Rocket attack on Kharkiv Rocket attack on Kharkiv  (ANSA)

ಹೆಚ್ಚುತ್ತಿರುವ ಉಕ್ರೇನ್ ನಾಗರೀಕರ ಹತ್ಯೆಗಳು

ಉಕ್ರೇನ್ ದೇಶದ ಮೇಲೆ ರಷ್ಯಾವು ನಡೆಸುತ್ತಿರುವ ರಾಕೆಟ್ ದಾಳಿಯಲ್ಲಿ ಅಲ್ಲಿನ ಸೈನಿಕರೂ ಸೇರಿದಂತೆ ನಾಗರೀಕರು ಹತ್ಯೆಯಾಗುತ್ತಿದ್ದಾರೆ. ಈ ವಾರದ ಕೊನೆಯಲ್ಲಿ ಒಂದು ಡಜನ್'ಗೂ ಹೆಚ್ಚು ನಾಗರೀಕರನ್ನು ರಷ್ಯಾ ಸೇನೆಯು ಹತ್ಯೆ ಮಾಡಿದೆ. ಉಕ್ರೇನ್ ದೇಶವು ಯೂರೋಪಿನ ಅತಿ ದೊಡ್ಡ ಪರಮಾಣು ಸ್ಥಾವರದ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿದೆ. ಈ ದಾಳಿಯ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಶಾಂತಿಗಾಗಿ ಮತ್ತೆ ಮನವಿ ಮಾಡಿದ್ದಾರೆ.

ವರದಿ: ಸ್ಟೆಫಾನ್ ಜೆ. ಬಾಸ್, ಅಜಯ್ ಕುಮಾರ್

ಭಾನುವಾರ ಉಕ್ರೇನ್ ಜನರು ಯುದ್ಧದ ಮತ್ತೊಂದು ದಾಳಿಗೆ ಸಾಕ್ಷಿಯಾದರು. ಸ್ಥಳೀಯ ಅಧಿಕಾರಿಗಳ ಪ್ರಕಾರ ಗುಲಿಯಾಯ್ ಪೋಲ್ ಹಳ್ಳಿಯ ಮೇಲೆ ನಡೆದ ದಾಳಿಯಲ್ಲಿ ಕನಿಷ್ಟ ಮೂರು ನಾಗರೀಕರು ಹತ್ಯೆಯಾಗಿದ್ದಾರೆ. 

ಈಗಾಗಲೇ ಎರಡು ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧಕ್ಕೆ ಈ ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆ ಬಲಿಯಾಗಿದ್ದಾರೆ. 

ಉಕ್ರೇನ್ ಸೇನೆಯು ಸುಮಾರು 17 ರಾಕೆಟ್ಗಳನ್ನು ಹೊಡೆದು ಉರುಳಿಸಿದ ಪರಿಣಾಮ, ಹೆಚ್ಚಿನ ಸಂಖ್ಯೆಯ ಸಾವುಗಳನ್ನು ತಡೆಯಲು ಸಾಧ್ಯವಾಗಿದೆ. ಶನಿವಾರ, ಕಾರ್ಕಿವ್ ಪ್ರದೇಶದ ಆಸುಪಾಸಿನಲ್ಲಿ ಡ್ರೋನ್ ದಾಳಿಗಳ ಪರಿಣಾಮ ಎಂಟು ಜನರು ಸಾವನ್ನಪ್ಪಿದ್ದು, ಸುಮಾರು ಹತ್ತು ಜನರಿಗೆ ಗಾಯಗಳಾಗಿವೆ. 

ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರ ಪ್ರಕಾರ ರಷ್ಯಾ ದಾಳಿಯ ಹಿನ್ನೆಲೆಯಲ್ಲಿ ಆಗಿರುವ ಸಾವುಗಳ ಸಂಖ್ಯೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಸ್ವಿಟ್ಝರ್'ಲ್ಯಾಂಡ್ ದೇಶದಲ್ಲಿ ಇವರು ವಿಶ್ವ ಶಾಂತಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. 

ಈ ಕುರಿತು ಪ್ರತಿಕ್ರಿಯಿಸಿರುವ ರಷ್ಯಾ, ಸದರಿ ಶಾಂತಿ ಸಮಾವೇಷ ಎಂಬುದು ರಷ್ಯಾ ದೇಶವಿಲ್ಲದೆ ಅರ್ಥಹೀನವಾಗಿರಲಿದೆ ಎಂದು ಹೇಳಿದೆ. ಹಿಂದೆ, ಕೀವ್ ಹೇಳಿಕೆಯ ಪ್ರಕಾರ ಈ ವಿಶ್ವ ಶಾಂತಿ ಸಮಾವೇಷಕ್ಕೆ ರಷ್ಯಾಕ್ಕೆ ಆಹ್ವಾನ ನೀಡುವುದಿಲ್ಲ ಎಂಬುದಾಗಿತ್ತು.   

  

08 April 2024, 16:25