ಹುಡುಕಿ

FILE PHOTO: Palestinians carry bags of flour they grabbed from an aid truck near an Israeli checkpoint in Gaza City FILE PHOTO: Palestinians carry bags of flour they grabbed from an aid truck near an Israeli checkpoint in Gaza City 

ಗಾಜ ಯುದ್ಧದ ಹಿನ್ನೆಲೆ: ಇಸ್ರೇಲ್ ದೇಶದೊಂದಿಗೆ ವ್ಯಾಪಾರ ಸಂಬಂಧವನ್ನು ಅಮಾನತ್ತು ಪಡಿಸಿದ ಟರ್ಕಿ

ಪವಿತ್ರ ನಾಡಿನಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಟರ್ಕಿ ದೇಶವು ಇಸ್ರೇಲ್ ದೇಶದೊಂದಿಗೆ ಬಂದಿದ್ದ ವ್ಯಾಪಾರ ಸಂಬಂಧವನ್ನು ಅಮಾನತ್ತು ಪಡಿಸಿದೆ.

ವರದಿ: ನೇತನ್ ಮೊರ್ಲೆ, ಅಜಯ್ ಕುಮಾರ್

ಇಸ್ರೇಲ್ ದೇಶವು ಗಾಜಾಪ್ರದೇಶದಲ್ಲಿ ಯುದ್ಧದ ಕಾರ್ಯಾಚರಣೆಯನ್ನು ನಡೆಸುತ್ತಿರುವ ಪರಿಣಾಮ ತರ್ಕಿ ದೇಶವು ಇಸ್ರೇಲ್ ದೇಶದೊಂದಿಗೆ ತನ್ನ ವ್ಯಾಪಾರ ಸಂಬಂಧವನ್ನು ಅಮಾನತ್ತು ಮಾಡಿದೆ.

ಇಸ್ರೇಲ್ ದೇಶವು ಗಾಜಾಪ್ರದೇಶಕ್ಕೆ ಸಾಕಷ್ಟು ಮಾನವೀಯ ನೆರವನ್ನು ನೀಡಲು ಅವಕಾಶವನ್ನು ಕಲ್ಪಿಸುವವರೆಗೂ ಈ ಅಮಾನತ್ತು ಜಾರಿಯಲ್ಲಿರಲಿದೆ ಎಂದು ಟರ್ಕಿ ದೇಶದ ವ್ಯಾಪಾರ ವಹಿವಾಟು ಸಚಿವಾಲಯವು ತಿಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಇಸ್ರೇಲ್ ದೇಶದ ವಿದೇಶಾಂಗ ವ್ಯವಸಾಯಗಳ ಸಚಿವರು, ಟರ್ಕಿ ದೇಶದ ಈ ನಡೆಯನ್ನು ಖಂಡಿಸಿ, ಅಧ್ಯಕ್ಷ ಎರ್ಡೊಗಾನ್ ಅವರು "ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.

2023ರಲ್ಲಿ ಎರಡು ದೇಶಗಳ ನಡುವಿನ ವ್ಯಾಪಾರಬಹಿವಾಟುಗಳ ಮೌಲ್ಯ ಸುಮಾರು 7 ಬಿಲಿಯನ್ ಯು ಎಸ್ ಡಾಲರ್ಗಳಷ್ಟಿದೆ.

ಅಮೆರಿಕ ದೇಶದಲ್ಲಿನ ಟರ್ಕಿಶ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು, ಗಾಜಾದ ಮೇಲೆ ಇಸ್ರೇಲ್ ದೇಶವು ನಡೆಸುತ್ತಿರುವ ದಾಳಿಗಳನ್ನು ಖಂಡಿಸಿ, ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಾರೆ.

7ನೇ ತಿಂಗಳಿಗೆ ಕಾಲಿಟ್ಟಿರುವ ಯುದ್ಧವು ಹೀಗೆ ಮುಂದುವರೆದರೆ, ಇಲ್ಲಿನ ಬಡತನದ ಪ್ರಮಾಣ ಶೇಕಡ 58 ರಷ್ಟು ತಲುಪಿ, ಇದು ಕೆಲವೇ ದಿನಗಳಲ್ಲಿ ಒಂದು ಪಾಯಿಂಟ್ 70 ಮಿಲಿಯನ್ ಜನರು ಬಡತನ ರೇಖೆಗೆ ತಳ್ಳಲ್ಪಡುತ್ತಾರೆ.

03 May 2024, 17:28