ಉಕ್ರೇನ್: ದೇಶಾದ್ಯಂತ ದಾಳಿಗಳಲ್ಲಿ 3 ಮಕ್ಕಳ ಮೃತ್ಯು; ಹಲವು ಮಕ್ಕಳಿಗೆ ಗಂಭೀರ ಗಾಯಗಳು

ನಿನ್ನೆಯ ಸುದ್ದಿಗಳ ಪ್ರಕಾರ ಉಕ್ರೇನ್ ದೇಶದ ವಿವಿಧ ಪ್ರದೇಶಗಳ ಮೇಲೆ ರಷ್ಯಾ ದಾಳಿ ನಡೆಸಿದ್ದು, ಈ ದಾಳಿಯ ಪರಿಣಾಮವಾಗಿ 3 ಮಕ್ಕಳು ಅಸುನೀಗಿದ್ದು, ಹಲವರು ಗಾಯಗೊಂಡಿದ್ದಾರೆ.

ವರದಿ: ಬಿಯಾಟ್ರಿಸ್ ಫಿಲಿಬೆಕ್, ಅಜಯ್ ಕುಮಾರ್

ಹಲವು ಮಾಧ್ಯಮ ವರದಿಗಳ ಪ್ರಕಾರ ನಿನ್ನೆ ಬುಧವಾರ ನಸುಕಿನಲ್ಲಿ ಉಕ್ರೇನ್ ದೇಶದ ವಿವಿಧ ಪ್ರದೇಶಗಳ ಮೇಲೆ ದಾಳಿ ನಡೆದಿದ್ದು, ಈ ದಾಳಿಯಲ್ಲಿ 3 ಮಕ್ಕಳು ಮೃತ ಹೊಂದಿದ್ದು, ಹಲವಾರು ಮಕ್ಕಳಿಗೆ ಗಾಯವಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಆಯೋಗ ಯೂನಿಸೆಫ್ ಕಳವಳ ವ್ಯಕ್ತಪಡಿಸಿದೆ.

ಉಕ್ರೇನ್’ನ ಕೊಸ್ಟ್ಯಾಂಟಿನೀವ್ಕಾ ಮತ್ತು ಲಿಪ್ಟ್ಸಿ ಪ್ರದೇಶದ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ, ಒಡೆಸ್ಸಾ ಪ್ರದೇಶದ ಮೇಲಿನ ರಷ್ಯಾ ದಾಳಿಯಲ್ಲಿ ಹತ್ತು ವರ್ಷದ ಬಾಲಕಿ ಮರಣ ಹೊಂದುವ ಮೂಲಕ ಸಾವನ್ನಪ್ಪಿದ ಮಕ್ಕಳ ಸಂಖ್ಯೆ ಮೂರಕ್ಕೇರಿದೆ. ವಿವಿಧ ಮಾಧ್ಯಮ ವರದಿಗಳು ಇತ್ತೀಚಿನ ದಿನಗಳಲ್ಲಿ ಉಕ್ರೇನ್ ದೇಶದ ಮೇಲೆ ನಡೆಯುತ್ತಿರುವ ದಾಳಿಗಳಲ್ಲಿ ಕನಿಷ್ಟ ಐದು ಮಕ್ಕಳು ಗಾಯಗೊಂಡಿದ್ದಾರೆ.

ದೇಶದಾದ್ಯಂತ ದಾಳಿಗಳು ಹೆಚ್ಚಾದಂತೆ ಮಕ್ಕಳ ಸಾವುಗಳು ಹೆಚ್ಚಾಗುತ್ತಿವೆ. ಮಕ್ಕಳು ಯುದ್ಧದ ಭಾರವನ್ನು ಹೊರುತ್ತಿದ್ದಾರೆ. ಯಾವುದೇ ಸಂಘರ್ಷಕ್ಕೆ ಮಕ್ಕಳು ಗುರಿಯಾಗುವುದು ಸರಿಯಲ್ಲ. ಮಕ್ಕಳನ್ನು ರಕ್ಷಿಸಬೇಕು ಹಾಗೂ ಅವರ ಮೇಲೆ ನಡೆಯುವ ದಾಳಿಗಳು ನಿಲ್ಲಬೇಕೆಂದು ವಿಶ್ವಸಂಸ್ಥೆಯ ಮಕ್ಕಳ ಆಯೋಗವಾದ ಯೂನಿಸೆಫ್ ಹೇಳಿದೆ.

11 April 2024, 11:32