ಹುಡುಕಿ

ಕಳೆದ ಎಂಟು ವರ್ಷಗಳಲ್ಲಿ ಮರಣದಂಡನೆ ಸಾವುಗಳ ಪ್ರಮಾಣದಲ್ಲಿ ಹೆಚ್ಚಳ

2023ರಲ್ಲಿ ಜಗತ್ತಿನಾದ್ಯಂತ ಮರಣದಂಡನೆಗೆ ಒಳಗಾಗಿ ಅಸು ನೀಗಿದ ವ್ಯಕ್ತಿಗಳ ಸಂಖ್ಯೆ ಪ್ರಮಾಣದಲ್ಲಿ ಹೆಚ್ಚಿನವಾಗಿದೆ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ವರದಿ ಮಾಡಿದೆ.

ವರದಿ: ಫ್ರಾಂಚೆಸ್ಕಾ ಮರ್ಲೊ, ಅಜಯ್ ಕುಮಾರ್

ಕಳೆದ 8 ವರ್ಷಗಳಲ್ಲಿ ಜಗತ್ತಿನಾದ್ಯಂತ ಮರಣದಂಡನೆಗೆ ಒಳಗಾಗಿ ಸಾವನ್ನು ಅಪ್ಪಿದ ವ್ಯಕ್ತಿಗಳ ಸಂಖ್ಯೆಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು 2023ರಲ್ಲಿ ಅಮ್ನೆಸ್ಟಿ ಇಂಟರ್ನ್ಯಾಷನಲ್ ವರದಿ ಮಾಡಿದೆ.

ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸರ್ಕಾರೇತರ ಸಂಸ್ಥೆಯಾದ ಅಮ್ನೆಸ್ಟಿ ಇಂಟರ್ನ್ಯಾಷನಲ್ ಮೇ 29ರಂದು ಮರಣದಂಡನೆಯ ಕುರಿತು ನೀಡಿದ ವರದಿಯಲ್ಲಿ ಈ ಅಘಾತಕಾರಿ ಅಂಶವು ಬಯಲಾಗಿದೆ. ಈ ವರದಿಯ ಪ್ರಕಾರ 2023ರಲ್ಲಿ ಜಗತ್ತಿನಾದ್ಯಂತ ಸುಮಾರು 16 ದೇಶಗಳಲ್ಲಿ 1153 ಜನರು ಮರಣದಂಡನೆಯ ಮೂಲಕ ಸಾವನ್ನಪ್ಪಿದ್ದಾರೆ. ಇದು 2022 ಕ್ಕಿಂತ 30% ಹೆಚ್ಚಿದೆ.

ಈ ಸಾವುಗಳಲ್ಲಿ ಹೆಚ್ಚಿನ ಸಾವುಗಳು ಮಧ್ಯಪ್ರಾಚ್ಯ ದೇಶಗಳಾದ ಇರಾನ್ ಹಾಗೂ ಸೌದಿ ಅರೇಬಿಯಾದಲ್ಲಿ ಸಂಭವಿಸಿದೆ.

ಮರಣದಂಡನೆಯನ್ನು ತೀವ್ರವಾಗಿ ವಿರೋಧಿಸುವುದರಲ್ಲಿ ಧರ್ಮಸಭೆಯು ಅಂದಿನಿಂದ ಇಂದಿನವರೆಗೂ ಸತತವಾಗಿ ತನ್ನ ಧ್ವನಿಯನ್ನು ಎತ್ತುತ್ತಲೇ ಬಂದಿದೆ. 1999ರಲ್ಲಿ ಅಮೆರಿಕಾದ ಮಸೂರಿ ನಗರದಲ್ಲಿ ಮಾತನಾಡಿದ ವಿಶ್ವಗುರು ಎರಡನೇ ಜಾನ್ ಪೌಲರು ಹೀಗೆಂದಿದ್ದರು: "ಮಾನವ ಜೀವದ ಘನತೆಯನ್ನು ಎಂದಿಗೂ ತೆಗೆಯಬಾರದು ಎಂಬುದರ ಕುರಿತು ಜಾಗೃತಿ ಮೂಡುತ್ತಿರುವುದು ಭರವಸೆಯ ಸಂಕೇತವಾಗಿದೆ. ಮರಣದಂಡನೆ ರದ್ದು ಆಗಬೇಕು ಎಂಬ ನನ್ನ ಮನವಿಯನ್ನು ನಾನು ಮತ್ತೆ ನವೀಕರಿಸುತ್ತಿದ್ದೇನೆ."

ಸೆಪ್ಟೆಂಬರ್ 2022 ರಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಜಗತ್ತಿನಾದ್ಯಂತ ಮರಣದಂಡನೆ ಶಿಕ್ಷೆ ರದ್ದಾಗುವಂತೆ ಪ್ರಾರ್ಥಿಸುವಂತೆ ಕರೆ ನೀಡಿದ್ದರು.

30 May 2024, 17:47