ರಾಜಧಾನಿ ಬ್ರಾಟಿಸ್ಲಾವದ ಹೊರಗೆ ಸ್ಲೊವಾಕಿಯಾ ಪ್ರಧಾನಿಯ ಹತ್ಯೆಗೆ ಯತ್ನ
ವರದಿ: ಸ್ಟೆಫಾನ್ ಜೆ. ಬಾಸ್, ಅಜಯ್ ಕುಮಾರ್
ಸ್ಲೊವಾಕಿಯಾ ದೇಶದ ರಾಜಧಾನಿ ಬ್ರಾಟಿಸ್ಲಾವದಲ್ಲಿ ದೇಶದ ಪ್ರಧಾನಿ ರಾಬರ್ಟ್ ಪೀಕೋ ಅವರ ಮೇಲೆ ಹತ್ಯೆ ಯತ್ನ ನಡೆದಿದ್ದು, ಹಂತಕ ಅವರ ಮೇಲೆ ಗುಂಡು ಹಾರಿಸಿದ ಪರಿಣಾಮ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜನರ ಮಧ್ಯೆ ಮಾತುಕತೆ ನಡೆಸುತ್ತಿದ್ದ ಪ್ರಧಾನಮಂತ್ರಿಯನ್ನು ಗುರಿಮಾಡಿ ಗುಂಡು ಹಾರಿಸಿದ ಹಂತಕನನ್ನು ಪೊಲೀಸರು ಸೆದೆಬಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆಯ ಪ್ರಕಾರ ಮೊದಲ ಬಾರಿಗೆ ಎರಡರಿಂದ ಮೂರು ಬಾರಿ ಗುಂಡಿನ ಶಬ್ಧ ಕೇಳಿಸಿದ ತಕ್ಷಣವೇ ಪ್ರಧಾನಮಂತ್ರಿ ಅವರ ಮೇಲೆ ಗುಂಡು ಹಾರಿಸಲಾಗಿದ್ದು, ಆ ಸಂದರ್ಭದಲ್ಲಿ ಅವರು ಸರ್ಕಾರಿ ಸಭೆಯೊಂದರಲ್ಲಿ ಭಾಗವಹಿಸಿದ ನಂತರ, ಆಚೆ ಬಂದು ಜನರ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಅವರ ಮೇಲೆ ಹತ್ಯೆ ಯತ್ನ ನಡೆದಿದ್ದು, ಅವರನ್ನು ಹತ್ತಿರವಿದ್ದ ಕಾರಿನೊಳಗೆ ಸುರಕ್ಷಿತವಾಗಿ ಇರಿಸುವ ಪ್ರಯತ್ನವನ್ನು ಅಂಗರಕ್ಷಕರು ಮಾಡಿದ್ದಾರೆ. ತದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅವರು ಚುನಾವಣೆಯ ನಂತರ ಅಧಿಕಾರಕ್ಕೆ ಬಂದಿದ್ದರು. ಅಧಿಕಾರ ಸ್ವೀಕರಿಸಿದ ತಕ್ಷಣ ಉಕ್ರೇನ್ ದೇಶಕ್ಕೆ ಮಿಲಿಟರಿ ನೆರವನ್ನು ನಿಲ್ಲಿಸಿದ್ದು ಅವರು ಕೈಗೊಂಡ ಪ್ರಮುಖ ನಿರ್ಧಾರಗಳಲ್ಲೊಂದಾಗಿತ್ತು.