ನೂತನ ಅಧ್ಯಕ್ಷರನ್ನು ಚುನಾಯಿಸಿದ ಪನಾಮ
ವರದಿ: ಜೇಮ್ಸ್ ಬ್ಲಿಯರ್ಸ್, ಅಜಯ್ ಕುಮಾರ್
ಪನಾಮ ದೇಶದ ಮೂರು ಮಿಲಿಯನ್ ಮತದಾರರು ನೀಡಿದ ಶೇ. 77 ಪ್ರತಿಶತ ಮತಗಳಲ್ಲಿ, ಸುಮಾರು ತೊಂಬತ್ತರಷ್ಟು ಮತಗಳನ್ನು ಪಡೆದು ಜೋಸ್ ರೌಲ್ ಮುಲಿನೋ ಅವರು ಅಧ್ಯಕ್ಷೀಯ ಚುನಾವಣೆಯನ್ನು ಗೆದ್ದಿದ್ದಾರೆ. 64 ವರ್ಷದ ಜೋಸ್ ರೌಲ್ ಮುಲಿನೋ ಹಿಂದೆ ರಕ್ಷಣಾ ಸಚಿವರಾಗಿ, ಕಾನೂನು ಸಚಿವರಾಗಿ, ಹಾಗೂ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಅವರ ವಿರುದ್ಧದ ಮೂರು ಅಭ್ಯರ್ಥಿಗಳು ಸೋಲನ್ನು ಒಪ್ಪಿಕೊಂಡಿದ್ದು, ಉತ್ತಮ ವಿರೋಧ ಪಕ್ಷಗಳಾಗಿ ಕಾರ್ಯನಿರ್ವಹಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಜುಲೈ 1 ರಂದು ಜೋಸರ್ ರೌಲ್ ಮುಲೀನೋ ಪನಾಮದ ಅಧ್ಯಕ್ಷರಾಗಿ ಪ್ರಮಾಣ ವಚನವನ್ನು ಕೈಗೊಳ್ಳಲಿದ್ದಾರೆ.
ಮಾಜಿ ಅಧ್ಯಕ್ಷ ರಿಕಾರ್ಡೋ ಮಾರ್ಟಿನೆಲ್ಲಿ ಈ ಪಕ್ಷದ ಮೂಲ ಅಭ್ಯರ್ಥಿಯಾಗಿದ್ದು, ಹಣ ದುರುಪಯೋಗ ಪ್ರಕರಣದಲ್ಲಿ ಸಿಲುಕಿದ ಪರಿಣಾಮ, ಅವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನ್ಯಾಯಾಲಯವು ತಡೆ ನೀಡಿತ್ತು.
"ಪನಾಮ ದೇಶವನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ನನ್ನ ಹೆಗಲೇರಿದೆ. ಆರ್ಥಿಕತೆ ಉತ್ತಮವಾಗಿದ್ದು, ಜಡ ಸ್ಥಿತಿಯಲ್ಲಿದೆ. ಪಿಂಚಣಿ ವ್ಯವಸ್ಥೆಯನ್ನು ಸರಿಪಡಿಸಬೇಕಿದೆ. ದೇಶದಲ್ಲಿನ ಭ್ರಷ್ಟಾಚಾರವನ್ನು ಹೋಗಲಾಡಿಸಿ, ನಮ್ಮ ದೇಶಕ್ಕೆ ಉತ್ತಮ ಭವಿಷ್ಯವನ್ನು ರೂಪಿಸಬೇಕಿದೆ." ಎಂದು ನೂತನ ಚುನಾಯಿತ ಅಧ್ಯಕ್ಷ ಮುಲಿನೋ ಹೇಳಿದ್ದಾರೆ.