ಪೋಪ್ ಫ್ರಾನ್ಸಿಸ್: ಪ್ರಭು ನಮ್ಮ ಹೃದಯದ ಬಾಗಿಲುಗಳನ್ನು ತೆರೆಯಬೇಕು
ಸಂತರುಗಳಾದ ಪೇತ್ರ ಹಾಗೂ ಪೌಲರ ಹಬ್ಬದಂದು ಪೋಪ್ ಫ್ರಾನ್ಸಿಸ್ ಅವರು ಪ್ರಭೋದನೆಯಲ್ಲಿ 'ಬಾಗಿಲು"ಗಳ ಕುರಿತು ಚಿಂತನೆಯನ್ನು ನಡೆಸಿದ್ದಾರೆ.
ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್
ಸಂತರುಗಳಾದ ಪೇತ್ರ ಹಾಗೂ ಪೌಲರ ಹಬ್ಬದಂದು ವ್ಯಾಟಿಕನ್ ನಗರದಲ್ಲಿ ಬಲಿಪೂಜೆಯನ್ನು ಅರ್ಪಿಸಿದ ಪೋಪ್ ಫ್ರಾನ್ಸಿಸ್ ಅವರು, ತಮ್ಮ ಪ್ರಭೋದನೆಯಲ್ಲಿ "ಬಾಗಿಲುಗಳ" ಕುರಿತು ಚಿಂತನೆಯನ್ನು ವ್ಯಕ್ತಪಡಿಸಿದ್ದಾರೆ.
ಸಂತ ಪೇತ್ರರು ಬಂಧೀಖಾನೆಯಲ್ಲಿ ಬಂಧಿಯಾಗಿದ್ದಾಗ ಅವರಿಗೆ ತೆರೆಯಲ್ಪಟ್ಟ ಬಾಗಿಲುಗಳು ಹಾಗೂ ಸಂತ ಪೌಲರು ದಮಾಸ್ಕಸ್'ಗೆ ಹೊರಟಿದ್ದ ದಾರಿಯಲ್ಲಿ ಮನಪರಿವರ್ತನೆಯ ಮೂಲಕ ಅವರಿಗೆ ತೆರೆಯಲ್ಪಟ್ಟ ಬಾಗಿಲುಗಳು ಹೊಸ ಹಾದಿಯನ್ನು ತೋರಿಸಿವೆ. ಅದೇ ರೀತಿ ನಮ್ಮ ಬದುಕಿನಲ್ಲೂ ಸಹ ಪ್ರಭು ಕ್ರಿಸ್ತರು ಬಂದು ನಮ್ಮ ಹೃದಯದ ಬಾಗಿಲುಗಳನ್ನು ತೆರೆಯಬೇಕು" ಎಂದು ಅವರು ಹೇಳಿದ್ದಾರೆ.
"ಬದಲಾಗುತ್ತಿರುವ ಈ ಪ್ರಪಂಚದಲ್ಲಿ ಶುಭಸಂದೇಶವನ್ನು ಸಾರುವ ವಿವಿಧ ರೀತಿಗಳನ್ನು ನಾವು ಅರಿತುಕೊಳ್ಳಬೇಕಿದೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು. ಇದೇ ವೇಳೆ ಗುರುಗಳು ಭಕ್ತಾಧಿಗಳ ಹೃದಯದ ಬಾಗಿಲುಗಳನ್ನು ತೆರೆಯುವ ನಿಟ್ಟಿನಲ್ಲಿ ಸಾಧನಗಳಾಗಬೇಕು ಎಂದೂ ಸಹ ಹೇಳಿದರು.
29 June 2024, 15:08