ಹುಡುಕಿ

ಪ್ಯಾಲೆಸ್ತೀನ್ ದೇಶದ ಮಾನ್ಯತೆಯನ್ನು ಗುರುತಿಸಲಿರುವ ನಾರ್ವೆ, ಐರ್ಲ್ಯಾಂಡ್ ಮತ್ತು ಸ್ಪೇನ್

ಮುಂದಿನ ವಾರ ಪ್ಯಾಲೆಸ್ತೀನ್ ಅನ್ನು ಅಧಿಕೃತ ದೇಶವನ್ನಾಗಿ ಗುರುತಿಸಲಾಗುವುದು ಎಂದು ನಾರ್ವೆ, ಐರ್ಲ್ಯಾಂಡ್ ಮತ್ತು ಸ್ಪೇನ್ ದೇಶಗಳು ಹೇಳಿವೆ.

ವರದಿ: ನೇಥನ್ ಮೊರ್ಲೆ, ಅಜಯ್ ಕುಮಾರ್

ಮುಂದಿನ ವಾರ ಪ್ಯಾಲೆಸ್ತೇನ್ ಅನ್ನು ನಾರ್ವೆ, ಐರ್ಲ್ಯಾಂಡ್ ಮತ್ತು ಸ್ಪೇನ್ ದೇಶಗಳು ಅಧಿಕೃತ ಸರ್ಕಾರವನ್ನಾಗಿ ಗುರುತಿಸಲಿವೆ ಎಂದು ವರದಿಯಾಗಿದೆ.

ನಾರ್ವೆ ಪ್ರಧಾನಮಂತ್ರಿ ಜೋನಾಸ್ ಘರ್ ಸ್ಟೋರ್ ಅವರು ಹೇಳುವ ಪ್ರಕಾರ ಇದು ಸಂಕಷ್ಟಕರ ಸಂಘರ್ಷದಲ್ಲಿ ಸೋಲುತ್ತಿರುವ ಪ್ಯಾಲೆಸ್ತೀಯನ್ನರಿಗೆ ಸಹಯಾ ಮಾಡುವ ಕ್ರಮವಾಗಿದೆ.

ಇದೇ ಸಮಯದಲ್ಲಿ ಸ್ಪೇನ್ ಪ್ರಧಾನಮಂತ್ರಿ ಪೆದ್ರೊ ಸಾಂಚೆಸ್ ಅವರು ಈ ಕುರಿತು ಸಂಸತ್ತಿನಲ್ಲಿ ಘೋಷಣೆಯನ್ನು ಮಾಡಿದ್ದಾರೆ.

ಮುಂದಿನ ವಾರಗಳಲ್ಲಿ ಈ ಪ್ರಮುಖ ಹೆಜ್ಜೆಯನ್ನು ಬೆಂಬಲಿಸಲು ಇನ್ನೂ ಅನೇಕ ದೇಶಗಳು ಮುಂದೆ ಬರಲಿವೆ ಎಂದು ಐರ್ಲ್ಯಾಂಡ್ ಪ್ರಧಾನಮಂತ್ರಿ ಸೈಮನ್ ಹ್ಯಾರಿಸ್ ಅವರು ಹೇಳಿದ್ದಾರೆ. 

ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಇಸ್ರೇಲ್ ನಾರ್ವೆ, ಐರ್ಲ್ಯಾಂಡ್ ಹಾಗೂ ಸ್ಪೇನ್ ದೇಶಗಳಿಗೆ ತಮ್ಮ ರಾಯಭಾರಿಗಳನ್ನು ವಾಪಾಸ್ಸು ಕರೆಸಿಕೊಂಡಿದೆ. "ಈ ಮೂರು ದೇಶಗಳಿಗೆ ನಾನು ಎಚ್ಚರಿಕೆಯನ್ನು ನೀಡುತ್ತಿದ್ದೇನೆ. ಏಕೆಂದರೆ ಇಸ್ರೇಲ್ ಸ್ವಾಯತ್ತತೆಗೆ ಧಕ್ಕೆ ತರುವ ಯಾವುದೇ ಕ್ರಮದ ವಿರುಧ್ಧ ಹೋಗಲು ಹೇಸುವುದಿಲ್ಲ" ಎಂದು ಇಸ್ರೇಲ್ ಎಚ್ಚರಿಕೆ ನೀಡಿದೆ.

    

 

22 May 2024, 17:36