂಸ್ಥೆಗಳು ಮತ್ತು ನೆರವು ಸಂಸ್ಥೆಗಳು ಲೂಟಿತನದ ಸವಾಲನ್ನು, ಅಧಿಕಾರಿಶಾಹಿಗಳ ಅಡೆತಡೆಗಳ ಅವ್ಯವಸ್ಥೆ ಹಾಗೂ ಸಂವಹನ ವ್ಯವಸ್ಥೆಯೊಂದಿಗೆ ತೀವ್ರ ಹೋರಾಟವನ್ನು ಹಾಗೂ ಪ್ರತಿಭಟನೆಯನ್ನು ಎದುರಿಸುತ್ತಿದೆ.

ನರಳುವಿಕೆ

ಸಾಮಾನ್ಯವಾಗಿ, ಮಹಿಳೆಯರು, ಮಕ್ಕಳು ಮತ್ತು ಸ್ಥಳಾಂತರಗೊAಡ ಜನರು ಈ ದುಃಖದ ಭಾರವನ್ನು ಹೆಚ್ಚಾಗಿ ಹೊರುವವರಾಗಿದ್ದಾರೆ. ಹಿಂಸಾಚಾರದ ನಡುವೆ ಜನಿಸಿದ ಮಕ್ಕಳು ಕಷ್ಟಕರ ಭವಿಷ್ಯವನ್ನು ಎದುರಿಸುತ್ತಾರೆ, ಹಾಗೆಯೇ ಈ ಮಕ್ಕಳನ್ನು ಬೆಳೆಸುವತ್ತ ಅಪೌಷ್ಟಿಕತೆಗೆ ತುತ್ತಾದ ತಾಯಂದಿರು ಉತ್ತಮ ಆಹಾರಕ್ಕಾಗಿ ಹೆಣಗಾಡುತ್ತಾರೆ.

ಅಂತರಾಷ್ಟ್ರೀಯ ಮಾನವೀಯ ಕಾನೂನು ನಿರಂತರ ನಿರ್ಲಕ್ಷ್ಯವನ್ನು ಎದಿರುಸುತ್ತಿರುವ ಹಿನ್ನೆಲೆಯಲ್ಲಿ, ಮಾನವ ಹಕ್ಕುಗಳ ವೀಕ್ಷಕ (ಊಖW) ಸಂಸ್ಥೆಯು ಕಾದಾಡುತ್ತಿರುವ ಬಣಗಳನ್ನು ಹೊಣೆಗಾರರನ್ನಾಗಿ ಮಾಡಲು ಮೇಲ್ವಿಚಾರಣೆಯ ಕಾರ್ಯವಿಧಾನದ ಅಗತ್ಯ ಇದೆ ಎಂದು ಒತ್ತಿ ಹೇಳಿದೆ.

ಅಂತರಾಷ್ಟ್ರೀಯ ಸಮುದಾಯ

ಸುಡಾನ್ ಯುದ್ಧದ ವಾರ್ಷಿಕೋತ್ಸವವನ್ನು ಗುರುತಿಸಿ ಅದರ ಬಿಕ್ಕಟ್ಟನ್ನು ಪರಿಹರಿಸಲು ವಿಶ್ವ ನಾಯಕರು ಪ್ಯಾರಿಸ್ನಲ್ಲಿ ಸಭೆ ನಡೆಸಿ ತುರ್ತು ಕ್ರಮದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ವ್ಯಾಪಕವಾದ ಉದಾಸೀನತೆಯ ನಡುವೆ ಮಾನವೀಯ ದುರಂತದ ನೆನಪಿಗಾಗಿ ಈ ಸಂಘರ್ಷದ ಮೊದಲ ವಾರ್ಷಿಕೋತ್ಸವವು ನಡೆಯುತ್ತಿದೆ.

ಸುಡಾನ್ನ ನಾಗರಿಕ ಸಮಾಜದ ಸದಸ್ಯರು ಮತ್ತು ಸ್ಥಳೀಯ ಸಾಮಾಜಿಕ ಸಂಘ ಸಂಸ್ಥೆಗಳು ಪ್ಯಾರಿಸ್ ಸಭೆಯಲ್ಲಿ ಭಾಗಿಯಾಗಿರುತ್ತಾರೆ ಆದರೆ ಸುಡಾನ್ ಸೈನ್ಯ ಅಥವಾ ಆರ್ಎಸ್ಎಫ್ ನಿಂದ ಈ ಸಭೆಯಲ್ಲಿ ಯಾವುದೇ ಪ್ರಾತಿನಿಧ್ಯವಿಲ್ಲ.

ವಿಶ್ವಗುರುಗಳ ಪ್ರಾರ್ಥನೆ 

ವಿಶ್ವಗುರು ಫ್ರಾನ್ಸಿಸ್ ರವರು ಪದೇ ಪದೇ ಸುಡಾನ್ ಗಾಗಿ ಪ್ರಾರ್ಥಿಸುತ್ತಾ ಅಲ್ಲಿನ ಜನರಿಗಾಗಿ ಮತ್ತು ಯುದ್ಧದ ಅಂತ್ಯಕ್ಕಾಗಿ ಪ್ರಾರ್ಥಿಸಿದರು. ಅವರ ಇತ್ತೀಚಿನ ಫೆಬ್ರವರಿ ೧೮ ರಂದು ಭಾನುವಾರದ ಸಾರ್ವತ್ರಿಕ ಪ್ರಾರ್ಥನೆಯ ಸಮಯದಲ್ಲಿ ನಡೆಯಿತು. ಅದರಲ್ಲಿ ಅವರು ಈ ಯುದ್ಧದ ಅಂತ್ಯಕ್ಕೆ ಮನವಿಯನ್ನು ಮುಂದಿಟ್ಟರು.

ಆ ಸಂದರ್ಭದಲ್ಲಿ, ಸುಡಾನ್ನಲ್ಲಿನ ಸಂಘರ್ಷವು ಗಂಭೀರವಾದ ಮಾನವೀಯ ದುಸ್ಥಿತಿಗೆ ಕಾರಣವಾಯಿತು ಎಂದು ವಿಶ್ವಗುರು ನೆನಪಿಸಿಕೊಂಡು “ಜನರಿಗೆ ಮತ್ತು ದೇಶದ ಭವಿಷ್ಯಕ್ಕೆ ತುಂಬಾ ಹಾನಿಯನ್ನುಂಟುಮಾಡುವ ಈ ಯುದ್ಧವನ್ನು ನಿಲ್ಲಿಸಲು ನಾನು ಮತ್ತೊಮ್ಮೆ ಹೋರಾಡುತ್ತಿರುವ ಪಕ್ಷಗಳನ್ನು ಕೇಳಿಕೊಳ್ಳುತ್ತೇನೆ ” ಎಂದು ಮನವಿ ಮಾಡಿದರು.

"ಪ್ರೀತಿಯ ಸುಡಾನ್ ಉತ್ತಮ ಭವಿಷ್ಯವನ್ನು ನಿರ್ಮಿಸಲು ಶಾಂತಿಯ ಮಾರ್ಗಗಳು ಶೀಘ್ರದಲ್ಲೇ ಕಂಡುಬರಲಿ ಎಂದು ನಾವು ಪ್ರಾರ್ಥಿಸೋಣ

22 April 2024, 13:51