TOPSHOT-BURKINA-CONFLICT-UNREST-DISPLACED

ಬರ್ಕಿನ ಫಾಸೋ: ವಿಶ್ವದ ಅತ್ಯಂತ ನಿರ್ಲಕ್ಷಿತ ನಿರಾಶ್ರಿತ ಬಿಕ್ಕಟ್ಟು ಹೊಂದಿರುವ ದೇಶ

ನಾರ್ವೇಜಿಯನ್ ನಿರಾಶ್ರಿತರ ಸಮಿತಿಯು ಬರ್ಕೀನ ಫಾಸೋ ದೇಶವನ್ನು ವಿಶ್ವದ ಅತ್ಯಂತ ನಿರ್ಲಕ್ಷಿತ ನಿರಾಶ್ರಿತ ಬಿಕ್ಕಟ್ಟನ್ನು ಹೊಂದಿರುವ ದೇಶವೆಂದು ಎರಡನೇ ಬಾರಿಗೆ ಕ್ರಮವಾಗಿ ಘೋಷಿಸಿದೆ.

ವರದಿ: ಜೆಸ್ಸಿಕಾ ಜಯಮರಿದಾಸ್, ಅಜಯ್ ಕುಮಾರ್

ನಾರ್ವೇಜಿಯನ್ ನಿರಾಶ್ರಿತರ ಸಮಿತಿಯ ವಾರ್ಷಿಕ ವರದಿಯ ಪ್ರಕಾರ ಕ್ರಮವಾಗಿ 2ನೇ ಬಾರಿಗೆ ಬರ್ಕೀನ ಫಾಸೋ ದೇಶವನ್ನು ವಿಶ್ವದ ಅತ್ಯಂತ ನಿರ್ಲಕ್ಷಿತ ನಿರಾಶ್ರಿತ ಬಿಕ್ಕಟ್ಟನ್ನು ಹೊಂದಿರುವ ದೇಶವೆಂದು ಘೋಷಿಸಲಾಗಿದೆ.

ಪಶ್ಚಿಮ ಆಫ್ರಿಕಾ ಖಂಡದ ಈ ದೇಶದಲ್ಲಿ ಸದ್ಯಕ್ಕೆ ಎರಡು ಮಿಲಿಯನ್ ನಿರಾಶ್ರಿತರು ವಾಸಿಸುತ್ತಿದ್ದು, ಇವರಲ್ಲಿ ಬಹುತೇಕರಿಗೆ ಯಾವುದೇ ರೀತಿಯ ನೆರವು ಸಿಗುತ್ತಿಲ್ಲ ಎಂದು ವರದಿಯಾಗಿದೆ.

ಪ್ರತಿ ವರ್ಷ ಈ ಸಮಿತಿಯು ವಿಶ್ವದಲ್ಲಿ ಅತ್ಯಂತ ನಿರ್ಲಕ್ಷಕ್ಕೆ ಒಳಗಾಗಿ ನಿರಾಶ್ರಿತರಾಗಿರುವ ಹತ್ತು ಪ್ರದೇಶಗಳನ್ನು ಗುರುತಿಸಿ ಘೋಷಿಸುತ್ತದೆ. ಹೀಗೆ ಈ ಸಮಿತಿಯು ಒಂದು ಪ್ರದೇಶವನ್ನು ನಿರ್ಲಕ್ಷಿತ ನಿರಾಶ್ರಿತ ಪ್ರದೇಶ ಎಂದು ಘೋಷಿಸುವ ಮಾನದಂಡಗಳು ಹೀಗಿವೆ: ಮಾನವೀಯ ನೆರವಿನ ಕೊರತೆ, ಅಂತರಾಷ್ಟ್ರೀಯ ರಾಜಕೀಯ ಹಾಗೂ ರಾಜ್ಯ ತಾಂತ್ರಿಕ ಉಪಕ್ರಮಗಳ ಕೊರತೆ, ಮತ್ತು ಮಾಧ್ಯಮ ಗಮನ ಗಮನಹರಿಸದಿರುವುದು.

ಈ ದೇಶದಲ್ಲಿ ಅನೇಕರು ಯುದ್ಧದ ಸಂತ್ರಸ್ತರಾಗಿದ್ದು, ಇತ್ತೀಚಿಗಷ್ಟೇ ಸುಮಾರು 8000 ಜನ ಇದರಿಂದ ಮರಣವನ್ನು ಹೊಂದಿದ್ದಾರೆ. ದಿನೇ ದಿನೇ ಎಲ್ಲಿಗೆ ಮಾನವೀಯ ನೆರವನ್ನು ಸಹ ಕಳುಹಿಸಲು ಕಷ್ಟವಾಗುತ್ತಿದ್ದು, ಬಹುತೇಕ ಜನರು ಇದರಿಂದ ವಂಚಿತರಾಗುತ್ತಿದ್ದಾರೆ.

04 June 2024, 17:34