ಹುಡುಕಿ

ಪಪುವಾ ನ್ಯೂಗಿನಿ ಭೂಕುಸಿತ: ನೂರಾರು ಜನರು ಮೃತ ಹೊಂದಿರುವ ಕುರಿತು ಶಂಕೆ

ಪಪುವಾ ನ್ಯೂಗಿನಿ ದೇಶದಲ್ಲಿ ಭೂ ಕುಸಿತ ಉಂಟಾಗಿದ್ದು, ಇದರ ಪರಿಣಾಮ ಒಂದು ಗ್ರಾಮದ ನೂರಾರು ಜನರು ಮಣ್ಣಿನಡಿ ಸಿಲುಕಿ ಮೃತಹೊಂದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ದೇಶಕ್ಕೆ ಪೋಪ್ ಫ್ರಾನ್ಸಿಸ್ ಅವರು ಸೆಪ್ಟೆಂಬರ್ ತಿಂಗಳಲ್ಲಿ ಭೇಟಿ ನೀಡಲಿದ್ದಾರೆ.

ವರದಿ: ಲಿಂಡಾ ಬೋರ್ಡೋನಿ, ಅಜಯ್ ಕುಮಾರ್

ಪಪುವಾ ನ್ಯೂಗಿನಿ ದೇಶದಲ್ಲಿನ ಪವರ್ತಮಯ ಪ್ರದೇಶದಲ್ಲಿರುವ ಕಾವೊಕಲಾಮ್ ಎಂಬ ಹಳ್ಳಿಯಲ್ಲಿ ಭೂ ಕುಸಿತ ಉಂಟಾಗಿದ್ದು, ಅದರ ಅವಶೇಷಗಳಡಿ ಸಿಲುಕಿ ನೂರಾರು ಜನರು ಮೃತ ಹೊಂದಿರುವ ಕುರಿತು ಶಂಕೆ ವ್ಯಕ್ತವಾಗಿದೆ. 

ಹಳ್ಳಿಯ ಸುತ್ತಲಿನ ಪರ್ವತಗಳಿಂದ ಉಂಟಾಗಿರುವ ಭೂ ಕುಸಿತವು ಒಮ್ಮೆಲೆ ಅಪ್ಪಳಿಸಿದ ಕಾರಣ, ನೂರಾರು ಜನರು ಮೃತ ಹೊಂದಿರುವ ಕುರಿತು ಶಂಕೆ ಉಂಟಾಗಿದೆ. 

ಪಪುವಾ ನ್ಯೂಗಿನಿ ದೇಶದ ಪ್ರಧಾನ ಮಂತ್ರಿಯವರು ಜನರನ್ನು ರಕ್ಷಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ರಕ್ಷಣಾ ಪ್ರಕ್ರಿಯೆಗೆ ಸೇನೆಯೂ ಸಹ ಸಕ್ರಿಯವಾಗಿ ಪಾಲ್ಗೊಂಡಿದೆ.

ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಪೋಪ್ ಫ್ರಾನ್ಸಿಸ್ ಅವರು ಈ ದೇಶಕ್ಕೆ ಭೇಟಿ ನೀಡಲಿದ್ದಾರೆ. ಈ ದೇಶದಲ್ಲಿ ಬಹುತೇಕರು ಕೃಷಿಕರಾಗಿದ್ದು, ಇಲ್ಲಿ ಸುಮಾರು ೮೦೦ ಭಾಷೆಗಳಿವೆ.  

 

24 May 2024, 17:41