ರಾಫಾ ಕ್ರಾಸಿಂಗ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಇಸ್ರೇಲಿ ಪಡೆಗಳು
ವರದಿ: ನೇಥನ್ ಮೊರ್ಲೆ, ಅಜಯ್ ಕುಮಾರ್
ಸುಮಾರು ಒಂದು ಮಿಲಿಯನ್ ನಾಗರೀಕರು ವಾಸಿಸುತ್ತಿರುವ ದಕ್ಷಿಣ ಗಾಜಾದಲ್ಲಿನ ರಾಫಾ ನಗರದ ಕ್ರಾಸಿಂಗ್ ಅನ್ನು ಇಸ್ರೇಲಿ ಪಡೆಗಳು ಕಾರ್ಯಾಚರಣೆಯ ಭಾಗವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ಹೇಳಲಾಗುತ್ತಿದೆ.
ವರದಿಗಳ ಪ್ರಕಾರ ಸದ್ಯಕ್ಕೆ ರಾಫಾ ಕ್ರಾಸಿಂಗ್ ಹಾಗೂ ಕಾರೆಮ್ ಶಾಲೋಮ್ ಅನ್ನು ಮುಚ್ಚಲಾಗಿದೆ. ಇದಕ್ಕೂ ಮುಂಚಿತವಾಗಿ ಪ್ಯಾಲೆಸ್ತೇನಿನ ಅಧಿಕೃತ ಸುದ್ದಿ ಏಜೆನ್ಸಿ ವಾಫಾ ಪ್ರಕಾರ, ರಾಫಾ ಪ್ರದೇಶದಲ್ಲಿ ಇಸ್ರೇಲ್ ದಾಳಿಯ ಪರಿಣಾಮ ಸುಮಾರು ಇಪ್ಪತ್ತಕ್ಕೂ ಅಧಿಕ ನಾಗರೀಕರು ಹತ್ಯೆಯಾಗಿದ್ದಾರೆ.
ಮಾನವ ನೆರವು ಗುಂಪುಗಳು ಇದನ್ನು ವಿರೋಧಿಸಿದ್ದು, ವಿಶ್ವಸಂಸ್ಥೆಯ ಮುಖ್ಯಸ್ಥ ಅಂತೋನಿಯೋ ಗುಟೇರಸ್ ಅವರು ಇಸ್ರೇಲ್ ರಾಫಾ ನಗರದ ಕ್ರಾಸಿಂಗ್ ಅನ್ನು ಮುಚ್ಚಿರುವುದನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದು ಹೇಳಿದ್ದಾರೆ.
ಈಜಿಪ್ಟ್ ಮಧ್ಯವರ್ತಿಗಳು ಹೇಳಿದ ಷರತ್ತುಗಳಿಗೆ ಹಮಾಸ್ ಒಪ್ಪಿಕೊಳ್ಳುತ್ತದೆ ಎಂದು ಹೇಳಿದರೂ ಸಹ ಇದನ್ನು ಇಸ್ರೇಲ್ "ನಮ್ಮ ಮೂಲ ಬೇಡಿಕೆಗಳಿಗಿಂತ ದೂರವಿದೆ" ಎಂದು ಹೇಳಿ ತಳ್ಳಿಹಾಕಿದೆ.