ಪ್ರಮುಖ ಜಾ ಕ್ರಾಸಿಂಗ್ ಅನ್ನು ಮರುಸ್ಥಾಪಿಸಿದ ಇಸ್ರೇಲ್
ಹಮಾಸ್ ರಾಕೆಟ್ ದಾಳಿಯ ಎರಡು ದಿನಗಳ ನಂತರ ಇಸ್ರೇಲ್ ಗಾಜಾಕ್ಕೆ ಪ್ರವೇಶ ಕಲ್ಪಿಸುವ ಬಹುಮುಖ್ಯ ಕ್ರಾಸಿಂಗ್'ಗಳ ಪೈಕಿ ಒಂದನ್ನು ಮರುಸ್ಥಾಪಿಸುವುದಾಗಿ ಹೇಳಿದೆ.
ವರದಿ: ನೇಥನ್ ಮೊರ್ಲೆ, ಅಜಯ್ ಕುಮಾರ್
ಹಮಾಸ್ ರಾಕೆಟ್ ದಾಳಿಯ ನಂತರ ಇಸ್ರೇಲ್ ಸರ್ಕಾರವು ಮಾನವೀಯ ನೆರವನ್ನು ನೀಡಲು ಪ್ರವೇಶಕ್ಕಾಗಿ ಮುಖ್ಯವಾದ ಹಾದಿಯೊಂದನ್ನು ತೆರೆಯುವುದಾಗಿ ಹೇಳಿದೆ.
ಸರ್ಕಾರದ ಹೇಳಿಕೆಯ ಪ್ರಕಾರ ಕಾರೆಮ್ ಶಾಲೋಮ್ ಅನ್ನು ಮಾನವೀಯ ನೆರವನ್ನು ಕಳುಹಿಸಲು ತೆರೆಯುವುದಾಗಿ ಹೇಳಿದೆ.
ಇದೇ ವೇಳೆ ಇಸ್ರೇಲ್ ದೇಶವು ದಕ್ಷಿಣ ಗಾಜಾದ ಮೇಲೆ ದಾಳಿಯನ್ನು ಮುಂದುವರೆಸಿದೆ. ರಾಫಾ ನಗರವನ್ನು ಅದಾಗಲೇ ಇಸ್ರೇಲ್ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ಪ್ಯಾಲೆಸ್ತೇನಿಯನ್ ಮೆಡಿಕಲ್ ಸಿಬ್ಬಂಧಿಯ ಪ್ರಕಾರ ಈ ದಾಳಿಯಲ್ಲಿ ಒಂದೇ ಕುಟುಂಬದ ಏಳು ಜನರು ಮೃತ ಹೊಂದಿದ್ದಾರೆ.
ನ್ಯೂಯಾರ್ಕ್ ನಗರದಲ್ಲಿ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಅಂತೋನಿಯೋ ಗುಟೇರಸ್ ಅವರು ಹಮಾಸ್ ಹಾಗೂ ಇಸ್ರೇಲ್ "ರಾಜಕೀಯ ಧೈರ್ಯವನ್ನು ಪ್ರದರ್ಶಿಸಿ, ಕದನ ವಿರಾಮವನ್ನು ಘೋಷಿಸಬೇಕು" ಎಂದು ಹೇಳಿದ್ದಾರೆ.
08 May 2024, 17:47