TOPSHOT-PALESTINIAN-ISRAEL-CONFLICT

ವಿಶ್ವಸಂಸ್ಥೆ: ಗಾಜಾ ಮಾನವೀಯ ನೆರವಿಗೆ ಇನ್ನಷ್ಟು ಪ್ರವೇಶಿಕೆ ಅನಿವಾರ್ಯ

ಇತ್ತೀಚೆಗಷ್ಟೇ ಗಾಜಾ ಪಟ್ಟಿ ಪ್ರದೇಶಕ್ಕೆ ಮಾನವೀಯ ನೆರವನ್ನು ನೀಡಲು ಹೊಸ ಮೂರು ಹಾದಿಗಳನ್ನು ತೆರೆಯುವುದಾಗಿ ಇಸ್ರೇಲ್ ಹೇಳಿಕೆ ನೀಡಿತ್ತು. ಆದರೆ ಮಾನವೀಯ ನೆರವಿಗೆ ಈ ಹಾದಿಗಳು ಸಾಕಾಗುವುದಿಲ್ಲ ಎಂದು ವಿಶ್ವಸಂಸ್ಥೆ ಹಾಗೂ ಅದರ ಸೋದರ ಸಂಸ್ಥೆಗಳು ಅಭಿಪ್ರಾಯ ಪಟ್ಟಿವೆ

ವರದಿ: ನೇಥನ್ ಮೋರ್ಲೆ, ಅಜಯ್ ಕುಮಾರ್

ಈಗಾಗಲೇ ಹಸಿವಿನಿಂದ ಕಂಗೆಟ್ಟಿರುವ ಪ್ಯಾಲೆಸ್ತೀನ್ ದೇಶದ ನಾಗರೀಕರಿಗೆ ಮಾನವೀಯ ನೆರವನ್ನು ರವಾನಿಸಲು, ಇಲ್ಲಿಗೆ ಪ್ರವೇಶಿಕೆಯಾಗಿ ಮೂರು ದಾರಿಗಳನ್ನು ತೆರೆಯಲಾಗುವುದು ಎಂದು ಇಸ್ರೇಲ್ ಸೇನೆ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ, ವಿಶ್ವಸಂಸ್ಥೆ ಹಾಗೂ ಅದರ ಸೋದರ ಸಂಸ್ಥೆಗಳು ಇಸ್ರೇಲ್ ಭರವಸೆ ನೀಡಿರುವ ಈ ದಾರಿಗಳು ಮಾನವೀಯ ನೆರವಿನ ಉದ್ದೇಶಕ್ಕೆ ಸಾಕಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿವೆ. 

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂತೋನಿಯೊ ಗುಟೇರೆಸ್ ಅವರ ಪ್ರಕಾರ ಇಸ್ರೇಲ್ ಸೇನೆಯು ಹೇಳಿರುವ ಮೇಲ್ಮಾತಿನ ಪರಿಹಾರ ಸಾಕಾಗುವುದಿಲ್ಲ. ವಿಶ್ವಸಂಸ್ಥೆಯ ಮಕ್ಕಳ ಆಯೋಗವಾಗಿರುವ ಯೂನಿಸೆಫ್ ಪ್ರಕಾರ ಗಾಜಾ ಪ್ರದೇಶಕ್ಕೆ ಹೊಸ ದಾರಿಗಳನ್ನು ತೆರಯುವುದಾಗಿ ನೀಡಿರುವ ಹೇಳಿಕೆಯು ಶೀಘ್ರವೇ ವಾಸ್ತವವಾಗಬೇಕಿದೆ. ಬರ್ಲಿನ್'ನಲ್ಲಿ ಪ್ಯಾಲೆಸ್ತೀನ್ ದೇಶಕ್ಕೆ ಮಾನವೀಯ ನೆರವನ್ನು ನೀಡುವ ಸಲುವಾಗಿ, ಇಸ್ರೇಲ್ ಯಾವ ನೆಪಗಳನ್ನು ನೀಡಬಾರದು ಎಂದು ತಿಳಿಸಲಾಗಿದೆ.  

ಇಸ್ರೇಲ್ ಪ್ರಧಾನ ಮಂತ್ರಿ ನೆತನ್ಯಹು ಅವರ ಕಚೇರಿಯ ಮೂಲಗಳು ಹೇಳುವ ಪ್ರಕಾರ, ಗಾಜಾಪ್ರದೇಶಕ್ಕೆ ಮಾನವೀಯ ನೆರವನ್ನು ನೀಡಲು ಆಶಿದೋದ್ ಎಂಬಲ್ಲಿ ಹಾದಿಯನ್ನು ತೆರೆಯಲಾಗುವುದು ಹಾಗೂ ಅದೇ ರೀತಿ ಜೋರ್ಡಾನ್ ದೇಶದಿಂದ ಬರುವ ಮಾನವೀಯ ನೆರವನ್ನು ಗಾಜಾ ಪ್ರದೇಶಕ್ಕೆ ರವಾನಿಸಲು ಕೆರೆಂ ಶಾಲೋಮ್ ಎಂಬ ಪ್ರದೇಶದಲ್ಲಿ ಹಾದಿಯನ್ನು ತೆರೆಯಲಾಗುವುದು ಎಂದು ವರದಿಯಾಗಿದೆ.

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಇಸ್ರೇಲ್ ದೇಶವು ಗಾಜಾ ಪ್ರದೇಶಕ್ಕೆ ಬರುವ ಎಲ್ಲಾ ರೀತಿಯ ವಿದ್ಯುತ್ ನೀರು ಹಾಗೂ ಆಹಾರಗಳ ಸರಬರಾಜನ್ನು ನಿಲ್ಲಿಸಿದ ಪರಿಣಾಮ, ಗಾಜಾದ ಜನರು ಅಕ್ಷರಶಃ ಬರಗಾಲವನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ, ವರ್ಲ್ಡ್ ಸೆಂಟ್ರಲ್ ಕಿಚನ್ ಸಂಸ್ಥೆಯು ಅದರ ಏಳು ಮಂದಿ ಸಿಬ್ಬಂದಿಗಳು ಇಸ್ರೇಲ್ ಸೇನೆಯು ನಡೆಸಿದ ವಾಯುದಾಳಿಯ ಹಿನ್ನೆಲೆಯಲ್ಲಿ ಹತ್ಯೆಯಾದ ಕಾರಣ ಈ ಕುರಿತು ಸ್ವತಂತ್ರ ತನಿಖೆಯನ್ನು ನಡೆಸುವಂತೆ ಒತ್ತಾಯಿಸಿದೆ.

 

06 April 2024, 18:41