ಹಲವು ಅಡೆತಡೆಗಳ ನಂತರ ಮಿಲಿಟರಿ ನೆರವಿಗೆ ಅಮೇರಿಕಾಕ್ಕೆ ಧನ್ಯವಾದ ಅರ್ಪಿಸಿದ ಉಕ್ರೇನ್
ಅಮೇರಿಕಾ ಸಂಯುಕ್ತ ಸಂಸ್ಥಾನವು ತನ್ನ ಸಂಸತ್ತಿನಲ್ಲಿ ಉಕ್ರೇನ್ ದೇಶಕ್ಕೆ ಮಿಲಿಟರಿ ನೆರವು ನೀಡುವ ನಿರ್ಧಾರವನ್ನು ಕೈಗೊಂಡ ಬೆನ್ನಲ್ಲೇ, ಉಕ್ರೇನ್ ಹಾಗೂ ಮಿತ್ರ ರಾಷ್ಟ್ರಗಳು ಈ ನಡೆಯನ್ನು ಸ್ವಾಗತಿಸಿವೆ. ರಷ್ಯಾ ವಿರುದ್ಧದ ಯುದ್ಧವನ್ನು ಸೋಲುವ ಭೀತಿಯ ಕಾರಣ, ಅಮೇರಿಕ ಮತ್ತೊಮ್ಮೆ ಉಕ್ರೇನ್ ದೇಶಕ್ಕೆ 63 ಬಿಲಿಯನ್ ಡಾಲರುಗಳಷ್ಟು ಮಿಲಿಟರಿ ನೆರವನ್ನು ನೀಡಲು ನಿರ್ಧರಿಸಿದೆ. ಇದರ ಜೊತೆಗೆ ಇಸ್ರಯೇಲ್ ದೇಶಕ್ಕೂ ಸಹ ಮಿಲಿಟರಿ ನೆರವನ್ನು ನೀಡಿದೆ. ಈ ದೇಶಗಳಿಗೆ ಮಿಲಿಟರಿ ನೆರವನ್ನು ನೀಡಿದರೆ ಯುದ್ಧ ಮತ್ತಷ್ಟು ಉಲ್ಬಣವಾಗುವುದು ಎಂಬ ರಷ್ಯಾದ ಎಚ್ಚರಿಕೆಯ ಹೊರತಾಗಿಯೂ, ಅಮೇರಿಕಾ ಈ ನಿರ್ಧಾರವನ್ನು ಪ್ರಕಟಿಸಿದೆ.
22 April 2024, 13:38