ಹುಡುಕಿ

ಅಮೇರಿಕಾ ಚುನಾವಣೆಗಳಿಗೂ ಮುಂಚಿತವಾಗಿ ಡೊನಾಲ್ಡ್ ಟ್ರಂಪ್ ಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಎರಡನೇ ಅವಧಿಗೆ ಅಧ್ಯಕ್ಷರಾಗುವ ನಿಟ್ಟಿನಲ್ಲಿ ನವೆಂಬರ್ ತಿಂಗಳಲ್ಲಿ ಚುನಾವಣಾ ಪ್ರಚಾರವನ್ನು ಆರಂಭಿಸಲು ಚಿಂತಿಸಿದ್ದ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಮೇರಿಕಾ ನ್ಯಾಯಾಲಯವು ಶಿಕ್ಷೆಯನ್ನು ಜಾರಿಗೊಳಿಸಿ, ತೀರ್ಪು ನೀಡಿದೆ.

ವರದಿ: ವ್ಯಾಟಿಕನ್ ವರದಿಗಾರ

ವ್ಯವಹಾರ-ವ್ಯಾಪಾರದ ದಾಖಲೆಗಳನ್ನು ನಕಲು ಮಾಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ನ್ಯಾಯಾಲಯದ ಜ್ಯೂರಿ ಅಮೇರಿಕಾದ ಮಾಜಿ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿ, ತೀರ್ಪನ್ನು ಪ್ರಕಟಿಸಿದೆ. ಡೊನಾಲ್ಟ್ ಟ್ರಂಪ್ ಅವರು ೨೦೧೬ ರ ಚುನಾವಣೆಯಲ್ಲಿ ನೀಲಿ ಚಿತ್ರ ತಾರೆಗೆ ಹಣ ಕಳುಹಿಸಿದನ್ನು ಮರೆ ಮಾಚಿದ ಕಾರಣ ಅವರು ವ್ಯವಹಾರ-ವ್ಯಾಪಾರ ದಾಖಲೆಗಳನ್ನು ನಕಲು ಮಾಡಿದ್ದಾರೆ ಎಂಬುದು ಸಾಭೀತಾದ ಹಿನ್ನೆಲೆ ಅವರಿಗೆ ನ್ಯೂಯಾರ್ಕ್ ನ್ಯಾಯಾಲಯವು ಶಿಕ್ಷೆ ನೀಡಿದೆ.

ಆದರೆ ಡೊನಾಲ್ಡ್ ಟ್ರಂಪ್ ತಮ್ಮ ಮೇಲಿನ ಎಲ್ಲಾ ಆರೋಪಗಳು ಸುಳ್ಳು ಎಂದು ಹೇಳಿದ್ದು, ಅದನ್ನು ನಿರಾಕರಿಸಿದ್ದಾರೆ.

ಶಿಕ್ಷೆಯ ಜೊತೆಗೆ ಟ್ರಂಪ್ ಅವರು ದಂಡವನ್ನೂ ಸಹ ಕಟ್ಟಬೇಕಾಗಿದ್ದು, ಅವರ ಶಿಕ್ಷೆಯ ಪ್ರಮಾಣವನ್ನು ಜುಲೈ ೧೧ ರಂದು ಪ್ರಕಟಿಸುವುದಾಗಿ ನ್ಯಾಯಾಲಯವು ಹೇಳಿದೆ.

31 May 2024, 16:54